ಕರ್ನಾಟಕ

karnataka

ETV Bharat / bharat

ವಾರದ ರಾಶಿ ಭವಿಷ್ಯ: ವೈವಾಹಿಕ ಬದುಕು ಸಂತಸದಿಂದ ಕೂಡಿರಲಿದೆ, ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ! - ವಾರದ ರಾಶಿ ಭವಿಷ್ಯ

Weekly Horoscope: ಈ ವಾರದ ರಾಶಿ ಭವಿಷ್ಯ ಹೀಗಿದೆ..

Weekly Horoscope
ವಾರದ ರಾಶಿ ಭವಿಷ್ಯ

By ETV Bharat Karnataka Team

Published : Nov 12, 2023, 4:58 AM IST

ಮೇಷ:ವಿವಾಹಿತ ವ್ಯಕ್ತಿಗಳ ಕುರಿತು ಹೇಳುವುದಾದರೆ ಅವರ ವೈವಾಹಿಕ ಜೀವನವನ್ನು ಕಾಡುತ್ತಿರುವ ಒತ್ತಡವು ಒಂದಿಷ್ಟು ಮಟ್ಟಿಗೆ ದೂರಗೊಳ್ಳಲಿದೆ. ಪ್ರೇಮ ಸಂಬಂಧದ ಕುರಿತು ಹೇಳುವುದಾದರೆ, ಒಂದಷ್ಟು ಏರುಪೇರು ಕಾಣಿಸಿಕೊಳ್ಳಬಹುದು. ನಿಮ್ಮ ತಾಯಿಯಿಂದ ನೀವು ಶುಭ ಸುದ್ದಿಯನ್ನು ಪಡೆಯಲಿದ್ದೀರಿ. ವಾರದ ಆರಂಭಿಕ ದಿನಗಳಲ್ಲಿ, ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ದೀರ್ಘ ಪ್ರವಾಸಕ್ಕೆ ಹೋಗಬಹುದು.

ಹೊಸ ಪಂಗಡ ಅಥವಾ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸುವ ಅವಕಾಶವು ನಿಮಗೆ ಲಭಿಸಲಿದ್ದು, ಭವಿಷ್ಯದಲ್ಲಿ ಇದರಿಂದ ನಿಮಗೆ ಪ್ರಯೋಜನ ದೊರೆಯಲಿದೆ. ಈಗ ನೀವು ನಿಮ್ಮ ಭಡ್ತಿಯ ಕುರಿತು ಮಾತನಾಡಬಹುದು. ವೆಚ್ಚದಲ್ಲಿ ಕ್ಷಿಪ್ರವಾಗಿ ಹೆಚ್ಚಳ ಉಂಟಾಗಲಿದ್ದು ಇದು ನಿಮ್ಮ ಚಿಂತೆಗೆ ಕಾರಣವೆನಿಸಲಿದೆ. ಆದರೆ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯದ ಕಾರಣ ಪರಿಸ್ಥಿತಿಯಲ್ಲಿ ಕಾಲಕ್ರಮೇಣ ಸುಧಾರಣೆ ಉಂಟಾಗಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಕಠಿಣ ಶ್ರಮದ ವಾರವೆನಿಸಲಿದೆ. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ವೃಷಭ:ವಿವಾಹಿತ ವ್ಯಕ್ತಿಗಳ ಗೃಹಸ್ಥ ಬದುಕಿನಲ್ಲಿ ಪರಿಸ್ಪರ ಅನ್ಯೋನ್ಯತೆ ಹೆಚ್ಚುತ್ತದೆ. ನಿಮ್ಮ ಸಂಬಂಧವನ್ನು ಮುಂದಕ್ಕೆ ಕೊಂಡೊಯ್ಯುವುದಕ್ಕಾಗಿ ನೀವು ಒಂದಷ್ಟು ಪ್ರಯತ್ನವನ್ನು ಮಾಡಬಹುದು. ಇನ್ನೊಂದೆಡೆ ನಿಮ್ಮ ಸಂಬಂಧದಲ್ಲಿ ಪ್ರಣಯ ಕಾಣಿಸಿಕೊಳ್ಳಬಹುದು. ಇನ್ನೊಂದೆಡೆ ಪರಸ್ಪರ ಅನ್ಯೋನ್ಯತೆ ಕೊರತೆಯೂ ಕಾಣಿಸಿಕೊಳ್ಳಲಿದ್ದು ಇದು ನಿಮ್ಮ ನಡುವಿನ ಅಂತರವನ್ನು ಹೆಚ್ಚಿಸಬಹುದು. ಸದ್ಯಕ್ಕೆ ಒಂದು ಕಡೆಗೆ ನಿಮ್ಮ ಖರ್ಚು ವೆಚ್ಚಗಳಲ್ಲಿ ಹೆಚ್ಚಳ ಉಂಟಾದರೆ ಇನ್ನೊಂದು ಕಡೆ ನಿಮ್ಮ ಮಾನಸಿಕ ಒತ್ತಡದಲ್ಲೂ ಹೆಚ್ಚಳ ಉಂಟಾಗಬಹುದು.

