ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ ರೋಡ್ಶೋ ವೇಳೆ ನಡೆದ ಗಲಾಟೆ ವಿಚಾರದ ಕುರಿತಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಮತಾ ಬ್ಯಾನರ್ಜಿ ಕಾರ್ಯವೈಖರಿಯನ್ನು ಕಟುವಾದ ಪದಗಳಲ್ಲಿ ಟೀಕಿಸಿದರು.
ನಾನು ನಿಮಗಿಂತ ವಯಸ್ಸಿನಲ್ಲಿ ಹಾಗೂ ರಾಜಕೀಯ ಅನುಭವದಲ್ಲಿ ಹಿರಿಯನಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸುವುದು ಹೇಗೆ ಎನ್ನುವ ವಿಚಾರ ನನಗೆ ತಿಳಿದಿದೆ ಎಂದು ಮಮತಾ ಬ್ಯಾನರ್ಜಿ ವಿರುದ್ಧ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಮೇ 23ರ ಬಳಿಕ ಮಮತಾ ಬ್ಯಾನರ್ಜಿ ದಿನ ಮುಕ್ತಾಯವಾಗಲಿದೆ. ಎಫ್ಐಆರ್ಗೆ ಭಯಪಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರಳವಾಗಿ ಗೆಲುವು ಸಾಧಿಸಲಿದೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.
ಹೆಚ್ಚಿನ ಓದಿಗಾಗಿ:
ಚೌಕಿದಾರ್ v/s ವಿದ್ಯಾಸಾಗರ್.. ದೀದಿ ನಾಡಿನಲ್ಲಿ ಬಿಜೆಪಿ-ಟಿಎಂಸಿ ಗಲಾಟೆಗೆ ಮತ್ತೊಂದು ಆಯಾಮ!
ನಿನ್ನೆಯ ಗಲಾಟೆ ವೇಳೆ ನನ್ನನ್ನು ಪಾರು ಮಾಡುವಲ್ಲಿ ಸಹಕರಿಸಿದ ಸಿಆರ್ಪಿಎಫ್ ಯೋಧರಿಗೆ ಈ ವೇಳೆ ಅಮಿತ್ ಶಾ ಧನ್ಯವಾದ ತಿಳಿಸಿದ್ದಾರೆ.
ದೇಶದಲ್ಲಿ ಭಾರತೀಯ ಜನತಾ ಪಾರ್ಟಿ 300ಕ್ಕೂ ಹೆಚ್ಚಿನ ಸ್ಥಾನಗಳನ್ನು ಪಡೆದು ಮತ್ತೆ ಅಧಿಕಾರ ಪಡೆಯಲಿದೆ ಎಂದು ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಹೊರತಾಗಿ ಬೇರಾವ ರಾಜ್ಯದಲ್ಲೂ ಗಲಾಟೆ ನಡೆಯುತ್ತಿಲ್ಲ. ಯಾಕೆಂದರೆ ಅಲ್ಲಿ ಟಿಎಂಸಿ ಇಲ್ಲ. ಎಲ್ಲ ಗಲಾಟೆಗೂ ಟಿಎಂಸಿಯೇ ಕಾರಣ ಎಂದು ಅಮಿತ್ ಶಾ ನೇರವಾಗಿ ಆರೋಪ ಮಾಡಿದ್ದಾರೆ.
ಎಫ್ಐಆರ್ ದಾಖಲು:
ರೋಡ್ಶೋ ವೇಳೆ ನಡೆದ ಗಲಾಟೆ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜೊತೆಗೆ ಹಲವು ಬಿಜೆಪಿ ಕಾರ್ಯಕರ್ತರನ್ನು ಗಲಾಟೆ ಸಂಬಂಧ ಪೊಲೀಸರು ವಶಕ್ಕೆ ಪಡೆದಿದ್ದಾರೆ.