ಕರ್ನಾಟಕ

karnataka

ETV Bharat / briefs

ಗುಡ್​ನ್ಯೂಸ್​..! ಕೊನೇ ಕ್ಷಣದಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡಿದ್ರೆ ಸಿಗುತ್ತೆ ಭಾರಿ ಡಿಸ್ಕೌಂಟ್ - ಡಿಸ್ಕೌಂಟ್

ಇಂದು ನಡೆದಿದ್ದ ವಿಮರ್ಶಾ ಸಭೆಯಲ್ಲಿ ಏರ್ ಇಂಡಿಯಾ ಸಂಸ್ಥೆ ರಿಯಾಯಿತಿ ಬಗೆಗಿನ ಮಹತ್ವದ ನಿರ್ಧಾರ ಕೈಗೊಂಡಿದೆ.

ಏರ್ ಇಂಡಿಯಾ

By

Published : May 10, 2019, 5:40 PM IST

ಮುಂಬೈ:ನೀವೇನಾದ್ರೂ ಕೊನೇ ಕ್ಷಣದಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡ್ತಿದ್ದೀರಾ..? ವಿಶೇಷವಾಗಿ ಏರ್ ಇಂಡಿಯಾನೇ ನಿಮ್ಮ ಆಯ್ಕೆ ಆಗಿದ್ದಲ್ಲಿ ಇಲ್ಲೊಂದು ಖುಷಿಯ ವಿಚಾರ ಇದೆ.

ವಿಮಾನ ಹೊರಡುವ ಮೂರು ಗಂಟೆಯ ಮುಂಚಿತವಾಗಿ ಮಾಡುವ ಎಲ್ಲ ದೇಶೀಯ ವಿಮಾನಗಳ ಬುಕಿಂಗ್​ಗಳಿಗೂ ಶೇ.40ರಷ್ಟು ರಿಯಾಯಿತಿ ನೀಡಲಿದ್ದೇವೆ ಎಂದು ಏರ್ ಇಂಡಿಯಾ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಇಂದು ನಡೆದಿದ್ದ ವಿಮರ್ಶಾ ಸಭೆಯಲ್ಲಿ ಏರ್ ಇಂಡಿಯಾ ಸಂಸ್ಥೆ ರಿಯಾಯಿತಿ ಬಗೆಗಿನ ಮಹತ್ವದ ನಿರ್ಧಾರ ಕೈಗೊಂಡಿದೆ.

ತುರ್ತು ಸಂದರ್ಭದಲ್ಲಿ ಫ್ಲೈಟ್ ಟಿಕೆಟ್ ಬುಕ್ ಮಾಡುವವರಿಗೆ ಏರ್ ಇಂಡಿಯಾದ ನೂತನ ರಿಯಾಯಿತಿ ವ್ಯವಸ್ಥೆ ಸಾಕಷ್ಟು ಪ್ರಯೋಜನ ನೀಡಲಿದೆ.

ABOUT THE AUTHOR

...view details