ಕರ್ನಾಟಕ

karnataka

ETV Bharat / bharat

ವಾರದ ರಾಶಿ ಭವಿಷ್ಯ: ಪ್ರೇಮಿಗಳಿಗೆ ಉತ್ತಮ, ಉದ್ಯೋಗಿಗಳಿಗೆ ಅನುಕೂಲಕರ, ಹೂಡಿಕೆದಾರರಿಗೆ ಸಕಾಲ - panchangam

Weekly Horoscope: ನವೆಂಬರ್ 26ರಿಂದ ಡಿಸೆಂಬರ್ 2ರವರೆಗಿನ ವಾರದ ಭವಿಷ್ಯ ಹೀಗಿದೆ.

Weekly Horoscope
ವಾರದ ರಾಶಿ ಭವಿಷ್ಯ

By ETV Bharat Karnataka Team

Published : Nov 26, 2023, 7:18 AM IST

ಮೇಷ: ವೈವಾಹಿಕ ಬದುಕಿನಲ್ಲಿ ಪರಸ್ಪರ ಅನ್ಯೋನ್ಯತೆ, ಪ್ರೇಮ ಹೆಚ್ಚಲಿದೆ. ನಿಮ್ಮ ಸಂಬಂಧವನ್ನು ಚೆನ್ನಾಗಿ ನಿಭಾಯಿಸಲಿದ್ದೀರಿ. ಕಾಲವು ಮಕ್ಕಳಿಗೆ ಪ್ರಯೋಜನಕಾರಿ ಎನಿಸಲಿದೆ. ಈ ಸಮಯವು ಪ್ರೇಮ ಜೀವನಕ್ಕೆ ಅನುಕೂಲಕರ. ನಿಮ್ಮ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ವಾರದ ಆರಂಭದಿಂದಲೇ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಮನಸ್ಸು ಚುರುಕಿನಿಂದ ಕೆಲಸ ಮಾಡಲಿದ್ದು ನೀವು ಏನಾದರೂ ಹೊಸತನ್ನು ಮಾಡಲು ಯತ್ನಿಸಲಿದ್ದೀರಿ. ವೆಚ್ಚಗಳು ಉಂಟಾಗಬಹುದು. ಆದರೆ ನಿಮಗೆ ಹೆಚ್ಚೇನೂ ಸಮಸ್ಯೆ ಉಂಟಾಗದು. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ಕಚೇರಿಯಲ್ಲಿ ನಿಮ್ಮ ಸ್ಥಾನಕ್ಕೆ ಧಕ್ಕೆಯನ್ನುಂಟು ಮಾಡುವ ಯಾವುದೇ ಮಾತನ್ನು ಯಾರಿಗೂ ಹೇಳಬೇಡಿ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ಸಮಯವು ಒಳ್ಳೆಯದು. ನೀವು ಯಶಸ್ಸಿನ ಮೆಟ್ಟಿಲನ್ನು ಏರಲಿದ್ದೀರಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಚೆನ್ನಾಗಿ ಗಮನ ನೀಡಬೇಕಾಗುತ್ತದೆ. ಗುರುವನ್ನು ಭೇಟಿ ಮಾಡುವ ಮೂಲಕ ನಿಮ್ಮ ಈ ಸಮಸ್ಯೆಯನ್ನು ಬಗೆಹರಿಸಬಹುದು. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಈ ವಾರವು ಪ್ರಯಾಣಿಸುವುದಕ್ಕೆ ಅನುಕೂಲಕರ.

