ಅಲಿಗಢ (ಉತ್ತರ ಪ್ರದೇಶ): ಉತ್ತರಾಖಂಡ ಮೂಲದ ಯೂಟ್ಯೂಬರ್, ಬೈಕರ್ವೊಬ್ಬರು ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬುಧವಾರ ಮೃತಪಟ್ಟಿದ್ದರು. ಬೈಕ್‌ನಲ್ಲಿ 300 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಹೆಲ್ಮೆಟ್ ಧರಿಸಿದ್ದರೂ ಬೈಕರ್ನ ತಲೆ ಛಿದ್ರ - ಛಿದ್ರವಾಗಿದೆ.
ಮೃತ ಯೂಟ್ಯೂಬರ್ನನ್ನು ಅಗಸ್ತ್ಯ ಚೌಹಾಣ್ ಎಂದು ಗುರುತಿಸಲಾಗಿದೆ. ಆಗ್ರಾದಿಂದ ತಮ್ಮ ನಿಂಜಾ ಝೆಡ್ಏಕ್ಸ್ 10ಆರ್ ಸೂಪರ್‌ಬೈಕ್‌ನಲ್ಲಿ ನವದೆಹಲಿಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಅಲಿಗಢ ಜಿಲ್ಲೆಯ ತಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯ ಯಮುನಾ ಎಕ್ಸ್‌ಪ್ರೆಸ್‌ವೇ - 47ರಲ್ಲಿ ಭೀಕರ ಅಪಘಾತ ಸಂಭವಿಸಿದೆ. ಅತಿ ವೇಗದಲ್ಲಿದ್ದಾಗ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅಗಸ್ತ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ರಭಸಕ್ಕೆ ಹೆಲ್ಮೆಟ್ ಹಲವು ತುಂಡಾಗಿ ಬಿದ್ದಿದೆ. ತಲೆ ಛಿದ್ರವಾಗಿ ರಸ್ತೆಯಲ್ಲಿ ರಕ್ತದ ಹೊಳೆ ಹರಿದಿದೆ.
ಮೋಟಾರ್ ಬೈಕ್ ರೇಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತಮ್ಮ ಸೂಪರ್‌ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ತಮ್ಮ ಯೂಟ್ಯೂಬ್ ಚಾನೆಲ್‌ಗಾಗಿ ವೀಡಿಯೊ ಮಾಡಲೆಂದು ಮೊದಲ ಬಾರಿಗೆ ಈ ಬೈಕ್‌ನಲ್ಲಿ ಗಂಟೆಗೆ 300 ಕಿಲೋಮೀಟರ್ ವೇಗದಲ್ಲಿ ಚಲಾಯಿಸಲು ಪ್ರಯತ್ನಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ, ವಿಧಿ ಮಾರ್ಗ ಮಧ್ಯದಲ್ಲೇ ಬೈಕರ್ಗಾಗಿ ಕಾದು ಕುಳಿತಿತ್ತು ಎಂಬಂತಿದೆ.
ಯೂಟ್ಯೂಬ್ ಚಾನಲ್ಗೆ 1.2 ಮಿಲಿಯನ್ ಚಂದಾದಾರರು: ಡೆಹ್ರಾಡೂನ್ ನಿವಾಸಿಯಾಗಿದ್ದ ಅಗಸ್ತ್ಯ ಒಬ್ಬ ವೃತ್ತಿಪರ ಬೈಕರ್ ಆಗಿದ್ದ. ಅಲ್ಲದೇ, PRO RIDER 1000 ಎಂಬ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದರು. ಈ ಯೂಟ್ಯೂಬ್ ಚಾನಲ್ಗೆ 1.2 ಮಿಲಿಯನ್ ಚಂದಾದಾರರು ಇದ್ದಾರೆ. ಈ ಅಪಘಾತ ಸಂಭವಿಸುವ ಸುಮಾರು 16 ಗಂಟೆ ಮುನ್ನ ಸಹ ಯೂಟ್ಯೂಬ್‌ನಲ್ಲಿ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ನವದೆಹಲಿಗೆ ಬರುವಂತೆ ತನ್ನ ಸ್ನೇಹಿತರಿಗೆ ಮನವಿ ಮಾಡಿದ್ದರು. ಅಲ್ಲದೇ, ಬೈಕ್‌ನಲ್ಲಿ ಹೋಗುವಾಗ ತಮ್ಮ ಯೂಟ್ಯೂಬ್ ಚಾನಲ್‌ಗಾಗಿ ವಿಡಿಯೋ ಮಾಡುವುದರಲ್ಲಿ ಅಗಸ್ತ್ಯ ನಿಪುಣರಾಗಿದ್ದರು. ಇದೇ ವೇಳೆ, ಪ್ರತಿ ಬಾರಿ ಕೂಡ ಹೊಸ ವಿಡಿಯೋವನ್ನು ಅಪ್ಲೋಡ್ ಮಾಡಿದಾಗ ಅವರು ಯಾವಾಗಲೂ ವೇಗವಾಗಿ ವಾಹನ ಚಲಾಯಿಸಬೇಡಿ ಎಂದು ಜನರಿಗೆ ಎಚ್ಚರಿಕೆ ಕೊಡುತ್ತಿದ್ದರು.
ಇದನ್ನೂ ಓದಿ:ಕಾರು ಗುದ್ದಿದ ರಭಸಕ್ಕೆ ಟಾಪ್ ಮೇಲೆಯೇ ಬಿದ್ದ ಬೈಕ್ ಸವಾರ: ಶವದೊಂದಿಗೆ 3 ಕಿಮೀ ಚಲಿಸಿದ ಆರೋಪಿ ಚಾಲಕ
ಮತ್ತೊಂದೆಡೆ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ದಾರುಣ ಘಟನೆ ವರದಿಯಾಗಿದೆ. ಇಲ್ಲಿನ ಇಲ್ಲಿನ ಕಸ್ತೂರ್ಬಾ ಗಾಂಧಿ ಮಾರ್ಗ ರಸ್ತೆಯಲ್ಲಿ ಏಪ್ರಿಲ್ 29ರಂದು ರಾತ್ರಿ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಬೈಕ್ ಸವಾರ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಆದರೆ, ಈ ವೇಳೆ ಕಾರು ಗುದ್ದಿದ ರಭಸಕ್ಕೆ ಕಾರಿನ ಟಾಪ್ ಮೇಲೆಯೇ ಶವ ಬಿದ್ದಿದ್ದು, ಮೂರು ಕಿಲೋ ಮೀಟರ್ ದೂರ ಕಾರನ್ನು ಚಾಲಕ ಹಾಗೆ ಚಲಿಸಿಕೊಂಡು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬೈಕ್ ಮತ್ತು ಕಾರು ನಡುವೆ ಅಪಘಾತ: ಸಹೋದರರು ಸಾವು