ಕಾನ್ಪುರ (ಉತ್ತರ ಪ್ರದೇಶ): ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ತಮ್ಮ ಹುಟ್ಟೂರಿನ ಪ್ರವಾಸದ ವೇಳೆ ಸಂಚಾರಕ್ಕೆ ತಡೆ ನೀಡಿದ್ದ ಹಿನ್ನೆಲೆ ಮಹಿಳೆಯೊಬ್ಬರು ಆಸ್ಪತ್ರೆಗೆ ತೆರಳಲಾಗದೇ ಮೃತಪಟ್ಟಿರುವ ಘಟನೆ ನಡೆದಿದೆ. ರಾಮ್ನಾಥ್ ಕೋವಿಂದ್ ರಸ್ತೆ ಮಾರ್ಗವಾಗಿ ತಮ್ಮ ಹುಟ್ಟೂರು ಕಾನ್ಪುರ ತೆರಳುತ್ತಿದ್ದ ಹಿನ್ನೆಲೆ ರಸ್ತೆ ಸಂಚಾರ ತಡೆಯಲಾಗಿತ್ತು.
ರಾಮನಾಥ್ ಕೋವಿಂದ್ ಆಗಮನ ವೇಳೆ ಟ್ರಾಫಿಕ್ ಜಾಮ್: ಆ್ಯಂಬುಲೆನ್ಸ್ನಲ್ಲಿ ಪ್ರಾಣ ಬಿಟ್ಟ ಮಹಿಳೆ
ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದ ಭಾರತೀಯ ಕೈಗಾರಿಕಾ ಅಧ್ಯಯನ ಸಂಘ ವಿಭಾಗದ ಮಹಿಳಾ ಅಧ್ಯಕ್ಷೆ ವಂದನಾ ಮಿಶ್ರಾ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಲಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ವೇಳೆ, ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ್ದ ಭಾರತೀಯ ಕೈಗಾರಿಕಾ ಅಧ್ಯಯನ ಸಂಘ ವಿಭಾಗದ ಮಹಿಳಾ ಅಧ್ಯಕ್ಷೆ ವಂದನಾ ಮಿಶ್ರಾ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತೆರಳಲಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ. ಸಂಚಾರ ತಡೆಹಿದಿದಿದ್ದ ಕಾರಣ ಟ್ರಾಫಿಕ್ ಜಾಮ್ನಲ್ಲಿ ಸಿಲುಕಬೇಕಾಯಿತು.
ಆದರೆ, ಆಕೆಯ ಪತಿ ವಾಹನ ಬಿಟ್ಟು ಕಳುಹಿಸುವಂತೆ ಬೇಡಿಕೊಂಡರು ಪೊಲೀಸರು ಕಳುಹಿಸಿರಲಿಲ್ಲ. ಟ್ರಾಫಿಕ್ ತೆರೆದ ಬಳಿಕ ಆಸ್ಪತ್ರೆಗೆ ಕರೆದೊಯ್ದರು ಅಷ್ಟರಲ್ಲಾಗಲೇ ಮಹಿಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.