ವೃಷಭ: ವೈವಾಹಿಕ ಬದುಕಿನಲ್ಲಿ ಒತ್ತಡ ಹೆಚ್ಚಲಿದೆ. ಇದರಿಂದ ನಿಮಗೆ ಚಿಂತೆ ಕಾಡಲಿದೆ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನಿಮ್ಮ ಸಂಬಂಧದಲ್ಲಿ ಪ್ರೇಮ ಮತ್ತು ಪ್ರಣಯವು ಹೆಚ್ಚಲಿದೆ. ನೀವು ತೀರ್ಥಯಾತ್ರೆ ಅಥವಾ ಮನೆಯಿಂದ ದೂರದಲ್ಲಿರುವ ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡಬಹುದು. ಅಲ್ಲಿಗೆ ಹೋಗಿ ಧ್ಯಾನಿಸಲು ಯತ್ನಿಸಿ. ಇದರಿಂದ ನಿಮಗೆ ಶಾಂತಿ ದೊರೆಯಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ನಿರತರಾಗಲಿದ್ದಾರೆ. ಅವರು ಸಾಕಷ್ಟು ಓಡಾಡುವ ಅಗತ್ಯತೆ ಉಂಟಾಗಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ತನ್ನ ಕಠಿಣ ಶ್ರಮದ ಕಾರಣ ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನಿಮ್ಮ ಪಾಲುದಾರರು ಸಹ ಕಠಿಣ ಶ್ರಮವನ್ನು ತೋರಲಿದ್ದು, ನಿಮ್ಮ ವ್ಯವಹಾರದಲ್ಲಿ ಕ್ಷಿಪ್ರ ಪ್ರಗತಿ ಉಂಟಾಗಲಿದೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನಕ್ಕೆ ಗಮನ ನೀಡಬೇಕು. ಬುದ್ಧಿವಂತ ವ್ಯಕ್ತಿಯ ಮಾರ್ಗದರ್ಶನದ ಅಡಿಯಲ್ಲಿ ಅಧ್ಯಯನ ಮಾಡಿದರೆ ನಿಮಗೆ ಯಶಸ್ಸು ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗುವ ಸಾಧ್ಯತೆ ಇದೆ. ವಾರದ ಕೊನೆಯ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮಿಥುನ: ಈ ವಾರದಲ್ಲಿ ನಿಮ್ಮ ವೈವಾಹಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಪ್ರೇಮ ಜೀವನದಲ್ಲಿ ಸುಧಾರಣೆ ತರಲು ಸಹ ನಿಮಗೆ ಸಾಧ್ಯವಾಗಲಿದೆ. ಅವರೊಂದಿಗೆ ನಿಮ್ಮ ಬಂಧದಲ್ಲಿ ಸುಧಾರಣೆ ಉಂಟಾಲಿದ್ದು, ಅವರಿಗೆ ವಿವಾಹ ಪ್ರಸ್ತಾವನೆಯನ್ನು ನಿವೇದಿಸಬಹುದು. ಈ ವಾರ ನಿಮಗೆ ಕೆಲವೊಂದು ವೆಚ್ಚಗಳು ಉಂಟಾಗಬಹುದು. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗದೇ ಇದ್ದರೂ ವಿಪರೀತ ವೆಚ್ಚದ ಕಾರಣ ಉಳಿತಾಯಕ್ಕೆ ಪೆಟ್ಟು ಬೀಳಲಿದೆ. ಕುಟುಂಬದ ಸದಸ್ಯರ ಆರೋಗ್ಯವು ನಿಮ್ಮನ್ನು ಕಾಡಬಹುದು. ನಿಮ್ಮ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಉಂಟಾದೀತು. ಹೀಗಾಗಿ ಎಚ್ಚರಿಕೆಯಿಂದ ಇರಿ. ನಿಮ್ಮ ಎದುರಾಳಿಗಳ ಕುರಿತು ಒಂದಷ್ಟು ಎಚ್ಚರಿಕೆ ವಹಿಸಿ. ನ್ಯಾಯಾಲಯದ ವಿಷಯದಲ್ಲಿ ಪರಿಸ್ಥಿತಿಯು ಚೆನ್ನಾಗಿರಲಿದೆ. ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸಿ. ಅದೃಷ್ಟದ ಬಲದಿಂದ ನೀವು ಕೆಲಸದಲ್ಲಿ ಯಶಸ್ಸು ಗಳಿಸಲಿದ್ದೀರಿ. ವ್ಯವಹಾರದಲ್ಲಿನ ವೆಚ್ಚದಲ್ಲಿ ಹೆಚ್ಚಳ ಕಾಣಿಸಿಕೊಳ್ಳಬಹುದು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನಕ್ಕಾಗಿ ದೂರದ ಊರಿಗೆ ಹೋಗುವ ಅನಿವಾರ್ಯತೆ ಉಂಟಾದೀತು. ಮನೆಯಿಂದ ದೂರ ನಿಂತು ನೀವು ಸ್ಪರ್ಧೆಗೆ ಸಿದ್ಧತೆ ನಡೆಸಬಹುದು. ಸದ್ಯಕ್ಕೆ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸದು. ವಾರದ ನಡುವಿನ ಮತ್ತು ಕೊನೆಯ ಕೆಲವು ದಿನಗಳು ಪ್ರಯಾಣಿಸಲು ಉತ್ತಮ.

