ತಮಿಳುನಾಡು: ಐಐಟಿ ಮದ್ರಾಸ್‌ನ ಪಿಹೆಚ್‌ಡಿ ಸಂಶೋಧನಾ ವಿದ್ಯಾರ್ಥಿಯೊಬ್ಬರು ಚೆನ್ನೈ ನಗರದ ವೆಲಚೇರಿ ವಸತಿ ಪ್ರದೇಶದಲ್ಲಿನ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಾವಿಗೆ ಶರಣಾಗುವ ಕೆಲವೇ ಕ್ಷಣಗಳ ಮೊದಲು, ತಮ್ಮ ಫೋನ್ನಲ್ಲಿ ಸ್ಟೇಟಸ್ ಹಾಕಿದ ವಿದ್ಯಾರ್ಥಿ "ಕ್ಷಮಿಸಿ, ಚೆನ್ನಾಗಿಲ್ಲ, ಸಾಕು" ಪೋಸ್ಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳದ 32 ವರ್ಷದ ಸಚಿನ್ ಕುಮಾರ್ ಜೈನ್ ಮೃತ ವಿದ್ಯಾರ್ಥಿ. ಇವರು ಶುಕ್ರವಾರ ಬೆಳಗ್ಗೆ ಎಂದಿನಂತೆ ಐಐಟಿ-ಮದ್ರಾಸ್ ಕಾಲೇಜ್ಗೆ ಹೋಗಿದ್ದರು. ಮಧ್ಯಾಹ್ನ 12 ರ ಸುಮಾರಿಗೆ ಇಬ್ಬರು ಸ್ನೇಹಿತರಿಗೆ ಮಾತ್ರ ಮಾಹಿತಿ ನೀಡಿ ತಾವು ವಾಸವಿದ್ದ ಬಾಡಿಗೆ ಮನೆಗೆ ಹಿಂದಿರುಗಿದರು. ರೂಮ್ಗೆ ಬಂದ ಕೂಡಲೇ ತಮ್ಮ ಫೋನ್ನಲ್ಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವೆಲಾಚೇರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ :ಗಗನಸಖಿ ಅನುಮಾನಾಸ್ಪದ ಸಾವು ಪ್ರಕರಣ: ಹತ್ಯೆ ಪ್ರಕರಣ ದಾಖಲು, ಪ್ರಿಯಕರ ಪೊಲೀಸ್ ವಶಕ್ಕೆ
ತರಗತಿ ಮಧ್ಯದಲ್ಲೇ ಹೋಗುತ್ತಿರುವುದನ್ನು ಗಮನಿಸಿದ ಕೆಲ ಸ್ನೇಹಿತರು ಬಳಿಕ ಏನಾಯಿತೆಂದು ವಿಚಾರಿಸಲು ಸಚಿನ್ ಕುಮಾರ್ ಬಾಡಿಗೆ ಮನೆಗೆ ಬಂದಾಗ ಬಾಗಿಲು ಬಡಿದಿದ್ದಾರೆ. ಬಳಿಕ ಒಳಗಿನಿಂದ ಬೀಗ ಹಾಕಿರುವುದು ಕಂಡುಬಂದಿದ್ದು, ಕೂಡಲೇ ಬಾಗಿಲು ಒಡೆದು ನೋಡಿದಾಗ ಆತ ಶವವಾಗಿ ಪತ್ತೆಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ವೆಲಚೇರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರಾಯಪೆಟ್ಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.