ಮೇಷ: ವಾರದ ಆರಂಭದಲ್ಲಿ, ಗೆಳೆಯರೊಂದಿಗೆ ಮೋಜು ಅನುಭವಿಸಲು ನಿಮಗೆ ಅವಕಾಶ ಸಿಗಬಹುದು. ಅವರೊಂದಿಗೆ ಎಲ್ಲಾದರೂ ವಾಕ್ಗೆ ಹೋಗಲಿದ್ದೀರಿ. ನಿಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವಿರಿ. ನಿಮ್ಮ ಮನಸ್ಸಿನಲ್ಲಿ ಸಂತಸ ನೆಲೆಸಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನ ಸಮಸ್ಯೆಗಳನ್ನು ಮರೆತು ಮುಂದೆ ಹೋಗಬೇಕು. ಪ್ರೇಮ ಜೀವನದಲ್ಲಿ ಪ್ರಣಯದ ಜೊತೆಗೆ ನೀವು ವಿವಾದಗಳನ್ನು ಎದುರಿಸಬಹುದು. ಸಿಹಿ-ಕಹಿ ಸನ್ನಿವೇಶ ಎದುರಾಗಬಹುದು. ಕೆಲಸದಲ್ಲಿ ನಿಮ್ಮ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ಆದರೆ ನೀವು ಯಾರೊಂದಿಗೂ ವಾಗ್ವಾದಕ್ಕೆ ಇಳಿಯಬಾರದು. ಯಾವುದೇ ಮಹಿಳೆಯ ವಿರುದ್ಧ ಅವಮಾನಕರ ಪದಗಳನ್ನು ಬಳಸಬೇಡಿ. ಇಲ್ಲದಿದ್ದರೆ ನೀವು ಸಮಸ್ಯೆ ಎದುರಿಸಬೇಕಾದೀತು. ನಿಮ್ಮ ವ್ಯವಹಾರದಲ್ಲಿ ಯಶಸ್ಸು ಸಾಧಿಸಲಿದ್ದೀರಿ. ನಿಮ್ಮ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ. ನೀವು ಹೊಸ ಲಾಭಗಳನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ ಈ ವಾರ ನೀವು ಕಠಿಣ ಶ್ರಮದ ಜೊತೆಗೆ ಮುಂದುವರಿಯಬೇಕು. ಇಲ್ಲದಿದ್ದರೆ ನೀವು ಸಮಸ್ಯೆಯನ್ನು ಎದುರಿಸಬೇಕಾದೀತು.
ವೃಷಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಸಂತಸ ಮತ್ತು ಪ್ರಣಯ ಅನುಭವಿಸಲಿದ್ದಾರೆ. ಹೊಸ ಆಸ್ತಿ ಖರೀದಿಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ಪ್ರೇಮದ ವಿಚಾರದ ಕುರಿತು ಮಾತನಾಡುವುದಾದರೆ ನಿಮ್ಮ ಪ್ರೇಮಿಯೊಂದಿಗೆ ಆಪ್ತತೆಯನ್ನು ಸಾಧಿಸಲಿದ್ದೀರಿ. ಅವರೊಂದಿಗೆ ಉತ್ತಮ ಸಂಬಂಧ ಕಾಪಾಡಲಿದ್ದೀರಿ. ನೀವು ಪರಸ್ಪರ ಸ್ನೇಹದಿಂದ ವರ್ತಿಸಲಿದ್ದೀರಿ. ಇದು ನಿಮ್ಮ ನಡುವಿನ ಸಂಬಂಧವನ್ನು ವೃದ್ಧಿಸಲಿದೆ. ಈ ನಿಟ್ಟಿನಲ್ಲಿ ನೀವು ವಿಶೇಷ ಯಶಸ್ಸು ಸಾಧಿಸಲಿದ್ದೀರಿ. ಅಟೋಮೊಬೈಲ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಜನರು ಇನ್ನೂ ಹೆಚ್ಚಿನ ಲಾಭ ಗಳಿಸಲಿದ್ದಾರೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯಲು ಹೊಸ ದಾರಿಗಳನ್ನು ಕಂಡುಹಿಡಿಯಲಿದ್ದಾರೆ. ಇದು ಅವರಿಗೆ ಉತ್ತಮ ಲಾಭ ತಂದು ಕೊಡಲಿದೆ. ನಿಮ್ಮ ಹೊಸ ಕಚೇರಿಯನ್ನು ನೀವು ತೆರೆಯಲಿದ್ದೀರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನಿಮ್ಮ ಕಠಿಣ ಶ್ರಮಕ್ಕೆ ಯಶಸ್ಸು ದೊರೆಯಲಿದೆ. ಅಲ್ಲದೆ ನಿಮ್ಮ ಅಧ್ಯಯನವನ್ನು ನೀವು ಆನಂದಿಸಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.