ಕರ್ಕಾಟಕ: ವೈವಾಹಿಕ ಬದುಕಿನ ಕುರಿತು ಮಾತನಾಡುವುದಾದರೆ, ಕೆಲ ಕಾಲದಿಂದ ನೀವು ಏಕತಾನತೆಯ ಬದುಕನ್ನು ಸಾಗಿಸುತ್ತಿರಬಹುದು. ಆದರೆ ಈಗ ನೀವು ಅದನ್ನೆಲ್ಲವನ್ನು ಬದಿಗೊತ್ತಿ ನಿಮ್ಮ ಜೀವನ ಸಂಗಾತಿಯ ಜೊತೆಗಿನ ಆಪ್ತತೆಯನ್ನು ಹೆಚ್ಚಿಸಲು ಯತ್ನಿಸಬಹುದು. ಈ ವಿಚಾರದಲ್ಲಿ ಪ್ರಯತ್ನ ಪಟ್ಟರೆ ನಿಮಗೆ ಯಶಸ್ಸು ದೊರೆಯಲಿದೆ. ವಾರದ ಆರಂಭದಲ್ಲಿ ನಿಮ್ಮ ಆದಾಯದಲ್ಲಿ ಹಠಾತ್‌ ಆಗಿ ಹೆಚ್ಚಳ ಉಂಟಾಗುವ ಕಾರಣ ನಿಮ್ಮ ಮನಸ್ಸಿನಲ್ಲಿ ಸಂತಸದ ಭಾವನೆ ಇರಲಿದೆ. ಅಲ್ಲದೆ ನೀವು ಸರ್ಕಾರಿ ವಲಯದಿಂದ ಹಣವನ್ನು ಪಡೆಯಲಿದ್ದೀರಿ. ನೀವು ವ್ಯವಹಾರ ಪಾಲುಗಾರಿಕೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ನೀವು ಹೊಸ ಕೆಲಸವನ್ನು ಪಡೆಯಬಹುದು. ಹೂಡಿಕೆ ಮಾಡಲು ಇದು ಸಕಾಲ. ಉದ್ಯೋಗದಲ್ಲಿರುವವರ ಬದುಕಿನಿಂದ ಒತ್ತಡವು ದೂರಗೊಳ್ಳಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ವಿದ್ಯಾರ್ಥಿಗಳು ಅಧ್ಯಯನವನ್ನು ಆನಂದಿಸಲಿದ್ದಾರೆ. ಕೆಲವೊಂದು ಸಮಸ್ಯೆಗಳ ನಡುವೆಯೂ ಹೊಸ ಕೌಶಲ್ಯವನ್ನು ಅವರು ಕಲಿತುಕೊಳ್ಳಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ನಿಮ್ಮ ಆಹಾರ ಕ್ರಮದ ಕುರಿತು ಕಾಳಜಿ ವಹಿಸಿ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಸಿಂಹ: ವೈವಾಹಿಕ ಬದುಕನ್ನು ಕಾಡುತ್ತಿರುವ ಚಿಂತೆಯು ದೂರಗೊಳ್ಳಲಿದ್ದು ಸಂಬಂಧವು ಗಟ್ಟಿಗೊಳ್ಳಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ನೀವು ಪ್ರವಾಸಕ್ಕೆ ಹೋಗಬಹುದು. ನಿಮ್ಮ ಗೆಳೆಯರ ಜೊತೆ ಮೋಜು ಅನುಭವಿಸಲು ನಿಮಗೆ ಅವಕಾಶ ಸಿಗಬಹುದು. ಆದರೆ ನಿಮ್ಮ ತಾಯಿಯ ಆರೋಗ್ಯದಲ್ಲಿ ಕುಸಿತ ಉಂಟಾಗಬಹುದು. ಹೀಗಾಗಿ ಅವರ ಕುರಿತು ಕಾಳಜಿ ವಹಿಸಿ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕುದಾದ ಫಲ ದೊರೆಯಲಿದೆ. ಇದರಿಂದಾಗಿ ಒಳ್ಳೆಯ ಲಾಭ ದೊರೆಯಲಿದೆ. ಈ ವಾರದಲ್ಲಿ ನೀವು ಹೆಚ್ಚಿನ ಪ್ರೋತ್ಸಾಹ ಪಡೆಯುವ ಅಗತ್ಯವಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳು ವಿಶ್ವಾಸಾರ್ಹವಲ್ಲದ ವ್ಯಕ್ತಿಯನ್ನು ಅವಲಂಬಿಸಬೇಕಾದೀತು. ಹೀಗಾಗಿ ಎಚ್ಚರಿಕೆಯಿಂದ ಇರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ನಿಮಗೆ ಈ ವಾರವು ಒಳ್ಳೆಯದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ಹೊಟ್ಟೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಈ ಕುರಿತು ಎಚ್ಚರಿಕೆ ವಹಿಸಿ. ಚರ್ಮದ ಅಲರ್ಜಿ ಮತ್ತು ರಕ್ತದೊತ್ತಡದಂತಹ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಕನ್ಯಾ: ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಪ್ರೀತಿಯನ್ನು ಅನುಭವಿಸಲಿದ್ದು, ಸಮಸ್ಯೆಗಳು ದೂರಗೊಳ್ಳಲಿವೆ. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ನಿಮಗೆ ಹಠಾತ್‌ ಆಗಿ ಆರ್ಥಿಕ ಲಾಭ ಉಂಟಾಗಲಿದೆ. ನಿಮ್ಮ ಅತ್ತೆ ಮಾವಂದಿರ ಬೆಂಬಲವು ನಿಮಗೆ ದೊರೆಯಲಿದೆ. ಕೆಲವೊಂದು ಪ್ರಮುಖ ಕೆಲಸಗಳಲ್ಲಿ ಕುಟುಂಬದ ಹಿರಿಯ ವ್ಯಕ್ತಿಯ ಸಂಪೂರ್ಣ ಬೆಂಬಲ ನಿಮಗೆ ದೊರೆಯಲಿದೆ. ಅವರ ಕೃಪೆಯ ಕಾರಣ ಬಾಕಿ ಉಳಿದಿರುವ ನಿಮ್ಮ ಕೆಲಸವು ಪೂರ್ಣಗೊಳ್ಳಲಿದೆ. ನೀವು ಸಾಲವನ್ನು ಪಡೆದುಕೊಂಡಿದ್ದರೆ ಈ ಅವಧಿಯಲ್ಲಿ ನಿಮ್ಮ ವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನೀವು ನಿಮ್ಮ ಪ್ರಾಮಾಣಿಕತೆಯ ಫಲವನ್ನು ಪಡೆಯಲಿದ್ದೀರಿ. ವ್ಯವಹಾರ ನಡೆಸಲು ಈ ಸಮಯ ಅನುಕೂಲಕರ. ವಿದ್ಯಾರ್ಥಿಗಳು ಅಧ್ಯಯನಕ್ಕೆ ಗಮನ ನೀಡಬೇಕು. ನೀವು ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ಆದರೂ, ಸದ್ಯಕ್ಕೆ ಯಾವುದೇ ದೊಡ್ಡ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಕಂಡು ಬರುವುದಿಲ್ಲ. ವಾರದ ಮಧ್ಯ ಭಾಗವು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ತುಲಾ: ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ವಿವಾಹಿತ ಜನರು ವೈವಾಹಿಕ ಜೀವನವನ್ನು ಆನಂದಿಸಲಿದ್ದಾರೆ. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ವಾರದ ಆರಂಭದಲ್ಲಿ ನೀವು ಒಳ್ಳೆಯ ಲಾಭ ಗಳಿಸಲಿದ್ದೀರಿ. ವ್ಯವಹಾರ ಅಥವಾ ನಿಮ್ಮ ಜೀವನ ಸಂಗಾತಿಯಿಂದ ನೀವು ಪಡೆಯಲಿದ್ದು, ಈ ಸಮಯದ ಸಂಪೂರ್ಣ ಲಾಭವನ್ನು ಗಳಿಸಲಿದ್ದೀರಿ. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಖರ್ಚುವೆಚ್ಚಗಳು ಉಂಟಾಗಬಹುದು. ಆದಾಯದಲ್ಲಿ ಹೆಚ್ಚಳ ಉಂಟಾಗುವ ಕಾರಣ ನಿಮಗೆ ಯಾವುದೇ ಸಮಸ್ಯೆ ಉಂಟಾಗದು. ಕೆಲಸದ ದೃಷ್ಟಿಯಿಂದ ಈ ಸಮಯ ಅನುಕೂಲಕರ. ನಿಮ್ಮ ಪ್ರಯತ್ನಗಳು ಯಶಸ್ವಿಯಾಗಲಿದ್ದು, ನೀವು ಪ್ರಗತಿ ಸಾಧಿಸಲಿದ್ದೀರಿ. ಈ ವಾರ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಫಲ ದೊರೆಯಲಿದೆ. ನೀವು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವುದಾದರೆ, ವಾರದ ಆರಂಭ ಮತ್ತು ಕೊನೆಯ ದಿನಗಳು ಉತ್ತಮ. ನಿಮ್ಮ ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸುವುದು ಅಗತ್ಯ.

