ಕರ್ನಾಟಕ

karnataka

ETV Bharat / briefs

ಬಜೆಟ್ 2019: ಕೃಷಿ ಕ್ಷೇತ್ರದ ಈ ಸವಾಲುಗಳಿಗೆ ಪರಿಹಾರ ಅತ್ಯಗತ್ಯ

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹಲವಾರು ಸವಾಲುಗಳಿವೆ. ಇವುಗಳ ಪರಿಹಾರಕ್ಕೆ ಈ ಬಾರಿಯ ಬಜೆಟ್​ನಲ್ಲಿ ಏನೆಲ್ಲಾ ಕೊಡುಗೆಗಳು ಸಿಗಬಹುದು ಅನ್ನವ ಕುತೂಹಲ ಸೃಷ್ಟಿಯಾಗಿದೆ.

ಕೃಷಿ

By

Published : Jul 2, 2019, 1:48 PM IST

ನವದೆಹಲಿ: ಕೇಂದ್ರ ಸರಕಾರವು ತನ್ನ ಎರಡನೇ ಅವಧಿಯಲ್ಲಿ ಮೊದಲನೇ ಬಜೆಟ್ ಮಂಡಿಸುತ್ತಿದ್ದು, ಈ ಬಾರಿಯ ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಏನೆಲ್ಲಾ ಕೊಡುಗೆಗಳು ಸಿಗಬಹುದು ಅನ್ನುವುದರ ಕುರಿತು ಉತ್ಸಾಹ ಕಂಡುಬರುತ್ತಿದೆ. ದೇಶದ ಗ್ರಾಮೀಣ ಪ್ರದೇಶಗಳ ಲಕ್ಷಾಂತರ ಜನರು ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿರುವುದರಿಂದ ಕೃಷಿ ಕ್ಷೇತ್ರಕ್ಕೆ ಬಜೆಟ್ ಹಂಚಿಕೆಯ ಕುರಿತು ಕುತೂಹಲ ನಿರ್ಮಾಣವಾಗಿದೆ.

ಕಷ್ಟಕರ ಸವಾಲುಗಳು:
ಬಜೆಟ್​ನಲ್ಲಿ ಕೃಷಿ ಕ್ಷೇತ್ರಕ್ಕೆ ಹಂಚಿಕೆಯಾಗುತ್ತಿರುವುದರಿಂದ ಈ ಕ್ಷೇತ್ರಕ್ಕೆ ಸಂಬಂಧಿಸಿದ ಸವಾಲುಗಳ ಕುರಿತು ಅರ್ಥೈಸಿಕೊಳ್ಳುವ ಅಗತ್ಯವಿದೆ. ಒಂದೆಡೆಯಲ್ಲಿ ಬೇಡಿಕೆಯ ಹಣದುಬ್ಬರವಿದ್ದರೆ, ಮತ್ತೊಂದೆಡೆಯಲ್ಲಿ ಕೃಷಿ ಉತ್ಪನ್ನಗಳ ರಫ್ತು ಕುಸಿತ ಕಾಣುತ್ತಿದೆ.

ಇಷ್ಟು ಮಾತ್ರವಲ್ಲದೇ ವೇತನ ದರ ಕುಸಿತ, ಬೆಂಬಲ ಬೆಲೆಗಳ ಕೊರತೆ ಮೊದಲಾದ ಸಮಸ್ಯೆಗಳಿಂದ ರೈತರಿಗೆ ಕೃಷಿ ಲಾಭದಾಯಕವಾಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಜನರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಉದಾಹರಣೆಗೆ, ಶೇಕಡಾ 48ರಷ್ಟು ಕೃಷಿ ಕುಟುಂಬಗಳು ಕೃಷಿ ಮುಂದುವರಿಸಲು ಆಸಕ್ತಿ ತೋರುತ್ತಿಲ್ಲ ಎಂದು ಸಮೀಕ್ಷೆಯೊಂದರಿಂದ ತಿಳಿದು ಬಂದಿದೆ.

ಶಾಶ್ವತ ಪರಿಹಾರಗಳ ಅಗತ್ಯತೆ:
ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಲು ಸರಕಾರವು ಹೊಸ ದೃಷ್ಟಿಕೋನದಿಂದ ನೀತಿ ನಿಯಮಾವಳಿಗಳನ್ನು ರಚಿಸುವ ಅಗತ್ಯವಿದೆ. ಕೃಷಿ ಉತ್ಪಾದಕತೆಯನ್ನು ಸುಧಾರಿಸುವುದು, ಕೃಷಿ ಕ್ಷೇತ್ರದಲ್ಲಿ ಹೂಡಿಕೆಗಳನ್ನು ಉತ್ತೇಜಿಸುವುದು ಹಾಗೂ ಸಹಾಯಧನ ನಿಗದಿಪಡಿಸುವುದು ಸೂಕ್ತ. ಕೃಷಿ ಮೂಲಸೌಕರ್ಯ ಹಾಗೂ ಆಹಾರ ಸಂಸ್ಕರಣಾ ಕೈಗಾರಿಕೆಗಳಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ.