ಮಿಥುನ: ಈ ವಾರ ನಿಮಗೆ ಸಾಮಾನ್ಯವಾಗಿ ಲಾಭದಾಯಕ ಎನಿಸಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲಿ ಬಲ ದೊರೆಯಲಿದೆ. ಪರಸ್ಪರ ಅನ್ಯೋನ್ಯತೆ ಬೆಳೆಯಲಿದೆ. ನಿಮ್ಮ ಕೌಟುಂಬಿಕ ಜೀವನವನ್ನು ಇನ್ನಷ್ಟು ಸುಧಾರಿಸಲು ನಿಮಗೆ ಸಾಧ್ಯವಾಗಲಿದೆ. ನಿಮ್ಮ ಜೀವನ ಸಂಗಾತಿಯು ನಿಮಗೆ ನೆರವು ಒದಗಿಸಲಿದ್ದಾರೆ ಹಾಗೂ ನೀವು ಮುಂದೆ ಸಾಗಲು ಪ್ರೇರಣೆ ನೀಡಲಿದ್ದಾರೆ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನೀವು ನಿಮ್ಮ ಪ್ರಣಯ ಸಂಗಾತಿಗೆ ಮದುವೆಯ ಪ್ರಸ್ತಾವನೆಯನ್ನು ಮುಂದಿಡಬಹುದು. ವಿವಾಹಿತ ವ್ಯಕ್ತಿಗಳು ಮಕ್ಕಳನ್ನು ಪಡೆಯಬಹುದು. ಮಾನಸಿಕ ಒತ್ತಡವನ್ನು ದೂರವಿಡಿ. ಏಕೆಂದರೆ ಇದು ನಿಮ್ಮ ಕೆಲಸದ ಪ್ರಗತಿಗೆ ಹಾನಿಯನ್ನುಂಟು ಮಾಡಬಹುದು. ನಿಮ್ಮ ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದೆ. ಹೀಗಾಗಿ ಹೆಚ್ಚು ಪ್ರಯತ್ನ ಪಡದೆ ನಿಮ್ಮ ಕೆಲಸದಲ್ಲಿ ನೀವು ಯಶಸ್ಸು ಗಳಿಸಲಿದ್ದೀರಿ. ಈ ವಾರ ಉದ್ಯೋಗದಲ್ಲಿರುವವರಿಗೆ ಅನುಕೂಲಕರ ಎನಿಸಲಿದೆ. ನಿಮ್ಮ ಅನುಭವ ಮತ್ತು ದಕ್ಷತೆಯ ಸಂಪೂರ್ಣ ಲಾಭವನ್ನು ಪಡೆಯಲಿದ್ದೀರಿ. ಇದು ನಿಮಗೆ ಉದ್ಯೋಗದಲ್ಲಿ ಲಾಭ ಪಡೆಯಲು ಸಹಾಯವಾಗಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರು ಮಾರುಕಟ್ಟೆಯಲ್ಲಿ ಉತ್ತಮ ಲಾಭ ಗಳಿಸಲಿದ್ದಾರೆ. ತಜ್ಞರ ಜೊತೆಗೆ ಕೆಲಸ ಮಾಡುವ ಅವಕಾಶ ನಿಮಗೆ ದೊರೆಯಲಿದೆ. ಅವರ ಸಲಹೆಯು ನಿಮಗೆ ಸಾಕಷ್ಟು ಸಹಾಯ ಮಾಡಲಿದೆ.
