ನವದೆಹಲಿ: ಭಾರತದಲ್ಲಿ ಭೂಮಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಈ ವಿಷಯವನ್ನ ಅಂತಾರಾಷ್ಟ್ರೀಯ ವೇದಿಕೆ ಮುಂದಿಟ್ಟಿದ್ದು, ಪವಿತ್ರ ಭೂಮಿಯನ್ನು ನಾವು ತಾಯಿಯಂತೆ ಭಾವಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ವಿಶ್ವಸಂಸ್ಥೆ ವಾಸ್ತವಿಕ ಉನ್ನತ ಮಟ್ಟದ ಸಂವಾದದಲ್ಲಿ ಮರು ಭೂಮೀಕರಣ, ಭೂ ನಾಶ ಮತ್ತು ಬರಗಾಲದ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 2030ರ ವೇಳೆಗೆ ಅವನತಿಯತ್ತ ಸಾಗಿರುವ 26 ಮಿಲಿಯನ್ ಹೆಕ್ಟೇರ್ ಪ್ರದೇಶವನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಹೆಚ್ಚುವರಿಯಾಗಿ 2.5 ರಿಂದ 3 ಬಿಲಿಯನ್ ಟನ್ ಇಂಗಾಲವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ಪಾಸಿಟಿವಿಟಿ ದರ ಶೇ 4.56 ಕ್ಕೆ ಇಳಿಕೆ: 6,835 ಜನರಿಗೆ ಸೋಂಕು ದೃಢ
ಅವನತಿಯ ಅಂಚಿನಲ್ಲಿರುವ ಭೂಮಿಯ ರಕ್ಷಣೆಗಾಗಿ ಕೆಲವು ವಿಶೇಷ ವಿಧಾನಗಳನ್ನು ಅನುಸರಿಸುತ್ತಿದ್ದೇವೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಗುಜರಾತ್‌ನ ಕಚ್ ವ್ಯಾಪ್ತಿಯ ಬನ್ನಿ ಪ್ರದೇಶ. ಇಲ್ಲಿನ ಭೂಪ್ರದೇಶದಲ್ಲಿ ಹಸಿರು ನಾಶವಾಗಿದ್ದು, ಮಳೆಯ ಪ್ರಮಾಣವೂ ತೀರಾ ಕಡಿಮೆಯಾಗಿತ್ತು. ಹಲವು ಕ್ರಮಗಳನ್ನು ಕೈಗೊಂಡು ಇಲ್ಲಿ ಹಸರೀಕರಣವಾದ ಬಳಿಕ ಭೂ ಅವನತಿ ತಡೆಯಲಾಗಿದೆ.
ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭೂಮಿಯ ಅವನತಿ ತಡೆಯುವುದು ಕೂಡ ಒಂದು ಹೊಸ ಸಾವಾಲಾಗಿದೆ. ಭೂ ಸಂರಕ್ಷಣೆಗಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆಗೂಡಿ ಭಾರತ ಕಾರ್ಯತಂತ್ರಗಳನ್ನು ರೂಪಿಸಲಿದೆ. ಇದಕ್ಕಾಗಿ ವೈಜ್ಞಾನಿಕ ಕಾರ್ಯ ವಿಧಾನಗಳನ್ನು ಪ್ರೋತ್ಸಾಹಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.