ಕರ್ನಾಟಕ

karnataka

ತಪ್ಪು ಮಾಹಿತಿ ಹರಡುವಿಕೆ ವಿಚಾರ: ವಿಚಾರಣೆ ಎದುರಿಸಲಿದ್ದಾರೆ ಜುಕರ್‌ಬರ್ಗ್, ಪಿಚೈ ,ಡೋರ್ಸೆ

By

Published : Feb 19, 2021, 2:08 PM IST

ಮಾರ್ಚ್ 25 ಕ್ಕೆ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್, ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ, ಮತ್ತು ಟ್ವಿಟರ್ ಸಿಇಒ ಜ್ಯಾಕ್ ಡೋರ್ಸೆ ವಿಚಾರಣೆ ಎದುರಿಸಲಿದ್ದಾರೆ.

facebook CEO Mark Zuckerberg
ತಪ್ಪು ಮಾಹಿತಿ ಹರಡುವಿಕೆ ವಿಚಾರ

ಸ್ಯಾನ್​ ಫ್ರಾನ್ಸಿಸ್ಕೋ: ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್, ಆಲ್ಫಾಬೆಟ್ ಮತ್ತು ಗೂಗಲ್ ಸಿಇಒ ಸುಂದರ್ ಪಿಚೈ, ಮತ್ತು ಟ್ವಿಟರ್ ಸಿಇಒ ಜ್ಯಾಕ್ ಡೋರ್ಸೆ ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ತಪ್ಪು ಮಾಹಿತಿಯ ಹರಡುವಿಕೆ ಕುರಿತು ಮುಂದಿನ ತಿಂಗಳು ಹೊಸ ಯುಎಸ್ ಹೌಸ್ ವಿಚಾರಣೆಯನ್ನು ಎದುರಿಸಲಿದ್ದಾರೆ.

ಮಾರ್ಚ್ 25 ಕ್ಕೆ ನಿಗದಿಪಡಿಸಲಾಗಿರುವ ಈ ವಿಚಾರಣೆಯು ಟೆಕ್ ಸಿಇಒಗಳಿಗೆ ಆನ್‌ಲೈನ್ ಸಾಮಾಜಿಕ ಪ್ಲಾಟ್‌ಫಾರ್ಮ್‌ಗಳಲ್ಲಿನ ತಪ್ಪು ಮಾಹಿತಿ ಕುರಿತಂತೆ ಗ್ರಿಲ್ ಮಾಡಲಿದೆ. ಸಂವಹನ ಮತ್ತು ತಂತ್ರಜ್ಞಾನ ಉಪ ಸಮಿತಿ ಮತ್ತು ಗ್ರಾಹಕ ಸಂರಕ್ಷಣೆ ಮತ್ತು ವಾಣಿಜ್ಯ ಉಪಸಮಿತಿ ಈ ಜಂಟಿ ವಿಚಾರಣೆಯನ್ನು ಆನ್‌ಲೈನ್‌ನಲ್ಲಿ ನಡೆಸಲಿದೆ ಎಂದು ಇಂಧನ ಮತ್ತು ವಾಣಿಜ್ಯ ಸಮಿತಿ ಅಧ್ಯಕ್ಷ ಫ್ರಾಂಕ್ ಪಲ್ಲೋನ್, ಜೂನಿಯರ್ ಗುರುವಾರ ಪ್ರಕಟಿಸಿದರು.

ಇದು ಕೋವಿಡ್ -19 ಲಸಿಕೆ ಬಗ್ಗೆ ಸುಳ್ಳು ಹರಡಲು ತಪ್ಪು ಮಾಹಿತಿಯನ್ನು ಹರಡಲು ಈ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಅವಕಾಶ ಮಾಡಿಕೊಟ್ಟಿವೆ, ರಾಷ್ಟ್ರೀಯ ಬಿಕ್ಕಟ್ಟುಗಳನ್ನು ತೀವ್ರಗೊಳಿಸಿದೆ ಎಂದು ಪಲ್ಲೋನ್ ಗುರುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಬಹಳ ಸಮಯದಿಂದ, ಈ ದೊಡ್ಡ ತಂತ್ರಜ್ಞಾನವು ತನ್ನ ಆನ್‌ಲೈನ್ ಪ್ರೇಕ್ಷಕರಿಗೆ ಸುಳ್ಳು ಮಾಹಿತಿಯನ್ನು ಹುಟ್ಟುಹಾಕುವಲ್ಲಿ ಮತ್ತು ಹೆಚ್ಚಿಸುವಲ್ಲಿ ಅವರು ವಹಿಸಿದ ಪಾತ್ರವನ್ನು ಅಂಗೀಕರಿಸುವಲ್ಲಿ ವಿಫಲವಾಗಿದ್ದು, ಉದ್ಯಮಗಳು ಸ್ವಯಂ ನಿಯಂತ್ರಣ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ "ಎಂದು ಇಂಧನ ಮತ್ತು ವಾಣಿಜ್ಯ ಸಮಿತಿ ಹೇಳಿದೆ.

ಟ್ವಿಟರ್​ ಸಿಇಒ ಮತ್ತು ಜೂಕರ್‌ಬರ್ಗ್ ಈ ಹಿಂದೆ ನವೆಂಬರ್‌ನಲ್ಲಿ ಯುಎಸ್ ಕಾಂಗ್ರೆಸ್ ಮುಂದೆ ಹಾಜರಾಗಿದ್ದರು, ಸೆನೆಟ್ ನ್ಯಾಯಾಂಗವು ತಪ್ಪು ಮಾಹಿತಿ ಲೇಬಲಿಂಗ್ ಕುರಿತು ಇಬ್ಬರನ್ನೂ ವಿಚಾರಣೆ ನಡೆಸಿತ್ತು.

ABOUT THE AUTHOR

...view details