ವೃಶ್ಚಿಕ: ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನದಲ್ಲಿ ಒತ್ತಡವನ್ನು ಅನುಭವಿಸಬಹುದು. ನಿಮ್ಮ ವರ್ತನೆಯೇ ಇದಕ್ಕೆ ಕಾರಣವೆನಿಸಲಿದೆ. ಹೀಗಾಗಿ ನಿಮ್ಮನ್ನು ನೀವು ನಿಯಂತ್ರಿಸಿ. ಆಗ ಮಾತ್ರವೇ ಸಂಬಂಧವು ಚೆನ್ನಾಗಿ ಮುಂದುವರಿಯಲಿದೆ. ಪ್ರೇಮ ಜೀವನಕ್ಕೆ ಸಮಯವು ಚೆನ್ನಾಗಿದೆ. ನೀವಿಬ್ಬರೂ ಒಂದೇ ರೀತಿಯ ಆಸಕ್ತಿಗಳನ್ನು ಹೊಂದಿರಲಿದ್ದು, ಸಂಬಂಧಕ್ಕೆ ಇನ್ನಷ್ಟು ಮೆರುಗು ಸಿಗಲಿದೆ. ನಿಮ್ಮ ಆದಾಯವನ್ನು ಇನ್ನಷ್ಟು ಹೆಚ್ಚಿಸುವುದಕ್ಕಾಗಿ ಯೋಚಿಸಲಿದ್ದೀರಿ. ಯಾರಾದರೂ ವ್ಯಕ್ತಿಯಿಂದ ಅಥವಾ ಬ್ಯಾಂಕಿನಿಂದ ಸಾಲವನ್ನು ತೆಗೆದುಕೊಳ್ಳಲು ನೀವು ಯೋಚಿಸಿದರೆ ಸ್ವಲ್ಪ ಸಮಯ ಕಾಯುವುದು ಒಳ್ಳೆಯದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು, ಅವರ ವ್ಯವಹಾರದಲ್ಲಿ ನೆರವು ನೀಡಬಲ್ಲ ಕೆಲ ದೊಡ್ಡ ವ್ಯಕ್ತಿಗಳನ್ನು ಭೇಟಿಯಾಗಲಿದ್ದಾರೆ. ಸದ್ಯಕ್ಕೆ, ಆಸ್ತಿಗೆ ಸಂಬಂಧಿಸಿದ ವಿಷಯವು ನಿಮ್ಮ ಗಮನ ಸೆಳೆಯಬಹುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಒಂದಷ್ಟು ಹಿನ್ನಡೆ ಅನುಭವಿಸಬಹುದು. ಇದನ್ನು ಗಮನದಲ್ಲಿಡಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಒತ್ತಡವನ್ನು ದೂರವಿಡಿ. ವಾರದ ಕೊನೆಯ ದಿನಗಳು ಮಾತ್ರವೇ ಪ್ರಯಾಣಕ್ಕೆ ಅನುಕೂಲಕರ.