ಇದು ನಿಮ್ಮ ಚಿಂತೆಗೆ ಕಾರಣವೆನಿಸಬಹುದು. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮಗೆ ಒಳ್ಳೆಯ ಬಡ್ತಿ ಲಭಿಸಬಹುದು. ನಿಮ್ಮ ಕೆಲಸ ಮತ್ತು ಯೋಚನೆಗಳಿಗೆ ಪ್ರಶಂಸೆ ದೊರೆಯಬಹುದು. ಈ ಸಮಯವು ವ್ಯವಹಾರಕ್ಕೆ ಅನುಕೂಲಕರವಾಗಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ನೀವು ಕಠಿಣ ಶ್ರಮವನ್ನು ಪಡಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ವಾರದ ಕೊನೆಯ ಎರಡು ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮಿಥುನ:ವೈವಾಹಿಕ ಬದುಕು ಸಂತಸದಿಂದ ಕೂಡಿರಲಿದೆ. ನಿಮ್ಮ ಜೀವನ ಸಂಗಾತಿಯ ಸಂಪೂರ್ಣ ಸಹಕಾರ ಪಡೆಯಲಿದ್ದೀರಿ. ಕಾಲಕ್ರಮೇಣ ಪ್ರೇಮ ಜೀವನದಲ್ಲಿ ಪ್ರೀತಿಯ ಬೀಜವು ಮೊಳಕೆಯೊಡೆಯಲಿದೆ. ವಾರದ ಕೊನೆಯ ದಿನಗಳು ಮಾತ್ರವೇ ಪ್ರಯಾಣಿಸಲು ಅನುಕೂಲಕರ. ಈ ವಾರದಲ್ಲಿ ಯಾವುದೇ ದೊಡ್ಡ ಕೆಲಸವನ್ನು ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ಇದನ್ನು ಮುಗಿಸುವ ವಿಚಾರದಲ್ಲಿ ನಿಮಗೆ ಸಮಸ್ಯೆಯುಂಟಾಗಬಹುದು. ಕೆಲವೊಂದು ಹಠಾತ್‌ ವೆಚ್ಚಗಳು ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದು.

ಕೌಟುಂಬಿಕ ಜವಾಬ್ದಾರಿಗೆ ಗಮನ ನೀಡಿರಿ. ಉದ್ಯೋಗದಲ್ಲಿ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ವ್ಯವಹಾರದ ವಿಚಾರದಲ್ಲಿ ಸಮಯವು ಚೆನ್ನಾಗಿದೆ. ನಿಮ್ಮ ಪ್ರಯತ್ನಗಳಿಗೆ ಯಶಸ್ಸು ದೊರೆಯಲಿದೆ. ಇದರಿಂದಾಗಿ ವ್ಯವಹಾರದಲ್ಲಿ ಇನ್ನಷ್ಟು ಪ್ರಗತಿ ದೊರೆಯಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಕಠಿಣ ಶ್ರಮ ತೋರಬೇಕು. ಅಧ್ಯಯನದಲ್ಲಿ ನಿಮಗೆ ಒಂದಷ್ಟು ನೆರವು ಬೇಕಾದೀತು. ನಿಮ್ಮ ಸಹೋದರ, ಸಹೋದರಿ ಅಥವಾ ಗೆಳೆಯರ ನೆರವನ್ನು ನೀವು ಪಡೆಯಬಹುದು. ಅವರ ನೆರವಿನಿಂದ ಅಧ್ಯಯನದಲ್ಲಿ ಲಾಭ ಉಂಟಾಗಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.

