ಕರ್ನಾಟಕ

karnataka

ETV Bharat / briefs

1930ರ ದಶಕದ​ ವಿಮಾನ ಪತನ... ಮೇಯರ್​, ಗಂಡ-ಮಗಳು ಸೇರಿ 12 ಜನ ಸಾವು!

ಕೊಲೊಂಬಿಯಾ: 1930ರ ದಶಕದಲ್ಲಿ ಮೊದಲ ಬಾರಿಗೆ ರೆಡಿಯಾಗಿದ್ದ ಅಮೆರಿಕನ್​ ನಿರ್ಮಿತ ಅವಳಿ ಎಂಜಿನ್​ ವಿಮಾನ ಪತನವಾಗಿದ್ದು, ಮೇಯರ್​ ಕುಟುಂಬ ಸೇರಿ 12 ಜನ ಸಾವನ್ನಪ್ಪಿರುವ ಘಟನೆ ಕೊಲೊಂಬಿಯಾದಲ್ಲಿ ನಡೆದಿದೆ.

1930ರ ದಶಕದ​ ವಿಮಾನ ಪತನದ ದೃಶ್ಯ

By

Published : Mar 10, 2019, 12:35 PM IST

1930 ರ ದಶಕದಲ್ಲಿ ಮೊದಲ ಬಾರಿಗೆ ಉತ್ಪಾದಿಸಲ್ಪಟ್ಟ ಅಮೆರಿಕನ್ ನಿರ್ಮಿತ ಅವಳಿ ಎಂಜಿನ್ ಪ್ರೊಪೆಲ್ಲರ್ ಪ್ಲೇನ್​ ಡೌಗ್ಲಾಸ್ DC-3 ವಿಮಾನವು ಸ್ಯಾನ್ ಜೋಸ್ ಡೆಲ್ ಗುವಿಯಾರೆ ಮತ್ತು ವಿಲ್ಲವಿಸೆನ್ಸಿಯೊ ನಗರಗಳ ನಡುವೆ ಪತನಗೊಂಡಿದೆ.

ವಿಮಾನದಲ್ಲಿ ತರೈರಾ ಮುನಿಸಿಪಾಲಿಟಿ ಮೇಯರ್​ ಡೊರಿಸ್​ ವಿಲೆಗಾಸ್, ಆಕೆಯ ಗಂಡನ ಮತ್ತು ಮಗಳು, ವಿಮಾನದ ಮಾಲೀಕರು, ಪೈಲಟ್​ ಜೈಮ್​ ಕಾರಿಲ್ಲೊ, ಕೋ-ಪೈಲಟ್​ ಜೈಮ್​ ಹೆರೆರಾ ಮತ್ತು ಟೆಕ್ನಿಷನ್​ ಸೇರಿ 12 ಜನ ಮೃತ ಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ವಿಮಾನ ಹಾರುತ್ತಿರುವಾಗ ಎಂಜಿನ್​ ಫೇಲ್​ ಆಗಿದೆ. ಪೈಲಟ್​ ವಿಮಾನವನ್ನು ಲ್ಯಾಂಡಿಂಗ್​ ಮಾಡಲು ಪ್ರಯತ್ನಿಸಿದ್ದಾರೆ. ಆದರೆ, ಅದು ವಿಫಲವಾಗಿದ್ದರಿಂದ ವಿಮಾನ ಪತನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರ ಕುಟಂಬಗಳಿಗೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ABOUT THE AUTHOR

...view details