ಧನು:ನೀವು ಮತ್ತು ನಿಮ್ಮ ಮಕ್ಕಳು ಸೇರಿ ಮನೆಗಾಗಿ ಏನಾದರೂ ಒಳ್ಳೆಯದನ್ನು ಮಾಡಬಹುದು. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆ ಎದುರಿಸಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಒಳ್ಳೆಯದು. ನಿಮ್ಮ ಪ್ರೇಮ ಸಂಬಂಧವು ವೈವಾಹಿಕ ಸಂಬಂಧವಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ನಿಮ್ಮ ಕೌಟುಂಬಿಕ ಬದುಕಿನಲ್ಲಿ ಒಂದಷ್ಟು ಅಶಾಂತಿ ಉಂಟಾಗಬಹುದು. ಉದ್ಯೋಗಿಗಳ ಪಾಲಿಗೆ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಬೇಕಾದ ಸನ್ನಿವೇಶವು ಎದುರಾಗಬಹುದು. ಇದೇ ವೇಳೆ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಕಠಿಣ ಶ್ರಮದ ನಂತರವೂ ನಿರೀಕ್ಷಿತ ಫಲಿತಾಂಶವನ್ನು ಪಡೆಯದೆ ಇರಬಹುದು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಕಠಿಣ ಶ್ರಮ ತೋರಬೇಕು. ಆದರೂ ನಿಮ್ಮ ಕಠಿಣ ಶ್ರಮಕ್ಕೆ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಸ್ವಲ್ಪ ದುರ್ಬಲವಾಗಿರಲಿದೆ. ನಿಮ್ಮ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ವಾರದ ಆರಂಭಿಕ ದಿನಗಳು ಮಾತ್ರವೇ ಪ್ರಯಾಣಕ್ಕೆ ಅನುಕೂಲಕರ.

