ಲಂಡನ್:ನ್ಯೂಜಿಲ್ಯಾಂಡ್ ತಂಡದ ವೇಗಿ ಲಾಕಿ ಫರ್ಗ್ಯೂಸನ್ ಮಾರಕ ಬೌನ್ಸರ್ ಬ್ಯಾಟಿಂಗ್ ಮಾಡುತ್ತಿದ್ದ ಆಫ್ಘಾನಿಸ್ತಾನದ ಪ್ರಮುಖ ಆಟಗಾರ ರಶೀದ್ ಖಾನ್ ತಲೆಗೆ ಬಡಿದಿದ್ದು, ಹೀಗಾಗಿ ಚಿಕಿತ್ಸೆ ಪಡೆಯುವ ನಿಟ್ಟಿನಲ್ಲಿ ಬೌಲಿಂಗ್ ಮಾಡಿರಲಿಲ್ಲ.
ಸದ್ಯ ರಶೀದ್ ಖಾನ್ ಆರೋಗ್ಯದ ಬಗ್ಗೆ ಆಫ್ಘಾನಿಸ್ತಾನ ತಂಡದ ನಾಯಕ ಗುಲ್ಬಾದಿನ್ ನೈಬ್ ಮಾಹಿತಿ ನೀಡಿದ್ದಾರೆ. "ಪ್ರಸ್ತುತ ರಶೀದ್ ಖಾನ್ ಆರೋಗ್ಯವಾಗಿದ್ದಾರೆ. ಕೆಲ ದಿನಗಳ ಕಾಲ ಮೈದಾನಕ್ಕಿಳಿಯದಂತೆ ವೈದ್ಯರು ಸೂಚಿಸಿದ್ದಾರೆ" ಎಂದು ಆಫ್ಘನ್ ಕಪ್ತಾನ್ ಹೇಳಿದ್ದಾರೆ.
ಕಿವೀಸ್ ತಂಡಕ್ಕೆ ಸುಲಭ ತುತ್ತಾದ ಆಫ್ಘನ್ನರು... ವಿಲಿಯಮ್ಸನ್ ಪಡೆಗೆ ಹ್ಯಾಟ್ರಿಕ್ ಗೆಲುವು..!