ಕರ್ಕಾಟಕ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವೈವಾಹಿಕ ಬದುಕು ಶಾಂತಿಯುತವಾಗಿ ಮುಂದುವರಿಯಲಿದೆ. ಪರಸ್ಪರರ ನಡುವೆ ಸಾಕಷ್ಟು ಅನ್ಯೋನ್ಯತೆ ಇರಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ದುರ್ಬಲ ಎನಿಸಲಿದೆ. ಸಣ್ಣಪುಟ್ಟ ವಿವಾದಗಳು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಯೋಜನೆಗಳನ್ನು ಯಾರಿಗೂ ಹೇಳಬೇಡಿ. ಇಲ್ಲದಿದ್ದರೆ ಯಾರಾದರೂ ಒಬ್ಬರು ನಿಮ್ಮ ಮಾತಿನ ದುರುಪಯೋಗಪಡಿಸಿಕೊಳ್ಳಬಹುದು. ನೀವು ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ. ಸಾಕಷ್ಟು ಖರ್ಚುವೆಚ್ಚಗಳು ಉಂಟಾಗಬಹುದು. ಆದರೆ ಈ ವೆಚ್ಚಗಳು ನಿಮಗೆ ತೃಪ್ತಿ ತಂದು ಕೊಡಲಿವೆ. ಏಕೆಂದರೆ ಇವೆಲ್ಲವನ್ನು ನೀವು ಒಳ್ಳೆಯ ಉದ್ದೇಶಕ್ಕಾಗಿ ಖರ್ಚು ಮಾಡಲಿದ್ದೀರಿ. ನಿಮ್ಮ ಮನಸ್ಸು ಮತ್ತು ಮೆದುಳು ವೇಗವಾಗಿ ಕೆಲಸ ಮಾಡಲಿವೆ. ಇತರರಿಗೆ ಕಷ್ಟಕರವೆನಿಸುವ ಕೆಲಸವನ್ನು ನೀವು ಸುಲಭವಾಗಿ ಮುಗಿಸಲಿದ್ದೀರಿ. ಇದರೊಂದಿಗೆ ನಿಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡಲಿದ್ದೀರಿ. ಎಲ್ಲಾ ಕೆಲಸಗಳು ಸರಿಯಾಗಿ ನಡೆದರೆ ನಿಮ್ಮ ಮನಸ್ಸಿನಲ್ಲಿ ತೃಪ್ತಿ ನೆಲೆಸಲಿದೆ.
ಸಿಂಹ: ಈ ವಾರ ನಿಮಗೆ ಹೊಸ ಸಂತಸ ನೀಡಲಿದೆ. ವೈವಾಹಿಕ ಬದುಕಿನ ಸಮಸ್ಯೆಗಳು ದೂರಗೊಳ್ಳಲಿವೆ. ಸಂಬಂಧದಲ್ಲಿ ಪ್ರೇಮ ಮತ್ತು ಆಕರ್ಷಣೆಯ ಜೊತೆಗೆ ಪರಸ್ಪರ ಸಮಾನ ಗೌರವ ನೀಡಲು ನೀವು ಯತ್ನಿಸಬೇಕು. ಹೀಗೆ ಮಾಡಿದರೆ ನಿಮ್ಮ ಸಂಬಂಧದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಪ್ರೇಮದ ಜೀವನದಲ್ಲಿ ಸಾಕಷ್ಟು ಏರುಪೇರು ಕಾಣಿಸಿಕೊಳ್ಳಲಿದೆ. ನೀವು ಮತ್ತು ನಿಮ್ಮ ಪ್ರೇಮಿಯ ನಡುವೆ ಅನೇಕ ತಪ್ಪು ಗ್ರಹಿಕೆಗಳು ಮನೆ ಮಾಡಬಹುದು. ಇದು ತಿಳಿಗೊಳ್ಳಲು ಸಮಯ ಬೇಕಾದೀತು. ಹೀಗಾಗಿ ಮೆಲ್ಲನೆ ತಾಳ್ಮೆಯಿಂದ ಮುಂದೆ ಸಾಗಿರಿ ಹಾಗೂ ಎಲ್ಲವನ್ನು ಅವರಿಗೆ ವಿವರಿಸಿ. ನಿಮ್ಮ ಆದಾಯದಲ್ಲಿ ಸಾಕಷ್ಟು ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮ್ಮ ಮನಸ್ಸಿನಲ್ಲಿ ಸಂತಸವು ಅರಳಲಿದೆ. ನಿಮ್ಮ ವೆಚ್ಚಗಳಲ್ಲಿ ಇಳಿಕೆ ಉಂಟಾಗಲಿದೆ. ಹೀಗಾಗಿ ನಿಮ್ಮನ್ನು ಕಾಡುತ್ತಿದ್ದ ದೊಡ್ಡ ಚಿಂತೆಯು ದೂರಗೊಳ್ಳಲಿದೆ. ದೇವರ ಅನುಗ್ರಹದಿಂದಾಗಿ ನಿಮ್ಮ ಕೆಲಸವು ಪೂರ್ಣಗೊಳ್ಳಲಿದೆ. ಉದ್ಯೋಗಿಗಳು ಸಹ ತಮ್ಮ ಕೆಲಸದಲ್ಲಿ ದೃಢತೆ ತೋರಲಿದ್ದಾರೆ. ನಿಮ್ಮ ಬಾಸ್ನ ಸಹಕಾರ ಪಡೆಯಲಿದ್ದೀರಿ. ಈ ವಾರ ವ್ಯವಹಾರಕ್ಕೆ ಅನುಕೂಲಕರ ಎನಿಸಲಿದೆ.