ಮಕರ: ಕುಟುಂಬದಲ್ಲಿ ಏನಾದರೂ ಮಂಗಳಕರ ಕೆಲಸ ನಡೆಯಲಿದೆ. ನಿಮ್ಮ ಜೀವನ ಸಂಗಾತಿಯ ಜೊತೆಗಿನ ಸಮನ್ವಯದಲ್ಲಿ ಕೊರತೆ ಉಂಟಾಗಬಹುದು. ಆದರೆ ನಿಮ್ಮ ನಡುವಿನ ತಪ್ಪು ಗ್ರಹಿಕೆಯು ದೂರಗೊಂಡ ಗೌರವವು ಹೆಚ್ಚಲಿದೆ. ಇದರಿಂದಾಗಿ ಸಂಬಂಧದಲ್ಲಿ ಸಂತಸ ಕಾಣಿಸಿಕೊಳ್ಳಲಿದೆ. ಪ್ರೇಮ ಜೀವನದಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಳ್ಳಬಹುದು. ನಿಮ್ಮ ಸಂಬಂಧವನ್ನು ಹದಗೆಡಿಸಬಹುದಾದ ಯಾವುದೇ ಮಾತನ್ನು ಆಡಬೇಡಿ. ಏಕೆಂದರೆ ನಿಮ್ಮ ಜೀವನ ಸಂಗಾತಿಯ ಮನೋಸ್ಥಿತಿಯು ಸರಿಯಿಲ್ಲದೆ ಇರಬಹುದು. ಉದ್ಯೋಗದಲ್ಲಿರುವವರು ತಮ್ಮ ಕೆಲಸಕ್ಕೆ ಗಮನ ನೀಡಬೇಕು. ಏಕೆಂದರೆ ತಮ್ಮ ಕೆಲಸವನ್ನು ಚೆನ್ನಾಗಿ ಮಾಡುತ್ತಿರುವುದಾಗಿ ಅವರು ದೀರ್ಘಕಾಲದಿಂದ ಭಾವಿಸಬಹುದು. ಆದರೆ ಮನಸ್ಸು ಬೇರೆ ಎಲ್ಲೋ ಇರುವುದರಿಂದ ಅವರಿಂದ ಈ ರೀತಿ ಮಾಡಲು ಸಾಧ್ಯವಾಗದೇ ಇರಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಈ ಸಮಯದ ಸಂಪೂರ್ಣ ಲಾಭ ಪಡೆಯಲಿದ್ದಾರೆ. ಪ್ರಯಾಣದಿಂದ ವ್ಯವಹಾರಕ್ಕೆ ಲಾಭ ಉಂಟಾಗಲಿದೆ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಚೆನ್ನಾಗಿ ಗಮನ ನೀಡಬೇಕಾಗುತ್ತದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವಾರದ ಆರಂಭವು ಪ್ರಯಾಣಿಸಲು ಅನುಕೂಲಕರ.