ಕರ್ಕಾಟಕ: ವೈವಾಹಿಕ ಬದುಕು ಚೆನ್ನಾಗಿರಲಿದೆ. ನಿಮ್ಮ ಜೀವನ ಸಂಗಾತಿಯ ಸಹಾಯದಿಂದ ಕೆಲವೊಂದು ಹೊಸ ಕೆಲಸಗಳಲ್ಲಿ ನೀವು ಪ್ರಯತ್ನಿಸಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ಪರಸ್ಪರ ಅನ್ಯೋನ್ಯತೆಯು ನಿಮ್ಮ ಸಂಬಂಧಕ್ಕೆ ಮೆರುಗು ನೀಡಲಿದೆ. ಅಲ್ಲದೆ ನಿಮ್ಮ ಪ್ರೇಮಿಗಾಗಿ ಏನಾದರೂ ಹೊಸತನ್ನುನೀವು ಮಾಡಲಿದ್ದೀರಿ. ರಿಯಲ್‌ ಎಸ್ಟೇಟ್‌ ಗೆ ಸಂಬಂಧಿಸಿದ ಯಾವುದಾದರೂ ವಿಚಾರವನ್ನು ಮನೆಯಲ್ಲಿ ಚರ್ಚಿಸುವ ಸಾಧ್ಯತೆ ಇದೆ. ದೊಡ್ಡ ಆಸ್ತಿ ಖರೀದಿಯಲ್ಲಿ ಯಶಸ್ಸು ಸಾಧಿಸಲಿದ್ದೀರಿ.

ನಿಮ್ಮ ಮನೆಯನ್ನು ಕಟ್ಟುವ ಕುರಿತು ನೀವು ಯೋಚಿಸುತ್ತಿದ್ದರೆ ಆ ಕೆಲಸದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಶೇರು ಮಾರುಕಟ್ಟೆಯ ಹೂಡಿಕೆಯಲ್ಲಿ ನಿಮಗೆ ಲಾಭ ದೊರೆಯಲಿದೆ. ಉದ್ಯೋಗದಲ್ಲಿರುವವರು ತಮ್ಮ ಅನುಭವದ ಲಾಭವನ್ನು ಗಳಿಸಲಿದ್ದಾರೆ. ವ್ಯವಹಾರದಲ್ಲಿ ತಜ್ಞರ ನೆರವು ಬೇಕಾದೀತು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ ಈ ವಾರವು ನಿಮಗೆ ಒಳ್ಳೆಯದು. ಆದರೂ ನಿಮ್ಮ ಆಹಾರದ ಕಡೆಗೆ ಗಮನ ನೀಡಿ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಸಿಂಹ: ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಜೀವನದ ಒತ್ತಡದಿಂದ ಮೆಲ್ಲನೆ ಹೊರ ಬರಲಿದ್ದಾರೆ. ಅಲ್ಲದೆ ಪರಸ್ಪರ ಸಮನ್ವಯವನ್ನು ಸುಧಾರಿಸಲು ಯತ್ನಿಸಲಿದ್ದಾರೆ. ಈ ವಾರವು ಪ್ರೇಮ ಜೀವನಕ್ಕೆ ಒಳ್ಳೆಯದು. ನೀವು ಕಠಿಣ ಶ್ರಮವನ್ನು ಪಟ್ಟರೂ ನಿರೀಕ್ಷಿತ ಫಲಿತಾಂಶವು ದೊರೆಯದು. ಆದರೆ ಧೃತಿಗೆಡಬೇಡಿ. ಮುಂದಿನ ದಿನಗಳಲ್ಲಿ ಅಗತ್ಯ ಲಾಭ ಉಂಟಾಗಲಿದೆ. ಕೆಲಸದ ಸ್ಥಳದಲ್ಲಿ ಕಠಿಣ ಶ್ರಮವನ್ನು ಮುಂದುವರಿಸಿ. ಅಲ್ಲದೆ ಬೇರೆಯವರ ಕುರಿತು ತಲೆ ಕೆಡಿಸಿಕೊಳ್ಳದೆ ನಿಮ್ಮ ಕೆಲಸಕ್ಕೆ ಗಮನ ನೀಡಿರಿ.

ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ತನ್ನ ವ್ಯವಹಾರವನ್ನು ವಿಸ್ತರಿಸುವ ಕುರಿತು ಯೋಚಿಸಲಿದ್ದಾರೆ ಹಾಗೂ ಹೊಸ ವಲಯದಲ್ಲಿ ತನ್ನ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಕೆಲ ವಿಚಾರಗಳಲ್ಲಿ ನೀವು ಕಾನೂನು ಸಲಹೆಯನ್ನು ತೆಗೆದುಕೊಳ್ಳಬೇಕು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಕಠಿಣ ಶ್ರಮ ತೋರಬೇಕು. ವಿದ್ಯಾರ್ಥಿಗಳು ತಮ್ಮ ಸಹಪಾಠಿಗಳಿಂದ ನೆರವನ್ನು ಪಡೆಯಲಿದ್ದಾರೆ. ಸರಿಯಾದ ಯೋಜನೆಯನ್ನು ಅನುಸರಿಸಿದರೆ ಅಧ್ಯಯನದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ವಾರದ ಆರಂಭಿಕ ದಿನಗಳು ಪ್ರಯಾಣಿಸಲು ಅನುಕೂಲಕರ.

ಕನ್ಯಾ: ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಈ ವಾರವು ಪ್ರೇಮ ಸಂಬಂಧದಲ್ಲಿ ಸಾಮಾನ್ಯ ಫಲ ನೀಡಲಿದೆ. ಈ ವಾರದಲ್ಲಿ ನಿಮಗೆ ಆಸ್ತಿಯಿಂದ ಲಾಭ ದೊರೆಯಲಿದೆ. ನೀವು ರಿಯಲ್‌ ಎಸ್ಟೇಟ್‌ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ ಈ ವಾರವು ನಿಮಗೆ ಅನುಕೂಲಕರ. ಉದ್ಯೋಗದಲ್ಲಿರುವವರಿಗೆ ಈ ವಾರ ಉತ್ತಮ ಫಲ ದೊರೆಯಲಿದೆ. ನಿಮ್ಮ ಸಹೋದ್ಯೋಗಿಗಳೊಂದಿಗೆ ನೀವು ಉತ್ತಮ ಬಾಂಧವ್ಯವನ್ನು ಕಾಪಾಡಿಕೊಳ್ಳಲಿದ್ದು ಅವರ ಸಂಪೂರ್ಣ ಸಹಕಾರವನ್ನು ಪಡೆಯಲಿದ್ದೀರಿ.

ನಿಮ್ಮ ಕೌಶಲವನ್ನು ಬಳಸಿ ಕೆಲಸದಲ್ಲಿ ಉತ್ತಮ ಸಾಧನೆ ಮಾಡುವ ಅಗತ್ಯವಿದೆ. ಆಗ ಮಾತ್ರವೇ ಪರಿಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದ್ದು ನಿಮ್ಮ ಯೋಜನೆಗಳು ಅನುಕೂಲಕರ ಪಥದಲ್ಲಿ ಮುಂದುವರಿಯಲಿವೆ. ಕೆಲ ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸುವುದಕ್ಕಾಗಿ ನೀವು ಕೆಲಸ ಮಾಡಲಿದ್ದೀರಿ. ಈ ಕೆಲಸವು ಶೀಘ್ರವಾಗಿ ನೆರವೇರಲಿದ್ದು ಇತರರ ಅಚ್ಚರಿಗೆ ಕಾರಣವೆನಿಸಲಿದೆ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದ ಕುರಿತು ಗಂಭೀರತೆ ತೋರಲಿದ್ದಾರೆ ಹಾಗೂ ಕಠಿಣ ಶ್ರಮ ಪಡಲಿದ್ದಾರೆ. ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳದಿದ್ದರೂ ಈ ಕುರಿತು ನೀವು ಕಾಳಜಿ ವಹಿಸಬೇಕು.

