ಮಹಾರಾಜಗಂಜ್ (ಉತ್ತರಪ್ರದೇಶ) :ಕೊಲ್ಹುಯಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಚಿತ್ರ ಪ್ರಕರಣ ಒಂದು ಜರುಗಿದೆ. ವಿವಾಹವಾಗಿ ಒಂದು ತಿಂಗಳು ಕಳೆಯುವುದರೊಳಗೆ ಯುವತಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ.
ಪತ್ನಿಯ ಆರೋಗ್ಯ ಹಠಾತ್ ಹದಗೆಟ್ಟಿದ್ದರಿಂದ ಅಲ್ಟ್ರಾಸೌಂಡ್ ಮಾಡಿಸಿದಾಗ ಆ ವರದಿಯಲ್ಲಿ ಪತಿಗೆ ಈ ವಿಷಯ ತಿಳಿದು ಬಂದಿದೆ. ಈ ಬಗ್ಗೆ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಯುವತಿ ಹಾಗೂ ಆಕೆಯ ಪೋಷಕರು ನನಗೆ ವಂಚಿಸಿ ವಿವಾಹ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದಾರೆ ಪತಿ.