ಕುಂಭ: ವಾರದ ಆರಂಭದಲ್ಲಿ ನೀವು ಎಲ್ಲಾದರೂ ಹೋಗುವ ಸಾಧ್ಯತೆ ಇದೆ. ನಿಮ್ಮ ಗೆಳೆಯರ ಜೊತೆ ಸಮಯ ಕಳೆಯಲು ನಿಮಗೆ ಅವಕಾಶ ಸಿಗಬಹುದು. ಪ್ರೇಮ ಸಂಬಂಧದಲ್ಲಿ ಏರುಪೇರು ಉಂಟಾಗಬಹುದು. ನಿಮ್ಮ ಪ್ರೇಮಿಯೊಂದಿಗೆ ವಾಗ್ವಾದ ಉಂಟಾಗಬಹುದು. ಆದರೆ ಸಂಬಂಧವು ಹಾಳಾಗದಂತೆ ನೋಡಿಕೊಳ್ಳಬೇಕಾದರೆ ಒಳ್ಳೆಯ ಸಂಭಾಷಣೆಗೆ ನೀವು ಅಡಿಪಾಯ ಹಾಕಬೇಕು. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನ ಒತ್ತಡದಲ್ಲಿ ಇಳಿಕೆ ಉಂಟಾಗಲಿದೆ. ನಿಮ್ಮ ಅತ್ತೆ ಮಾವಂದಿರು ಇದರಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರಿಗೆ ಹೊಸ ಯೋಜನೆಯ ಮೇಲೆ ಕೆಲಸ ಮಾಡಲು ಅವಕಾಶ ಲಭಿಸಬಹುದು. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರ ಸಾಧನೆಯಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ನಿಮ್ಮ ಕಠಿಣ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಂಡರೂ ಅದನ್ನು ನಿರ್ಲಕ್ಷಿಸಬೇಡಿ. ವಾರದ ಆರಂಭಿಕ ಮತ್ತು ಮಧ್ಯದ ದಿನಗಳು ಪ್ರಯಾಣಿಸಲು ಉತ್ತಮ.

