ಕರ್ನಾಟಕ

karnataka

ETV Bharat / briefs

'ಮೋಸಗಾರ'ರೆಂದು ಹೀಯಾಳಿಕೆ,ಆಂಗ್ಲರಿಗೆ ಬ್ಯಾಟ್‌​ ಮೂಲಕ ಉತ್ತರಿಸಿದ ಸ್ಮಿತ್​-ವಾರ್ನರ್​!

ಬಾಲ್​ ಟ್ಯಾಂಪರಿಂಗ್​ ಆರೋಪದ ಮೇಲೆ ಒಂದು ವರ್ಷ ನಿಷೇಧಕ್ಕೊಳಗಾಗಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟಿವ್​ ಸ್ಮಿತ್​ ಹಾಗೂ ವಾರ್ನರ್​ರನ್ನು ಇಂಗ್ಲೆಂಡ್​ ವಿರುದ್ಧ ನಡೆಯುತ್ತಿದ್ದ ಅಭ್ಯಾಸ ಪಂದ್ಯದ ವೇಳೆ ಅಲ್ಲಿನ ಅಭಿಮಾನಿಗಳು 'ಚೀಟರ್ಸ್​, ಚೀಟರ್ಸ್' ಎಂದು ಎಂದು ಹೀಯಾಳಿಸಿದ್ದರು.

smith

By

Published : May 26, 2019, 6:02 PM IST

ಲಂಡನ್​: ಸ್ಟಿವ್​ ಸ್ಮಿತ್​ ಹಾಗೂ ವಾರ್ನರ್​ರನ್ನು ಇಂಗ್ಲೆಂಡ್​ ಅಭಿಮಾನಿಗಳು ಮೋಸಗಾರರು ಎಂದು ಹೀಯಾಳಿಸಿದರೂ ಅದನ್ನು ಲೆಕ್ಕಿಸದೆ ಇಬ್ಬರು ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಬಾಲ್​ ಟ್ಯಾಂಪರಿಂಗ್​ ಆರೋಪದ ಮೇಲೆ ಒಂದು ವರ್ಷ ನಿಷೇಧಕ್ಕೊಳಗಾಗಿ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟಿವ್​ ಸ್ಮಿತ್​ ಹಾಗೂ ವಾರ್ನರ್​ರನ್ನು ಇಂಗ್ಲೆಂಡ್​ ವಿರುದ್ಧ ನಡೆಯುತ್ತಿದ್ದ ಅಭ್ಯಾಸ ಪಂದ್ಯದ ವೇಳೆ ಅಲ್ಲಿನ ಅಭಿಮಾನಿಗಳು ಇಬ್ಬರನ್ನು ಚೀಟರ್ಸ್​ ಚೀಟರ್ಸ್ ಎಂದು ಎಂದು ಹೀಯಾಳಿಸಿದ್ದಾರೆ. ಆದರೆ ಟೀಕೆ, ಅವಹೇಳನವನ್ನು ಲೆಕ್ಕಿಸದೆ ಇಬ್ಬರು ಕೇವಲ ಆಟದ ಕಡೆ ಮಾತ್ರ ಗಮನ ನೀಡಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.

ಶತಕ ಸಿಡಿಸಿದ ಸ್ಮಿತ್​

ಆರಂಭಿಕರಾಗಿ ಕಣಕ್ಕಿಳಿದಿದ್ದ ಡೇವಿಡ್​ ವಾರ್ನರ್​ 55 ಎಸೆತಗಳಲ್ಲಿ 43 ರನ್​ ಗಳಿಸಿದರೆ ಸ್ಮಿತ್​ 102 ಎಸೆತಗಳಲ್ಲಿ 116 ರನ್​ ಸಿಡಿಸಿದರು. ಇವರಿಬ್ಬರ ಆಟದ ನೆರವಿನಿಂದ ಆಸೀಸ್​ ಆಂಗ್ಲರ ವಿರುದ್ಧ 12 ರನ್​ಗಳ ರೋಚಕ ಜಯ ಸಾಧಿಸಿತು.

ಆಸ್ಟ್ರೇಲಿಯನ್​ ಪ್ಲೇಯರ್ಸ್​

ವಿಶ್ವಕಪ್​ಗೂ ಮುನ್ನ ಆ ಇಬ್ಬರೂ ಆಟಗಾರರ ಮನೋಬಲವನ್ನು ಕುಗ್ಗಿಸುವ ಯತ್ನಕ್ಕೆ ಇಂಗ್ಲಿಷರು ಮುಂದಾಗಿರುವುದು ಕ್ರೀಡಾಸ್ಫೂರ್ತಿಗೆ ಧಕ್ಕೆ ಉಂಟಾಗಿದೆ. ಈ ಕಾರಣದಿಂದ ಇಂಗ್ಲಿಷ್​ ಕ್ರಿಕೆಟಿಗ ಮೊಯಿನ್​ ಅಲಿ ಎರಡು ದಿನಗಳ ಹಿಂದೆ ತಮ್ಮ ಅಭಿಮಾನಿಗಳಿಗೆ ದಯವಿಟ್ಟು ಸ್ಮಿತ್​ ಹಾಗೂ ವಾರ್ನರ್​ರ ಜೊತೆ ಸಂಯಮದಿಂದ ವರ್ತಿಸಿ ಎಂದು ಕೇಳಿಕೊಂಡಿದ್ದರು.

ABOUT THE AUTHOR

...view details