ತುಲಾ: ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಸಾಮಾನ್ಯ ವಾರವೆನಿಸಲಿದೆ. ನಿಮ್ಮ ಪ್ರೇಮಿಯ ಜೊತೆಗಿನ ಸಂಬಂಧವು ಇನ್ನಷ್ಟು ಗಟ್ಟಿಯಾಗಲಿದೆ. ನಿಮ್ಮ ಜೀವನ ಸಂಗಾತಿಯು ಕೌಟುಂಬಿಕ ಬದುಕಿನಲ್ಲಿ ಸಂತಸವನ್ನು ಆನಂದಿಸಲಿದ್ದು ಪರಸ್ಪರ ನಿಷ್ಠೆಯನ್ನು ತೋರಲಿದ್ದೀರಿ. ವೆಚ್ಚಗಳನ್ನು ಹೇಗೆ ನಿಯಂತ್ರಿಸಬೇಕು ಎನ್ನುವುದನ್ನು ಕಲಿತುಕೊಳ್ಳಲು ಇದು ಸಕಾಲ. ಇಲ್ಲದಿದ್ದರೆ ನೀವು ಪರಿತಪಿಸಬೇಕಾದೀತು.

ನಿಮ್ಮ ವೆಚ್ಚಗಳನ್ನು ನಿಯಂತ್ರಿಸಿ ಆದಾಯದ ಮೇಲೆ ಗಮನ ನೀಡಿರಿ. ವ್ಯವಹಾರದ ದೃಷ್ಟಿಯಿಂದ ಇದು ಸಾಮಾನ್ಯ ಸಮಯವೆನಿಸಲಿದೆ. ಈಗ ಹೂಡಿಕೆ ಮಾಡುವುದು ಅಪಾಯಕಾರಿ. ಹೂಡಿಕೆ ಮಾಡುವುದು ಅನಿವಾರ್ಯವೆನಿಸಿದರೆ ದೀರ್ಘಕಾಲೀನ ಹೂಡಿಕೆಗೆ ಗಮನ ನೀಡಿರಿ. ಉದ್ಯೋಗದ ಸ್ಥಳದಲ್ಲಿ ಕೆಲಸದ ಒತ್ತಡವು ಹೆಚ್ಚಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ಸರ್ಕಾರಿ ವಲಯದಿಂದ ಪ್ರಯೋಜನವನ್ನು ಪಡೆಯಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ ನಿಮ್ಮ ಅಧ್ಯಯನದ ಕುರಿತು ನೀವು ಗಂಭೀರತೆಯನ್ನು ತೋರಬೇಕು. ಇದರಿಂದ ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ಈ ವಾರವು ಪ್ರಯಾಣಿಸಲು ಉತ್ತಮ.

