ನವದೆಹಲಿ:ಕೋವಿಡ್-19 ಸಂಕಷ್ಟದಲ್ಲಿ ದೇಶಕ್ಕೆ ಸಹಾಯ ಮಾಡಲು ವಿದೇಶಗಳು ನೀಡಿದ ನೆರವಿನ ಮಾಹಿತಿಯನ್ನು ಕೇಂದ್ರ ಸರ್ಕಾರ ಮುಚ್ಚಿಡುತ್ತಿರುವುದೇಕೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ವಿಶ್ವಾದ್ಯಂತದಿಂದ ಭಾರತಕ್ಕೆ ನೆರವಿನ ರೂಪದಲ್ಲಿ ಬಂದಿರುವ ವೈದ್ಯಕೀಯ ಸಹಾಯದ ಬಗ್ಗೆ ಭಾರತ ಸರ್ಕಾರ ಪಾರದರ್ಶಕವಾಗಿ ನಡೆದುಕೊಳ್ಳುತ್ತಿಲ್ಲವೇಕೆ ಎಂದೂ ಅವರು ಕೇಳಿದ್ದಾರೆ.
"ಕೋವಿಡ್ ನೆರವಿನ ಬಗ್ಗೆ ಉದ್ಭವಿಸುವ ಪ್ರಶ್ನೆಗಳು: ಭಾರತಕ್ಕೆ ಏನೇನು ನೆರವು ಹರಿದು ಬಂದಿದೆ? ಅದೆಲ್ಲ ಈಗ ಎಲ್ಲಿದೆ? ಅದರಿಂದ ಯಾರಿಗೆಲ್ಲ ಪ್ರಯೋಜನವಾಗಿದೆ? ಅದು ರಾಜ್ಯಗಳಿಗೆ ಯಾವ ಪ್ರಮಾಣದಲ್ಲಿ ಹಂಚಿಕೆಯಾಗಿದೆ? ಪಾರದರ್ಶಕತೆ ಏಕಿಲ್ಲ? ಭಾರತ ಸರ್ಕಾರದ ಬಳಿ ಈ ಬಗ್ಗೆ ಏನಾದರೂ ಉತ್ತರವಿದೆಯೇ?" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.