ಕರ್ನಾಟಕ

karnataka

ETV Bharat / bharat

Withdrawal of farm laws: ಪ್ರತಿಭಟನೆಯಿಂದ ಸಾಧಿಸಲಾಗದ್ದು, ಚುನಾವಣೆ ಭಯದಿಂದ ಸಾಧಿಸಬಹುದು: ಚಿದಂಬರಂ ವ್ಯಂಗ್ಯ - ಚುನಾವಣೆ ಭಯ

ಚುನಾವಣೆ ಭಯದಿಂದ ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾನೂನುಗಳನ್ನು ಹಿಂಪಡೆದಿದ್ದಾರೆ ಎಂದು ಕಾಂಗ್ರೆಸ್​ ಹಿರಿಯ ನಾಯಕ ಪಿ. ಚಿದಂಬರಂ ಟ್ವೀಟ್​ ಮಾಡಿದ್ದಾರೆ.

ಪಿ. ಚಿದಂಬರಂ
ಪಿ. ಚಿದಂಬರಂ

By

Published : Nov 19, 2021, 11:33 AM IST

ನವದೆಹಲಿ: ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಕೊನೆಗೂ ಮೂರು ಕೃಷಿ ಕಾನೂನುಗಳನ್ನು ರದ್ದು ಮಾಡುವುದಾಗಿ ತಿಳಿಸಿದೆ (withdrawal of the three farm laws). ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ ಹಿರಿಯ ನಾಯಕ ಪಿ. ಚಿದಂಬರಂ, ಮುಂಬರಲಿರುವ ಚುನಾವಣೆಯ ಭಯದಿಂದ ಪ್ರಧಾನಿ ನರೇಂದ್ರ ಮೋದಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ (P. Chidambaram tweet)​ ಮಾಡಿರುವ ಅವರು, "ಪ್ರಜಾಸತ್ತಾತ್ಮಕ ಪ್ರತಿಭಟನೆಗಳಿಂದ ಏನನ್ನು ಸಾಧಿಸಲಾಗದೋ ಅದನ್ನು ಮುಂಬರುವ ಚುನಾವಣೆಯ ಭಯದಿಂದ ಸಾಧಿಸಬಹುದು" ಎಂದು ವ್ಯಂಗ್ಯವಾಡಿದ್ದಾರೆ.

"ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವ ಕುರಿತು ಪ್ರಧಾನ ಮಂತ್ರಿಯವರ ಘೋಷಣೆಯು ಯಾವುದೇ ನೀತಿಯ ಬದಲಾವಣೆ ಅಥವಾ ಹೃದಯದ ಬದಲಾವಣೆಯಿಂದ ಪ್ರೇರಿತವಾಗಿಲ್ಲ. ಇದು ಚುನಾವಣೆಯ ಭಯದಿಂದ ಪ್ರಚೋದಿಸಲ್ಪಟ್ಟಿದೆ ಎಂದಿದ್ದಾರೆ.

ಇದನ್ನೂ ಓದಿ: Repeal of 3 farm laws: ಅನ್ಯಾಯದ ವಿರುದ್ಧದ ವಿಜಯ ಎಂದ ರಾಗಾ ; ಸಂಸತ್ತಿನಲ್ಲಿ ಕೃಷಿ ಕಾನೂನುಗಳು ರದ್ದಾಗೋ ವರೆಗೂ ಪ್ರತಿಭಟನೆ - ಟಿಕಾಯತ್​

ಅದೇನೇ ಇರಲಿ, ಇದು ರೈತರಿಗೆ ಮತ್ತು ಈ ಕಾನೂನುಗಳ ವಿರುದ್ಧ ಅಚಲವಾಗಿ ನಿಂತಿದ್ದ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ವಿಜಯವಾಗಿದೆ" ಎಂದು ಚಿದಂಬರಂ ಟ್ವೀಟ್​ ಮಾಡಿದ್ದಾರೆ.

ABOUT THE AUTHOR

...view details