ಕನ್ಯಾ: ಈ ವಾರ ನಿಮಗೆ ಸವಾಲಿನಿಂದ ಕೂಡಿರಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಒತ್ತಡ ಮತ್ತು ಪ್ರೀತಿಯನ್ನು ಅನುಭವಿಸಲಿದ್ದಾರೆ. ಹೀಗಾಗಿ ನಿಮ್ಮ ಸಂಬಂಧವು ಸಿಹಿಕಹಿ ವಾಗ್ವಾದಗಳ ನಡುವೆ ಮುಂದೆ ಸಾಗಲಿದೆ. ಪ್ರೇಮ ಸಂಬಂಧದಲ್ಲಿರುವವರಿಗೆ ಈ ವಾರವು ಸಾಧಾರಣ ವಾರ ಎನಿಸಲಿದೆ. ನಿಮ್ಮ ಮನಸ್ಸಿನ ಇಚ್ಛೆಗಳನ್ನು ನಿಮ್ಮ ಪ್ರೇಮಿಗೆ ತಿಳಿಸಬೇಕು. ಅನೇಕ ಜವಾಬ್ದಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸುವುದು ನಿಮ್ಮ ಪಾಲಿಗೆ ಚಿಂತೆಯ ವಿಷಯವೆನಿಸಲಿದೆ. ಹೀಗಾಗಿ ನೀವು ಸ್ವಲ್ಪ ಅಸ್ತವ್ಯಸ್ತವಾಗಿರಬಹುದು. ಅನೇಕ ಕೆಲಸಗಳನ್ನು ಏಕಕಾಲದಲ್ಲಿ ನಿಭಾಯಿಸುವುದರಿಂದ ನೀವು ಸಾಕಷ್ಟು ಶಕ್ತಿಯನ್ನು ಖರ್ಚು ಮಾಡಬಹುದು. ನಿಮ್ಮ ಶಕ್ತಿಯನ್ನು ಸಕಾಲಕ್ಕಾಗಿ ಉಳಿಸಿಕೊಳ್ಳುವುದು ಅಗತ್ಯ. ನಿಮ್ಮ ವೆಚ್ಚಗಳ ಮೇಲೆ ನಿಗಾ ಇರಿಸುವುದು ಅಗತ್ಯ. ಇಲ್ಲದಿದ್ದರೆ ನೀವು ಸಮಸ್ಯೆಗಳನ್ನು ಎದುರಿಸಬೇಕಾದೀತು. ಉದ್ಯೋಗದಲ್ಲಿರುವವರು ಒಂದಲ್ಲ ಒಂದು ಕಾರಣಕ್ಕೆ ಕಠಿಣ ಶ್ರಮ ತೋರುವ ಅನಿವಾರ್ಯತೆ ಉಂಟಾಗಬಹುದು. ಅವರ ಕೆಲಸದಲ್ಲಿ ಕೊರತೆ ಉಂಟಾಗುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು, ದೀರ್ಘಕಾಲದಿಂದ ಕಾಯುತ್ತಿದ್ದ ಯಾರಾದರೂ ಪ್ರಮುಖ ವ್ಯಕ್ತಿಯ ಬೆಂಬಲವನ್ನು ಪಡೆಯಲಿದ್ದಾರೆ.