ಕರ್ನಾಟಕ

karnataka

ETV Bharat / bharat

ಹೊಸ ನಿಯಮಗಳು ನಿರಂತರ ವಿದ್ಯುತ್ ಸರಬರಾಜು ಖಚಿತಪಡಿಸಬಲ್ಲವೆ?

ಒಂದೆರಡು ವರ್ಷಗಳ ಹಿಂದಿನ ಮಾತಿದು. ಕೇಂದ್ರ ವಿದ್ಯುತ್ ಸಚಿವರಾದ ನಂತರ ಆರ್.ಕೆ. ಸಿಂಗ್, ಉಸಿರಾಟದಷ್ಟೇ ಮುಖ್ಯವಾಗಿದೆ ವಿದ್ಯುತ್. ನಿರಂತರ ವಿದ್ಯುತ್ ಸರಬರಾಜು ಪ್ರಾಣವಾಯುವಿನಷ್ಟೇ ಪ್ರಾಮುಖ್ಯತೆ ಪಡೆದಿದೆ ಎಂದು ಹೇಳಿದ್ದರು.

power supply
ವಿದ್ಯುತ್ ಸರಬರಾಜು

By

Published : Dec 25, 2020, 7:37 PM IST

ಕಳೆದ ಕೆಲವು ವರ್ಷಗಳಲ್ಲಿ ಅದು ನಮ್ಮ ನಾಯಕರು ನೀಡುವ ಹಲವಾರು ಭರವಸೆಗಳ ಪೈಕಿ ಒಂದಾಗಿದೆ. ಹೀಗಿದ್ದರೂ ಈ ಭರವಸೆ ಇದುವರೆಗೆ ಈಡೇರಿಲ್ಲ. ಈ ಹಿನ್ನೆಲೆಯಲ್ಲಿ, ವಿದ್ಯುತ್ ಗ್ರಾಹಕರ ಹಕ್ಕುಗಳ ರಕ್ಷಣೆಯಲ್ಲಿ ಹೊಸ ಪ್ರವೃತ್ತಿ ತೋರಿಸಿದ ಕೇಂದ್ರ ಸರಕಾರ ಗುಣಮಟ್ಟದ ಸೇವೆಗಳನ್ನು ಒದಗಿಸಲು ಹೊಸ ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು 2020 ಕ್ರೋಡೀಕರಿಸುವ ಮೂಲಕ ಸ್ವಾಗತಾರ್ಹ ಹೆಜ್ಜೆ ಇಟ್ಟಿದೆ. ಎಲ್ಲ ರಾಜ್ಯಗಳೊಂದಿಗೆ ಸಮಾಲೋಚಿಸಿದ ನಂತರವೇ ರೂಪಿಸಿರುವ ಈ ನಿಯಮಗಳನ್ನು ಎಲ್ಲ ವಿದ್ಯುತ್ ವಿತರಣಾ ಕಂಪನಿಗಳು (ಡಿಸ್ಕಾಮ್‍ಗಳು) ಏಕರೂಪವಾಗಿ ಪಾಲಿಸಬೇಕು ಎಂದು ಕೇಂದ್ರ ಸಚಿವರು ಹೇಳುತ್ತಿದ್ದಾರೆ. ಅವರ ಪ್ರಕಾರ, ಸೇವೆಗಳಲ್ಲಿ ತೋರಿಸುವ ಉದಾಸೀನತೆಗೆ ವಿಧಿಸಲು ಉದ್ದೇಶಿಸಿರುವ ದಂಡ ಎಷ್ಟಿರಬೇಕು ಎಂಬುದನ್ನು ವಿದ್ಯುತ್ ಆಯೋಗ ನಿರ್ಧರಿಸುತ್ತದೆ.

ವಿದ್ಯುತ್ ಕಡಿತವನ್ನು ಸಾಮಾನ್ಯವಾಗಿ ಎಲ್ಲಾ ದೇಶವಾಸಿಗಳೂ ಆಗಾಗ ಅನುಭವಿಸುತ್ತಲೇ ಇರುತ್ತಾರೆ. ವಿದ್ಯುತ್ ಉಪಕೇಂದ್ರಗಳು ಮತ್ತು ಸಾಗಣೆ ಮಾರ್ಗಗಳ ಕಳಪೆ ನಿರ್ವಹಣೆ, ವೋಲ್ಟೇಜ್ ಏರಿಳಿತಗಳಿಂದ ಉಂಟಾಗುವ ಮೋಟರ್​ಗಳ ಟ್ರಿಪ್ಪಿಂಗ್, ತಡವಾಗಿ ಪುನರಾರಂಭವಾಗುವ ವಿದ್ಯುತ್ ಸರಬರಾಜು ಹಾಗೂ ಇವೆಲ್ಲದರ ಪರಿಣಾಮವಾಗಿ ಉಂಟಾಗುವ ಅಸ್ತವ್ಯಸ್ತ ಪರಿಸ್ಥಿತಿಗಳೆಲ್ಲವೂ ಜನರ ದೈನಂದಿನ ಅನುಭವಗಳ ಭಾಗವಾಗಿವೆ.