ಮೀನ: ನೀವು ನಿಮ್ಮ ಮೇಲೆ ಗಮನ ಹರಿಸಲಿದ್ದೀರಿ ಹಾಗೂ ನಿಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಲಿದ್ದೀರಿ. ನಿಮ್ಮ ಕೌಟುಂಬಿಕ ಬದುಕನ್ನು ಸುಧಾರಿಸಲು ನೀವು ಎಲ್ಲಾ ಪ್ರಯತ್ನ ಮಾಡಲಿದ್ದೀರಿ. ಇದರಿಂದ ನೀವು ಧನಾತ್ಮಕ ಫಲಿತಾಂಶವನ್ನು ಕಾಣಬಹುದು. ನಿಮ್ಮ ಜೀವನ ಸಂಗಾತಿಯು ನಿಮ್ಮ ಕುರಿತು ಸಂತಸ ವ್ಯಕ್ತಪಡಿಸಲಿದ್ದಾರೆ. ನಿಮ್ಮ ಅತ್ತೆ-ಮಾವಂದಿರ ಜೊತೆ ನೀವು ಮಾತುಕತೆ ನಡೆಸಬಹುದು ಹಾಗೂ ಅವರನ್ನು ಭೇಟಿಯಾಗಲು ನಿಮಗೆ ಅವಕಾಶ ದೊರೆಯಬಹುದು. ಏನಾದರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿಮಗೆ ಅವಕಾಶ ಲಭಿಸಬಹುದು. ಪ್ರೇಮ ಸಂಬಂಧದಲ್ಲಿರುವ ಜನರು ತಮ್ಮ ಪ್ರೇಮಿಯನ್ನು ಎಲ್ಲಾದರೂ ದೀರ್ಘ ಡ್ರೈವ್​​ಗೆ ಕರೆದುಕೊಂಡು ಹೋಗಬಹುದು. ಏನಾದರೂ ಸೇವಾ ಕಾರ್ಯಕ್ಕೆ ಅವರನ್ನು ಕರೆದುಕೊಂಡು ಹೋಗಿ. ಅದು ಅವರನ್ನು ಸಂತುಷ್ಟಗೊಳಿಸಲಿದೆ. ಉದ್ಯೋಗದಲ್ಲಿರುವವರಿಗೆ ಇದು ಸಕಾಲವಲ್ಲ. ನೀವು ಹಾಕುವ ಶ್ರಮಕ್ಕೆ ತಕ್ಕುದಾದ ಪ್ರಯೋಜನವನ್ನು ನೀವು ಗಳಿಸುತ್ತಿಲ್ಲ ಎಂದು ನಿಮಗೆ ಅನಿಸಬಹುದು. ಹೀಗಾಗಿ ಒಂದಷ್ಟು ಬೇಸರವು ನಿಮ್ಮನ್ನು ಕಾಡಬಹುದು. ಆದರೆ ಶಾಂತಿ ಮತ್ತು ತಾಳ್ಮೆಯಿಂದ ಕೆಲಸ ಮಾಡಿದರೆ ನಿಮಗೆ ಒಳ್ಳೆಯದು. ನಿಮ್ಮ ಆದಾಯವು ಚೆನ್ನಾಗಿರಲಿದೆ. ವ್ಯಾಪಾರೋದ್ಯಮಿಗಳು ಲಾಭ ಪಡೆಯಲಿದ್ದಾರೆ. ಈ ವಾರ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಅಧ್ಯಯನವನ್ನು ನೀವು ಆನಂದಿಸಲಿದ್ದೀರಿ ಹಾಗೂ ನೀವು ಉತ್ತಮ ಫಲಿತಾಂಶವನ್ನು ಪಡೆಯಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯ ಚೆನ್ನಾಗಿರಲಿದೆ. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಇದನ್ನೂ ಓದಿ:ಭಾನುವಾರದ ಪಂಚಾಂಗ, ರಾಶಿ ಭವಿಷ್ಯ: ಇಂದು ನೀವು ವಿಶೇಷ ವ್ಯಕ್ತಿಯನ್ನು ಭೇಟಿಯಾಗುವಿರಿ!

ABOUT THE AUTHOR

...view details