ವೃಶ್ಚಿಕ:ಇತರರ ತಪ್ಪುಗಳನ್ನು ಉಲ್ಲೇಖಿಸುವ ಬದಲಿಗೆ ನಿಮ್ಮ ಸಂಬಂಧವನ್ನು ಗಟ್ಟಿಗೊಳಿಸಲು ಗಮನ ನೀಡಿರಿ. ಇದು ನಿಮ್ಮ ಸಂಬಂಧವನ್ನು ಸುಧಾರಿಸಲಿದೆ. ನಿಮ್ಮ ಪ್ರೇಮಿಯು ನಿಮಗೆ ಏನಾದರೂ ಪ್ರಮುಖ ವಸ್ತುವನ್ನು ನೀಡಲಿದ್ದಾರೆ. ಮಾನಸಿಕ ಚಿಂತೆಗಳು ಮತ್ತು ವೆಚ್ಚಗಳು ನಿಮ್ಮನ್ನು ಕಾಡಬಹುದು. ಆದರೂ ಕಾಲ ಕಳೆದಂತೆ ನಿಮ್ಮ ಸಮಸ್ಯೆಗಳು ಬಗೆಹರಿಯುತ್ತವೆ. ನಿಮ್ಮ ಜಾಣ್ಮೆಯನ್ನು ನೀವು ಬಳಸಿಕೊಳ್ಳುವ ಕಾರಣ ನಿಮಗೆ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ.

ಈ ವಾರದಲ್ಲಿ ವ್ಯವಹಾರದಲ್ಲಿ ಉತ್ತಮ ಡೀಲು ಉಂಟಾಗುವ ಕಾರಣ ನಿಮಗೆ ಲಾಭ ಉಂಟಾಗಲಿದೆ. ಉದ್ಯೋಗಿಗಳು ಒಂದಷ್ಟು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಕೆಲಸದಲ್ಲಿ ಯಾವುದೇ ಅಡಚಣೆ ಕಾಣಿಸಿಕೊಳ್ಳದು. ಹೀಗಾಗಿ ಕಠಿಣ ಶ್ರಮ ನಡೆಸಿ. ನಿಮ್ಮ ವೆಚ್ಚಗಳನ್ನು ನಿಯಂತ್ರಿಸಿ. ಯಾರಿಗೂ ಸಾಲ ಕೊಡಬೇಡಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ಕಠಿಣ ಶ್ರಮ ತೋರಬೇಕು. ಅನೇಕ ಅಡಚಣೆಗಳ ನಂತರ ನೀವು ಅಧ್ಯಯನದಲ್ಲಿ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ನಿಮಗೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಬಹುದು. ವಾರದ ನಡುವಿನ ಮತ್ತು ಕೊನೆಯ ಕೆಲವು ದಿನಗಳು ಪ್ರಯಾಣಿಸಲು ಉತ್ತಮ.

ಧನು: ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಆದರೂ ನೀವು ನಿಮ್ಮ ಸಂಗಾತಿಯೊಂದಿಗೆ ವಿದೇಶಕ್ಕೆ ಹೋಗಬಹುದು. ನಿಮ್ಮ ಪ್ರೇಮಿಯ ಜೊತೆಗೆ ನೀವು ಕೆಲವೊಂದು ಸಮಸ್ಯೆಗಳನ್ನು ಹಂಚಿಕೊಳ್ಳಬಹುದು. ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಕೌಟುಂಬಿಕ ಬದುಕಿನಲ್ಲಿ ಖಂಡಿತವಾಗಿಯೂ ಒತ್ತಡ ಕಾಣಿಸಿಕೊಳ್ಳಲಿದ್ದು ಇದು ನಿಮ್ಮ ವೃತ್ತಿ ಬದುಕಿನ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ಎಚ್ಚರಿಕೆಯಿಂದ ಇರಿ ಹಾಗೂ ಕೆಲಸಕ್ಕೆ ಸಂಪೂರ್ಣ ಗಮನ ನೀಡಿರಿ.