ಈಗ ಹೊಸ ನಿಯಮಗಳ ಪ್ರಕಾರ, ವಿದ್ಯುತ್ ಸರಬರಾಜಿನಲ್ಲಿ ಉಂಟಾಗಬಹುದಾದ ಯಾವುದೇ ಅಡಚಣೆಗಳ ಕುರಿತು ಗ್ರಾಹಕರಿಗೆ ಮೊದಲೇ ತಿಳಿಸಬೇಕಾಗುತ್ತದೆ. ವಿದ್ಯುತ್ ಕಡಿತವಾಗುವ ಸ್ಥಳ, ಕಡಿತಗೊಳಿಸುವ ಕಾರಣ ಮತ್ತು ಸರಬರಾಜನ್ನು ಮರುಸ್ಥಾಪಿಸುವ ಸಮಯವನ್ನು ಎಸ್‍ಎಂಎಸ್ ಮೂಲಕ ತಿಳಿಸಬೇಕಾಗಿದೆ. ಇದಲ್ಲದೇ, ಹೊಸ ಸಂಪರ್ಕಗಳನ್ನು ಕಾಲಮಿತಿಯೊಳಗೆ ನೀಡಬೇಕು ಹಾಗೂ ನಿಷ್ಕ್ರಿಯ ಮೀಟರ್​ಗಳನ್ನು ತಕ್ಷಣವೇ ಹೊಸದಕ್ಕೆ ಬದಲಿಸಬೇಕೆಂದು ಹೊಸದರೊಂದಿಗೆ ತ್ವರಿತವಾಗಿ ಬದಲಾಯಿಸಬೇಕೆಂದು ನಿಯಮಗಳು ಹೇಳುತ್ತವೆ.

ಪ್ರಿಪೇಯ್ಡ್ ಮತ್ತು ಸ್ಮಾರ್ಟ್ ಮೀಟರ್​ಗಳನ್ನು ಒದಗಿಸುವಂತೆ ಕೇಂದ್ರವು 2019ರ ಜನವರಿಯಲ್ಲಿಯೇ ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ಆದರೆ, ನಿರ್ದೇಶನದ ಬಗ್ಗೆ ಯಾವ ರಾಜ್ಯವೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಲ್ಲಿಂಗ್, ಪ್ರಿಪೇಯ್ಡ್ ಮೀಟರ್​ಗಳಲ್ಲಿ ಪಾರದರ್ಶಕತೆ ಮತ್ತು ವಯಸ್ಸಾದವರಿಗೆ ತಮ್ಮ ಮನೆಯಲ್ಲಿ ಸೇವೆಗಳನ್ನು ಒದಗಿಸಬೇಕು ಎಂದು ಹೊಸ ನಿಯಮಗಳು ಹೇಳುತ್ತವೆ. ಒಂದು ವೇಳೆ, ಈ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದರೆ ಖಂಡಿತವಾಗಿ ಅವನ್ನು ಸ್ವಾಗತಿಸಲಾಗುವುದು.

ದೇಶವೊಂದರ ಅಭಿವೃದ್ಧಿಯನ್ನು ಅದರ ತಲಾವಾರು ವಿದ್ಯುತ್ ಬಳಕೆ ಪ್ರಮಾಣದ ಮಾನದಂಡದಿಂದ ಅಳೆಯಲಾಗುತ್ತದೆ. ಚೀನಾದಲ್ಲಿ ತಲಾವಾರು ವಿದ್ಯುತ್ ಬಳಕೆ 4000 ಕಿಲೋ ವ್ಯಾಟ್ ಆಗಿದ್ದರೆ, ಅಮೆರಿಕ, ಯುಎಇ, ತೈವಾನ್ ಮತ್ತು ಇತರ ದೇಶಗಳಲ್ಲಿ ಇದು 10,000 ಕಿ.ವ್ಯಾ. ಭಾರತದಲ್ಲಿ ಈ ವರ್ಷದ ಆರಂಭಿಕ ದಿನಗಳಲ್ಲಿ, ತಲಾ ವಿದ್ಯುತ್ ಬಳಕೆ ಕೇವಲ 1,000 ಕಿ.ವ್ಯಾ. ಮಾತ್ರ. ವಿದ್ಯುತ್ ಅಡಚಣೆ ನಮ್ಮ ದೇಶದಲ್ಲಿ ತೀರಾ ಸಾಮಾನ್ಯವಾಗಿದ್ದು, ಹೆಚ್ಚುವರಿ ವಿದ್ಯುತ್ ಹೊಂದಿರುವ ರಾಜ್ಯಗಳು ಎಂದೇ ಕರೆಯಲ್ಪಡುವ ಗುಜರಾತ್, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಸಹ, ಕೇವಲ ಅರ್ಧ ದಿನ ಮಾತ್ರ ವಿದ್ಯುತ್ ಸರಬರಾಜು ಇರುವ ಸ್ಥಳಗಳಿವೆ.

