ಅಹಮದಾಬಾದ್(ಗುಜರಾತ್): ನಗರದ ಗುಜರಾತ್ ವಿಶ್ವವಿದ್ಯಾಲಯದ ಬಳಿ ದೊಡ್ಡ ದುರಂತವೊಂದು ಸಂಭವಿಸಿದ್ದು, ಎಂಟು ಕಾರ್ಮಿಕರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಆಸ್ಪೈರ್ 2 ಕಟ್ಟಡದ ಕಾಮಗಾರಿ ನಡೆಯುತ್ತಿರುವ ವೇಳೆ ಹಠಾತ್ ಆಗಿ ಲಿಫ್ಟ್ ಕುಸಿದು ಬಿದ್ದಿದೆ. ಪರಿಣಾಮ ಸುಮಾರು ಎಂಟು ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಏಳನೇ ಮಹಡಿಯಿಂದ ಕುಸಿದ ಬಿದ್ದ ಲಿಫ್ಟ್.. 8 ಕಾರ್ಮಿಕರು ಸಾವು, ಮುಗಿಲು ಮುಟ್ಟಿದ ಆಕ್ರಂದನ
ಏಳನೇ ಮಹಡಿಯಿಂದ ಲಿಫ್ಟ್ ಕುಸಿದು ಬಿದ್ದು ಹಲವು ಕಾರ್ಮಿಕರು ಮೃತಪಟ್ಟಿರುವ ಘಟನೆ ಗುಜರಾತ್ನ ಅಹಮದಾಬಾದ್ನಲ್ಲಿ ನಡೆದಿದೆ.
ಏಳನೇ ಮಹಡಿಯಿಂದ ಕುಸಿದ ಬಿದ್ದ ಲಿಫ್ಟ್
ಸ್ಥಳಕ್ಕೆ ಪೊಲೀಸರ ಮತ್ತು ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮೃತ ದೇಹಗಳನ್ನು ವಶಕ್ಕೆ ಪಡೆದ ಪೊಲೀಸರು ಆಸ್ಪತ್ರೆಗೆ ರವಾನಿಸಿದರು. ಸ್ಥಳದಲ್ಲಿ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಓದಿ:ವಿಡಿಯೋ: ಮಗುವಿನ ಮೈಮೇಲೆ ಹರಿಯಿತು ಕಾರು: ಚಾಲಕನ ನಿರ್ಲಕ್ಷ್ಯಕ್ಕೆ ಪುಟ್ಟ ಬಾಲಕಿ ಸಾವು