ವ್ಯವಹಾರದ ವಿಚಾರದಲ್ಲಿ ಈ ವಾರವು ದುರ್ಬಲ ಎನಿಸಲಿದೆ. ಆದರೂ ಹೂಡಿಕೆ ಮಾಡಲು ಅವಕಾಶ ದೊರೆಯಬಹುದು. ಆದರೆ ಅಷ್ಟೊಂದು ಲಾಭ ದೊರೆಯದು. ನೀವು ಸರ್ಕಾರಿ ಕ್ಷೇತ್ರದಿಂದ ಲಾಭವನ್ನು ಪಡೆಯಲಿದ್ದೀರಿ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಅತ್ಯಂತ ಲಾಭದಾಯಕ ಎನಿಸಲಿದೆ. ವಿಶೇಷ ವ್ಯಕ್ತಿಯ ಮಾರ್ಗದರ್ಶನದಲ್ಲಿ ಮುಂದಕ್ಕೆ ಸಾಗಲು ನಿಮಗೆ ಅವಕಾಶ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಮಕರ: ಕೌಟುಂಬಿಕ ಬದುಕಿನಲ್ಲಿ ಸಂತಸ ನೆಲೆಸಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನವನ್ನು ಆನಂದಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಜೊತೆಗೆ ಆಪ್ತತೆ ಮತ್ತು ಸಾಮರಸ್ಯವು ಹೆಚ್ಚಲಿದೆ. ಹೀಗಾಗಿ ಕೌಟುಂಬಿಕ ಜವಾಬ್ದಾರಿಗಳು ಸಹ ಈಡೇರಲಿವೆ. ನಿಮ್ಮ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶ ದೊರೆಯಲಿದೆ. ಇದು ಜನರ ಮೆಚ್ಚುಗೆಯನ್ನು ಗಳಿಸಲಿದೆ. ಕೆಲಸದ ಸ್ಥಳದ ಸ್ಥಿತಿಯು ಸದೃಢವಾಗಿರಲಿದೆ. ಎದುರಾಳಿಗಳು ದಿಗಿಲುಗೊಳ್ಳಲಿದ್ದಾರೆ. ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ವ್ಯವಹಾರದಲ್ಲಿ ಸರಿಯಾದ ವೇಗದಲ್ಲಿ ಪ್ರಗತಿ ಕಾಣಿಸಿಕೊಳ್ಳಲಿದ್ದು ನಿಮಗೆ ತೃಪ್ತಿ ದೊರೆಯಲಿದೆ.

ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ನೀವು ಅಧ್ಯಯನದ ಕುರಿತು ಹೆಚ್ಚಿನ ಗಮನ ನೀಡಬೇಕು. ಅಧ್ಯಯನದಿಂದ ವಿಚಲಿತರಾಗದಂತೆ ವಿಶೇಷ ಕಾಳಜಿ ವಹಿಸಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಉಂಟಾಗಲಿದೆ. ವಾರದ ಆರಂಭಿಕ ದಿನಗಳು ಪ್ರವಾಸಕ್ಕೆ ಹೋಗಲು ಅತ್ಯುತ್ತಮ.

ಕುಂಭ: ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಒಂದಷ್ಟು ಒತ್ತಡ ಅನುಭವಿಸಲಿದ್ದಾರೆ. ನಿಮ್ಮ ಜೀವನ ಸಂಗಾತಿಯ ಆರೋಗ್ಯವು ಕೆಡುವ ಸಾಧ್ಯತೆ ಇದ್ದು, ಇದು ನಿಮ್ಮ ಚಿಂತೆಗೆ ಕಾರಣವೆನಿಸಲಿದೆ. ಆದರೆ ನೀವು ಗಮನ ನೀಡಿದರೆ ಎಲ್ಲವೂ ಸರಿಯಾಗಲಿದೆ. ನಿಮ್ಮ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲಿದ್ದೀರಿ. ವ್ಯವಹಾರವನ್ನು ವಿಸ್ತರಿಸುವ ಸಾಧ್ಯತೆಗಳನ್ನು ನೀವು ಪರಿಶೋಧಿಸಬಹುದು. ಇದರಿಂದ ನಿಮಗೆ ಲಾಭ ಉಂಟಾಗಲಿದೆ.