ಇನ್ಪುಟ್ ಬೆಲೆ ಅಧಿಕವಾಗುತ್ತಿರುವುದರಿಂದ, ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಕೇವಲ ಅವರ ಆದಾಯ ದ್ವಿಗುಣಗೊಳಿಸುವುದು ಮಾತ್ರ ಸಾಲದು. ಕೃಷಿ ಕ್ಷೇತ್ರದಲ್ಲಿ ಅಧಿಕ ಹೂಡಿಕೆಯಾದಲ್ಲಿ ಆದಾಯದ ಸಮಸ್ಯೆಗಳು ನೀಗಿದರೂ, ಬೇಡಿಕೆ ಹಾಗೂ ರಫ್ತಿಗೆ ಸಂಬಂಧಿಸಿದ ಸವಾಲುಗಳೆಡೆಗೆ ಗಮನಹರಿಸುವುದು ಅಗತ್ಯ. ಬಜೆಟ್ ಹಂಚಿಕೆ ವಿಶೇಷವಾಗಿ ಕೃಷಿ ಉತ್ಪನ್ನಗಳ ರಫ್ತು ಹಾಗೂ ಈ ಕ್ಷೇತ್ರದ ಹೂಡಿಕೆಗಳನ್ನು ಪ್ರೋತ್ಸಾಹಿಸಬೇಕು.

ಸಹಕಾರಿ ಫೆಡರಲಿಸಂ:
ಕೃಷಿಗೆ ಸಂಬಂಧಿಸಿದ ಕೇಂದ್ರ ಸರಕಾರದ ನೀತಿ ನಿಯಮಾವಳಿಗಳು ರಾಜ್ಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯಗತಗೊಳ್ಳಗಬೇಕಾದರೆ, ರಾಜ್ಯ ಸರಕಾರದ ಸಹಕಾರಿ ಫೆಡರಲ್ ಮನೋಭಾವ ಅಗತ್ಯವಿದೆ. ಉದಾಹರಣೆಗೆ, ಶೇಕಡಾ 59ರಷ್ಟು ರೈತರು ಮಾಹಿತಿ ಕೊರತೆಯಿಂದಾಗಿ ಸಾಲ ಸೌಲಭ್ಯ ಪಡೆಯುತ್ತಿಲ್ಲ ಎಂದು ಗ್ರಾಮೀಣ ಮಾಧ್ಯಮ ವೇದಿಕೆಯ 'ಗಾಂವ್ ಸಂಪರ್ಕ' ಸಮೀಕ್ಷೆಯಿಂದ ತಿಳಿದಿದೆ.

ಈ ಅನ್ವೇಷಣೆಯು ಸರಕಾರದ ನೀತಿಗಳು ಹಾಗೂ ಅದರ ಪರಿಣಾಮಗಳ ನಡುವಿನ ಅಂತರದ ಕುರಿತು ತಿಳಿಸುತ್ತದೆ. ಸರಕಾರದ ಸಹಕಾರದಿಂದ ಜಾಗೃತಿ ಅಭಿಯಾನಗಳನ್ನು ನಡೆಸುವುದರ ಮೂಲಕ ಇಂತಹ ಸಮಸ್ಯೆಗಳನ್ನು ಪರಿಹರಿಸಬಹುದು. ಸರಕಾರ ಕೃಷಿ ಮಾರುಕಟ್ಟೆಯಲ್ಲಿ ಸುಧಾರಣೆ ಹಾಗೂ ನ್ಯಾಯಯುತ ಬೆಲೆಗಳನ್ನು ನಿರ್ಧರಿಸುವುದು ಕೂಡಾ ಅತ್ಯಗತ್ಯ. ಭಾರತೀಯ ಕೃಷಿ ಕ್ಷೇತ್ರವನ್ನು ಪುರುಜ್ಜೀವನಗೊಳಿಸಲು ಇಂತಹ ಪ್ರಯತ್ನಗಳು ಸೂಕ್ತ ಸಮಯದಲ್ಲಿ ನಡೆಯಬೇಕು.

ABOUT THE AUTHOR

...view details