ಜಬಲ್ಪುರ (ಮಧ್ಯಪ್ರದೇಶ): ಜಪಾನ್ನ ‘ತೈಯು ನೋ ತಮಾಗೊ’ ಎಂದು ಕರೆಯಲ್ಪಡುವ ಮಾವು ಒಂದು ಕೆಜಿಗೆ 2 ಲಕ್ಷ ರೂ. ಬೆಲೆಯಲ್ಲಿ ಮಾರಾಟವಾಗುತ್ತಿದೆ. ಆದರೆ, ಈ ಮಾವಿಗೆ ನೀಡಿರುವ ಸೆಕ್ಯೂರಿಟಿ ನೋಡಿದ್ರೆ ನಿಮಗೂ ಆಶ್ಚರ್ಯವಾಗಬಹುದು.
ಲಕ್ಷ ಬೆಲೆಯ ದುಬಾರಿ ಮಾವಿಗೆ ಹೈ ಸೆಕ್ಯೂರಿಟಿ ಜಬಲ್ಪುರದ ತೋಟವೊಂದರಲ್ಲಿ ಕೆ.ಜಿಗೆ 2 ಲಕ್ಷ ರೂಪಾಯಿ ಮೌಲ್ಯದ ಮಾವು ಬೆಳೆಯಲಾಗುತ್ತಿದೆ. ಜಪಾನ್‌ನಲ್ಲಿ ಕಂಡು ಬರುವ ವಿಶ್ವದಲ್ಲೇ ದುಬಾರಿ ಮಾವೀಗ ಭಾರತದಲ್ಲೇ ಬೆಳೆಯುತ್ತಿದೆ. ಆದ್ರೆ, ಮಾಲೀಕರಿಗೆ ಈ ಮಾವಿನ ರಕ್ಷಣೆ ಸವಾಲಾಗಿದೆ. ಮಾವಿನ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು, ಇದಕ್ಕಾಗಿ ತೋಟದ ಸುತ್ತ ಟೈಟ್ ಸೆಕ್ಯೂರಿಟಿ ನೇಮಕವಾಗಿದೆ. ಹಗಲು ರಾತ್ರಿ ಶ್ವಾನಗಳೀಗ ಈ ತೋಟದ ಕಾವಲಿಗೆ ನಿಂತಿವೆ.
ಮಧ್ಯಪ್ರದೇಶ ಮಾತ್ರವಲ್ಲ ಈ ಮಾವೀಗ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲೂ ಬೆಳೆಯಲಾಗುತ್ತಿದೆ. ಇಲ್ಲಿನ ಅಜಿತ್ ಸರ್ಕಾರ್ ಎಂಬುವರು ಈಗ ಚಿನ್ನದ ಮಾವು ಬೆಳೆಯುತ್ತಿದ್ದಾರೆ.
ಮಾವಿನ ರಕ್ಷಣೆಯೇ ಹೊಸ ಸವಾಲು
ಜಬಲ್ಪುರದ ಚಾರ್ಗವಾನ್ ರಸ್ತೆಯಲ್ಲಿ ಸಂಕಲ್ಪ ಪರಿಹಾರ್ ಮತ್ತು ರಾಣಿ ಪರಿಹಾರ್ ಎಂಬುವರ ತೋಟದಲ್ಲಿ ಈ ಮಾವು ಬೆಳೆದಿದೆ. ಈ ಉದ್ಯಾನದಲ್ಲಿ 14 ಬಗೆಯ ಮಾವಿನ ತಳಿಗಳ ಬೆಳೆಯಲಾಗುತ್ತಿದೆ. ಈ 14 ತಳಿ ಮಾವಿನ ಹಣ್ಣುಗಳಲ್ಲಿ ತೈಯೊ ನೋ ತಮಾಗೋ ಮಾವು ಅತ್ಯಂತ ದುಬಾರಿ ಎನಿಸಿದೆ. ಈ ಮಾವನ್ನ ಕಳೆದ 4 ವರ್ಷದಿಂದ ಬೆಳೆಯಲಾಗುತ್ತಿದೆ. ಈ ಬಾರಿ ಚಿನ್ನದ ಬೆಲೆ ಬಂದಿದೆ. ಜಪಾನ್‌ನಲ್ಲಿ ಈ ಮಾವನ್ನು ಪಾಲಿ ಮನೆಗಳ ಒಳಗೆ ಬೆಳೆಯಲಾಗುತ್ತದೆ. ಆದರೆ, ಭಾರತದಲ್ಲಿ ಇದನ್ನು ತೋಟಗಳಲ್ಲಿ ಬೆಳೆಯಬಹುದು. ಈ ಮಾವಿನಲ್ಲಿ ಹೆಚ್ಚಿನ ಫೈಬರ್ ಇದ್ದು, ರುಚಿಕರವಾಗಿರಲಿದೆ.
ಈ ದುಬಾರಿ ಮಾವು ಬೆಳೆಯುವುದು ಮಾತ್ರವಲ್ಲ ಅದರ ರಕ್ಷಣೆ ಸಹ ಸವಾಲಾಗಿದೆ. ಮಾವಿಗೆ ಚಿನ್ನದ ಬೆಲೆ ಬಂದಿದ್ದರಿಂದ ಕಟಾವಿಗೆ ಬಂದಿರುವ ಮಾವಿನ ಮೇಲೆ ಕಳ್ಳರ ಕಣ್ಣು ಬಿದ್ದಿದೆ. ಹೀಗಾಗಿ, ಇಡೀ ತೋಟ ಕಾಯಲು ಕಾವಲುಗಾರರ ಜೊತೆ 9 ನಾಯಿಗಳನ್ನು ಸಹ ನೇಮಿಸಲಾಗಿದೆ.
ಸದ್ಯ ಈ ಮಾವಿನ ಬೆಳೆ ಭಾರತದಲ್ಲಿ ಹೆಚ್ಚು ಫೇಮಸ್ ಆಗಿದ್ದು, ತೋಟಗಾರಿಕಾ ಇಲಾಖೆ ಇನ್ನಷ್ಟು ಗಮನಹರಿಸಿದರೆ ಹಲವು ಕೃಷಿಕರು ಹೆಚ್ಚಿನ ಲಾಭ ಗಳಿಸುವ ಕೃಷಿ ಕಡೆ ಗಮನಹರಿಸಬಹುದು.