ಕರ್ನಾಟಕ

karnataka

ETV Bharat / briefs

2008ರ ಕಿರಿಯರ ವಿಶ್ವಕಪ್​ ಗೆದ್ದು ಇಂದಿಗೆ 11 ವರ್ಷ... ಆಗಿನ ಹೀರೋಗೆ ಇನ್ನೂ ಸಿಕ್ಕಿಲ್ಲ ಚಾನ್ಸ್​! - Team India

ಅತಿ ಹೆಚ್ಚು ಅಂಡರ್​-19 ವಿಶ್ವಕಪ್​ ಗೆದ್ದಿರುವ ತಂಡ ಅಂದ್ರೆ ಅದು ಭಾರತವೇ. ಅಂಡರ್​-19 ಭಾರತ ಕ್ರಿಕೆಟ್​ ತಂಡ ಇಲ್ಲಿಯವರೆಗೂ ನಾಲ್ಕು ಬಾರಿ ವಿಶ್ವಕಪ್​ ಗೆದ್ದಿದೆ. ಅದರಲ್ಲಿ ಕೊಹ್ಲಿ ನಾಯಕತ್ವದ ಅಂಡರ್​-19 ತಂಡ ವರ್ಲ್ಡ್​ ಕಪ್​ ಗೆದ್ದು ಇಂದಿಗೆ 11 ವರ್ಷಗಳು ಕಳೆದಿವೆ. ಆದ್ರೆ ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಮಿಂಚಿದ್ದ ಆ ಹೀರೋಗೆ ಇನ್ನು ತಂಡದಲ್ಲಿ ಅವಕಾಶವೇ ದೊರೆತಿಲ್ಲ.

ಕೃಪೆ: Twitter

By

Published : Mar 2, 2019, 4:51 PM IST

2008 ಮಾರ್ಚ್​ 2 ರಂದು ನಡೆದ ಪಂದ್ಯದಲ್ಲಿ ಅಂಡರ್​-19 ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ದಕ್ಷಿಣ​ ಆಫ್ರಿಕಾ ವಿರುದ್ಧ ಭಾರತ ಕ್ರಿಕೆಟ್​ ತಂಡ ಟಾಸ್​ ಸೋತು ಬ್ಯಾಟಿಂಗ್​ ನಡೆಸಿತ್ತು. 45.4 ಓವರ್​ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕೆಳೆದುಕೊಂಡ ಭಾರತ 159 ರನ್​ಗಳ ಸಾಧಾರಣ ಮೊತ್ತವನ್ನು ಕಲೆ ಹಾಕಿತ್ತು.

ಇನ್ನು ಈ ಪಂದ್ಯಕ್ಕೆ ವರುಣನ ಕಾಟ ಶುರುವಾಗಿತ್ತು. ಭಾರತ ತಂಡ ನಸೀಬ್​ ಮತ್ತಷ್ಟು ಕುಗ್ಗಿತ್ತು. ಡಿಎನ್​ ಪ್ರಕಾರ 25 ಓವರ್​ಗಳಿಗೆ ಕೇವಲ 116 ರನ್​ಗಳ ಟಾರ್ಗೆಟ್​ ಹೊಂದಿತ್ತು ಸೌತ್​ ಆಫ್ರಿಕಾ ತಂಡ.

116 ರನ್​ಗಳ ಬೆನ್ನತ್ತಿದ್ದ ಸೌತ್ ಆಫ್ರಿಕಾ ಕಿರಿಯರ ತಂಡ ಆರಂಭದಿಂದಲೇ ಕುಸಿತ ಕಂಡಿತು. ಕೇವಲ 25 ಓವರ್​ಗಳಿಗೆ 8 ವಿಕೆಟ್​ಗಳ ನಷ್ಟಕ್ಕೆ 103 ರನ್​ಗಳನ್ನು ಕಲೆ ಹಾಕಿ 12 ರನ್​ಗಳ ಸೋಲು ಕಂಡಿತು. ಅಜಿತೇಶ್​ ಅರ್ಗಲ್​, ರವೀಂದ್ರ ಜಡೇಜಾ ಮತ್ತು ಎಸ್​ ಕೌಲ್​ ತಲಾ ಎರಡು ವಿಕೆಟ್​ಗಳನ್ನು ಪಡೆದು ತಂಡಕ್ಕೆ ಆಸರೆ ಆಗಿದ್ದರು.

ಮ್ಯಾಚ್​ ಹೀರೋಗೆ ಇನ್ನು ಚಾನ್ಸ್​ ಇಲ್ಲ...
ಭಾರತ ತಂಡದ ಪರ ಎಕೆ ಅರ್ಗಲ್​ ಉತ್ತಮ ದಾಳಿ ನಡೆಸಿದ್ದರು. ಕೇವಲ 5 ಓವರ್​ಗಳನ್ನು ಎಸೆದಿರುವ ಅರ್ಗಲ್​ 2 ಮೆಡನ್​ ಮತ್ತು 7 ರನ್​ಗಳನ್ನು ನೀಡಿ 2 ವಿಕೆಟ್​ಗಳನ್ನು ಪಡೆದು ಮಿಂಚಿದ್ದರು. ಅಂಡರ್​-19 ವಿಶ್ವಕಪ್​ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು. ಮ್ಯಾನ್​ ಆಫ್​ ದಿ ಮ್ಯಾಚ್​ ಸಹ ಪಡೆದಿದ್ದರು. ಆದ್ರೆ ಇವರಿಗೆ ಭಾರತ ತಂಡದಲ್ಲಿ ಇನ್ನು ಅವಕಾಶ ದೊರೆತಿಲ್ಲ. ಸದ್ಯ ಇವರು ಬರೋಡಾ ರಣಜಿ ತಂಡದಲ್ಲಿ ಆಡುತ್ತಿದ್ದು, ಅಲ್ಲಿಯೂ ಸಹ ಅವರಿಗೆ ಚಾನ್ಸ್​ಗಳು ಸಿಗುತ್ತಿರುವುದು ಕಡಿಮೆಯೇ ಆಗಿವೆ.

ABOUT THE AUTHOR

...view details