ಕೋವಿಡ್-19ಗೆ (Covid-19) ಹೆಚ್ಚು ಒಳಗಾದವರು ಅಥವಾ ಕೊರೊನಾ ಸೋಂಕಿನಿಂದ ಹೆಚ್ಚು ಮೃತಪಟ್ಟವರು ಪುರುಷರಾಗಿದ್ದರೂ ಕೂಡ ವೈರಸ್ಗೆ ತುತ್ತಾದ ಮಹಿಳೆಯರಿಗೆ ಹೆಚ್ಚಿನ ವಿಶ್ರಾಂತಿ ಹಾಗೂ ಕಾಳಜಿಯ ಅಗತ್ಯವಿದೆ. ಯಾಕೆಂದರೆ, ದೀರ್ಘಕಾಲ ಕೋವಿಡ್ಗೆ ಒಳಗಾದ ಮಹಿಳೆಯರು (Women With Long COVID Infection) ಚೇತರಿಸಿಕೊಂಡ ಕೆಲವು ತಿಂಗಳುಗಳಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕೆಲ ಸಮಸ್ಯೆಗಳ ( lung-related limitations) ಸುಳಿಯಲ್ಲಿ ಸಿಲುಕುತ್ತಿದ್ದಾರೆ.
ಪುರುಷರಿಗೆ ಹೋಲಿಸಿದರೆ ಮಹಿಳೆಯರು ವಯಸ್ಸಿಗೆ ಸಂಬಂಧಿಸಿದ ದೈಹಿಕ ಅಸಾಮರ್ಥ್ಯಕ್ಕೆ ಬೇಗನೆ ಒಳಗಾಗುತ್ತಾರೆ. ದೀರ್ಘಕಾಲದ ಕೊರೊನಾ ಸೋಂಕು ಹೊಂದಿರುವ ಮಹಿಳೆಯರು ನಿರಂತರ ಹೃದಯ ಮತ್ತು ಶ್ವಾಸಕೋಶದ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಯಿದೆ ಎಂದು Experimental Physiology ಎಂಬ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನವೊಂದು ಹೇಳುತ್ತದೆ. ಹೀಗಾಗಿ, ಮಹಿಳೆಯರ ಮೇಲೆ ಹೆಚ್ಚಿನ ಕಾಳಜಿ ವಹಿಸಬೇಕಿದೆ.
ಇದನ್ನೂ ಓದಿ: ವಿವಾಹ- ಗರ್ಭಧಾರಣೆ ವಿಳಂಬ: ಮಹಿಳೆಯರಲ್ಲಿ ಬಂಜೆತನ ಹೆಚ್ಚಳ
ಅಮೆರಿಕದ ಬ್ಲೂಮಿಂಗ್ಟನ್ನ ಇಂಡಿಯಾನಾ ವಿಶ್ವವಿದ್ಯಾಲಯದ ( Indiana University Bloomington, US) ಶರೀರಶಾಸ್ತ್ರಜ್ಞರು ನಡೆಸಿದ ಅಧ್ಯಯನದಲ್ಲಿ ಈ ಮಾಹಿತಿ ತಿಳಿದು ಬಂದಿದೆ. ಸೋಂಕಿತರಲ್ಲದ, ಸೌಮ್ಯ ಲಕ್ಷಣಗಳುಳ್ಳ ಸೋಂಕಿತ ಮಹಿಳೆಯರು ಹಾಗೂ ತೀವ್ರ ಸೋಂಕಿಗೆ ಒಳಗಾದ ಮಹಿಳೆಯರ ಮೇಲೆ ಅಧ್ಯಯನ ನಡೆಸಲಾಗಿದೆ.