ನವದೆಹಲಿ: ಅಹಮದಾಬಾದ್ ಮೂಲದ ಜೈಡಸ್ ಕ್ಯಾಡಿಲಾದ ಮೂರು ಡೋಸ್‌ಗಳ ಕೋವಿಡ್ -19 ಲಸಿಕೆ ಜೈಕೊವಿ-ಡಿ ಈ ವಾರ ತಜ್ಞರ ಸಮಿತಿಯಿಂದ ತುರ್ತು-ಬಳಕೆಗೆ ಅನುಮೋದನೆ ಪಡೆಯುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯ ಕಳೆದ ವಾರ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಮಾಹಿತಿ ನೀಡಿದ್ದರು. ಅಕ್ಟೋಬರ್-ನವೆಂಬರ್‌ನಲ್ಲಿ ಇನ್ನೂ ನಾಲ್ಕು ಭಾರತೀಯ ಔಷಧೀಯ ಕಂಪನಿಗಳು 4 ಸ್ಥಳೀಯ ಲಸಿಕೆಗಳ ಉತ್ಪಾದನೆಯನ್ನು ಆರಂಭಿಸುತ್ತವೆ ಎಂದು ಸರ್ಕಾರ ನಿರೀಕ್ಷಿಸಿದೆ. ಬಯಲಾಜಿಕಲ್ ಇ ಮತ್ತು ನವರ್ಟೀಸ್ ಲಸಿಕೆಗಳು ಕೂಡ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯ ಇರಲಿವೆ. ಆದರೆ ಜೈಡಸ್ ಕ್ಯಾಡಿಲಾ ಶೀಘ್ರದಲ್ಲೇ ತಜ್ಞರ ಸಮಿತಿಯಿಂದ ತುರ್ತು ಬಳಕೆಯ ಅನುಮತಿಯನ್ನು ಪಡೆಯುತ್ತದೆ.
ಜೈಡಸ್ ಕ್ಯಾಡಿಲಾ ಕಳೆದ ತಿಂಗಳು ತನ್ನ ಮೂರು ಡೋಸ್ ಕೋವಿಡ್ -19 ಲಸಿಕೆ ಜೈಕೊವಿ-ಡಿಗಾಗಿ ಭಾರತೀಯ ಔಷಧ ನಿಯಂತ್ರಕ(ಡಿಸಿಜಿಐ)ರೊಂದಿಗೆ ತುರ್ತು ಬಳಕೆಯ ದೃಢೀಕರಣಕ್ಕಾಗಿ (EUA) ಅರ್ಜಿ ಸಲ್ಲಿಸಿರುವುದಾಗಿ ಹೇಳಿತ್ತು. ವಾರ್ಷಿಕವಾಗಿ 10-12 ಕೋಟಿ ಡೋಸ್‌ಗಳನ್ನು ತಯಾರಿಸಲು ಯೋಜಿಸಿದ್ದಾರೆ. ಕಂಪನಿಯು ತನ್ನ ಕೋವಿಡ್ -19 ಲಸಿಕೆಯನ್ನು ಭಾರತದ 50 ಕೇಂದ್ರಗಳಲ್ಲಿ ಇದುವರೆಗೆ ಅತಿದೊಡ್ಡ ಕ್ಲಿನಿಕಲ್ ಪ್ರಯೋಗವನ್ನು ನಡೆಸಿದೆ.
ಸದ್ಯ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಈ ಮೊದಲು ಅಹಮದಾಬಾದ್ ಮೂಲದ ಜೈಕೊವಿ-ಡಿ ಬಗ್ಗೆ ಹೆಚ್ಚಿನ ಡೇಟಾವನ್ನು ನೀಡುವಂತೆ ಕೇಳಿತ್ತು. ನೀತಿ ಆಯೋಗದ ಸದಸ್ಯ ಡಾ ವಿ ಕೆ ಪೌಲ್ ಅವರು, ಮಕ್ಕಳಿಗೆ ಜೈಡಸ್ ಕ್ಯಾಡಿಲಾ ಕೋವಿಡ್ ಲಸಿಕೆಯನ್ನು ಡಿಸಿಜಿಐ ಪರೀಕ್ಷಿಸುತ್ತಿದೆ ಎಂದು ಹೇಳಿದ್ದರು.