ದೆಹಲಿಯ ಕೇಜ್ರಿವಾಲ್ ಸರ್ಕಾರವೂ ಸೇರಿದಂತೆ ಹಲವಾರು ರಾಜ್ಯ ಸರ್ಕಾರಗಳು ವಿದ್ಯುತ್ ರಿಯಾಯಿತಿಯ ಭರವಸೆ ನೀಡಿದ್ದರಿಂದ ಡಿಸ್ಕಾಮ್‍ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ರಾಜಕೀಯ ಮೇಲುಗೈ ಪಡೆಯುವ ಉದ್ದೇಶದಿಂದ ಇಂತಹ ಭರವಸೆಗಳನ್ನು ನೀಡಲಾಗುತ್ತದೆ.

2012-13ನೇ ಸಾಲಿನಲ್ಲಿ ಡಿಸ್ಕಾಮ್‍ಗಳ ಬಾಕಿ ರೂ. 3 ಲಕ್ಷ ಕೋಟಿ ತಲುಪಿತ್ತು. ಕೇವಲ ಆರೇ ವರ್ಷಗಳಲ್ಲಿ ಈ ಬಾಕಿ ರೂ. 4.8 ಲಕ್ಷ ಕೋಟಿಗೆ ತಲುಪಿದೆ. ಜನರಿಗೆ ಭರವಸೆ ನೀಡುವ ನಾಯಕರು ಹಣಕಾಸಿನ ಹೊರೆಯ ಜವಾಬ್ದಾರಿ ತೆಗೆದುಕೊಳ್ಳದ್ದರಿಂದ ಇಂತಹ ಪರಿಸ್ಥಿತಿ ಮುಂದುವರಿದುಕೊಂಡು ಬಂದಿದೆ. ರಾಜ್ಯ ಸರ್ಕಾರಗಳು ತಮ್ಮ ಬಾಕಿಗಳನ್ನು ಸಮಯಕ್ಕೆ ಸರಿಯಾಗಿ ತೀರಿಸಿದರೆ ಮಾತ್ರ ಡಿಸ್ಕಾಮ್‍ಗಳ ಕಾರ್ಯಕ್ಷಮತೆ ಸುಧಾರಿಸುತ್ತದೆ. ಬಳಕೆದಾರರಿಗೆ 24 ಗಂಟೆಗಳ ನಿರಂತರ ವಿದ್ಯುತ್ ಸರಬರಾಜು ಮಾಡುವುದಾಗಿ ಕರೆ ನೀಡುತ್ತಿರುವಾಗಲೇ, ಕೃಷಿ ಕ್ಷೇತ್ರಕ್ಕೆ ವಿದ್ಯುತ್ ಸರಬರಾಜಿನ ಅವಧಿಯನ್ನು ನಿರ್ಧರಿಸುವುದು ರಾಜ್ಯ ಮಟ್ಟದ ನಿಯಂತ್ರಣ ಆಯೋಗಗಳು ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಹಾಗಾದರೆ ಕೈಗಾರಿಕಾ ವಲಯಕ್ಕೆ ವಿದ್ಯುತ್ ಸರಬರಾಜು ಬಗ್ಗೆ ನೀತಿ ಏನು?

ನಿರಂತರ ವಿದ್ಯುತ್ ಪೂರೈಕೆ ಆಗುತ್ತಿಲ್ಲವಾದ್ದರಿಂದ ಉತ್ಪಾದನಾ ಪ್ರಮಾಣದ ಕುಗ್ಗುವಿಕೆ ಹಾಗೂ ಉದ್ಯೋಗವಕಾಶಗಳ ನಷ್ಟ ಉಂಟಾಗುತ್ತಿದೆ. ಇದರಿಂದಾಗಿ ಹಲವಾರು ಸಾಮಾಜಿಕ ಆರ್ಥಿಕ ಸಮಸ್ಯೆಗಳು ತಲೆದೋರುವುದರ ಹಿಂದಿನ ಕಾರಣವೂ ಇದೇ ಎಂದು ಯುಎನ್‍ಡಿಪಿ ಹೇಳಿದ ಮಾತುಗಳನ್ನು ಈಗ ನಾವು ನೆನಪಿಸಿಕೊಳ್ಳುವುದು ಸೂಕ್ತ. ಇದು ಹಲವಾರು ಸಾಮಾಜಿಕ-ಆರ್ಥಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಉದ್ಯೋಗ ಒದಗಿಸುವ ಎಲ್ಲಾ ಸಂಸ್ಥೆಗಳು ಮತ್ತು ವ್ಯವಸ್ಥೆಗಳಿಗೆ ವಿದ್ಯುತ್ ಸರಬರಾಜನ್ನು ನಿರಂತರವಾಗಿಸಲು ಸುಧಾರಣೆಗಳನ್ನು ಕೈಗೊಂಡಾಗ ಮಾತ್ರ ದೇಶವು ಹೊಳೆಯುವಂತಹ ಪ್ರಗತಿಯನ್ನು ಸಾಧಿಸಬಲ್ಲುದು.

ABOUT THE AUTHOR

...view details