ಉದ್ಯೋಗದಲ್ಲಿರುವವರಿಗೆ ಕೆಲಸದಲ್ಲಿ ಬಡ್ತಿ ಲಭಿಸಬಹುದು. ನಿಮ್ಮ ಬಾಸ್‌ ಜೊತೆಗೆ ನೀವು ಚೆನ್ನಾಗಿ ವರ್ತಿಸಬೇಕು. ಆಗ ಮಾತ್ರವೇ ಅವರು ನಿಮಗೆ ಸಾಕಷ್ಟು ನೆರವನ್ನು ನೀಡಬಹುದು. ಪ್ರೇಮ ಜೀವನದ ವಿಚಾರದಲ್ಲಿ ಸಮಯವು ಅನುಕೂಲಕರವಾಗಿಲ್ಲ. ಏಕೆಂದರೆ ನಿಮ್ಮ ನಡುವೆ ಎಲ್ಲವೂ ಸರಿ ಇರುವಂತೆ ಕಾಣುತ್ತಿಲ್ಲ. ಇದನ್ನು ಸಹಜ ಸ್ಥಿತಿಗೆ ತರಲು ನೀವು ಪ್ರಯತ್ನಿಸಬೇಕಾದೀತು. ವಿದ್ಯಾರ್ಥಿಗಳು ತಮ್ಮ ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡಲಿದ್ದಾರೆ. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ಒತ್ತಡದಿಂದ ದೂರವಿದ್ದು ದೈನಂದಿನ ಕಾರ್ಯದಲ್ಲಿ ನಿರಂತರತೆಯನ್ನು ಕಾಪಾಡಿ. ವಾರದ ಆರಂಭಿಕ ಮತ್ತು ಮಧ್ಯದ ದಿನಗಳು ಪ್ರಯಾಣಿಸಲು ಉತ್ತಮ.

ಮೀನ: ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ ನಿಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಿ. ನಿಮಗೆ ಯಶಸ್ಸು ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ಕೌಟುಂಬಿಕ ಬದುಕನ್ನು ಆನಂದಿಸಲಿದ್ದಾರೆ. ಈ ವಾರದಲ್ಲಿ ಯಾವುದೇ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ನಿಮಗೆ ನಷ್ಟ ಉಂಟಾದೀತು. ಹಣದ ಒಳಹರಿವು ಚೆನ್ನಾಗಿರಲಿದೆ. ಆದರೆ ವೆಚ್ಚಗಳಲ್ಲಿಯೂ ಹೆಚ್ಚಳ ಉಂಟಾಗಲಿದೆ. ಅನಗತ್ಯ ಪ್ರಯಾಣದ ಕಾರಣ ನಿಮ್ಮ ಚಿಂತೆಗಳು ಮತ್ತು ವೆಚ್ಚದಲ್ಲಿ ಹೆಚ್ಚಳ ಉಂಟಾಗಲಿದೆ.

ಉದ್ಯೋಗದಲ್ಲಿರುವವರು ಕೆಲಸದಲ್ಲಿ ಯಶಸ್ಸು ಗಳಿಸಲಿದ್ದಾರೆ. ಎಲ್ಲಾ ಕೆಲಸಗಳನ್ನು ನೀವು ಸಕಾಲದಲ್ಲಿ ಮುಗಿಸಲಿದ್ದೀರಿ. ಇದರಿಂದಾಗಿ ನಿಮ್ಮ ಸ್ಥಿತಿಯಲ್ಲಿ ಸುಧಾರಣೆ ಉಂಟಾಗಲಿದೆ. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವ ಜನರು ತಮ್ಮ ವ್ಯಾವಹಾರಿಕ ಜಾಣ್ಮೆಯನ್ನು ಬಳಸಿ ತಮ್ಮ ವ್ಯವಹಾರವನ್ನು ಬಲಪಡಿಸಲಿದ್ದಾರೆ. ನಿಮ್ಮ ವ್ಯವಹಾರ ಪಾಲುದಾರರು ಸಹ ತಮ್ಮ ಕೌಶಲ್ಯವನ್ನು ಬಳಸಿ ಕೆಲಸದಲ್ಲಿ ದೃಢತೆ ತೋರಲಿದ್ದಾರೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಬೇಕು. ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕಾದೀತು. ವಾರದ ನಡುವಿನ ದಿನಗಳು ಪ್ರಯಾಣಿಸಲು ಅನುಕೂಲಕರ.

ABOUT THE AUTHOR

...view details