ಗೋಪಾಲ್ಗಂಜ್(ಬಿಹಾರ): ಗೋಪಾಲ್ಗಂಜ್ನಲ್ಲಿ ಯುವಕನೋರ್ವ ತಮಾಷೆಗೆ ಬಾಯಿಯೊಳಗೆ ಕೃಷಿ ಉಪಕರಣ ಖುರ್ಪಿ ಹಾಕಿಕೊಂಡು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ. ಖುರ್ಪಿ ಯುವಕನ ಬಾಯಿಯೊಳಗೆ ಸಿಲುಕಿಕೊಂಡು, ಸಾವಿನ ದವಡೆಗೆ ತಲುಪಿ, ಬಚಾವಾಗಿದ್ದಾನೆ. ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಾಧು ಚೌಕ್ ಪ್ರದೇಶದಲ್ಲಿ ಘಟನೆ ನಡೆದಿದೆ.
ಖುರ್ಪಿ ಬಾಯಿಯೊಳಗೆ ಹಾಕಿಕೊಂಡ ಯುವಕನ ಹೆಸರು ಮಿಥಿಲೇಶ್ ಕುಮಾರ್. ಈ ಯುವಕ ಬಾಯಿಯಲ್ಲೇ ಸಿಲುಕಿಕೊಂಡಿದ್ದ ಖುರ್ಪಿಯನ್ನು ಮೊದಲಿಗೆ ತಾನೇ ತೆಗೆಯಲು ಪ್ರಯತ್ನಿಸಿದ್ದಾನೆ. ಬಾರದೇ ಇದ್ದಾಗ ನೋವಿನಲ್ಲಿ ಕಿರುಚಿದ್ದಾನೆ. ಕೂಗು ಕೇಳಿ ಬಂದ ಸುತ್ತಮುತ್ತಲಿನವರು ಯುವಕನ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಕುಟುಂಬಸ್ಥರು ಕೂಡ ಖುರ್ಪಿ ಹೊರೆತೆಗೆಯಲು ಪ್ರಯತ್ನಿಸಿದ್ದಾರೆ. ಆದರೆ ಪ್ರಯತ್ನಿಸಿದಷ್ಟೂ ಖುರ್ಪಿ ಹೊರ ಬರುವ ಬದಲು ಯುವಕನ ಪರಿಸ್ಥಿತಿ ಬಿಗಡಾಯಿಸಿತ್ತು.