ಭಾಗಲ್ಪುರ್ (ಬಿಹಾರ):ಬಿಹಾರದ ಭಾಗಲ್ಪುರದ ಮಹಿಳಾ ಕಾಲೇಜೊಂದರಲ್ಲಿ ನೂತನ ವಸ್ತ್ರ ಸಂಹಿತೆಯನ್ನು ಜಾರಿಗೆ ತರಲಾಗಿದ್ದು, ಇಲ್ಲಿ ವಿದ್ಯಾರ್ಥಿನಿಯರಿಗೆ ಕೂದಲು ಬಿಟ್ಟುಕೊಂಡು ಬರಲು ಹಾಗೂ ಸೆಲ್ಫಿ ತೆಗೆಯಲು ನಿಷೇಧ ಹೇರಲಾಗಿದೆ.
ಸುಂದರ್ವತಿ ಮಹಿಳಾ ಮಹಾವಿದ್ಯಾಲಯ, ಇದು ಭಾಗಲ್ಪುರದ ಏಕೈಕ ಮಹಿಳಾ ಕಾಲೇಜಾಗಿದ್ದು, ಇಲ್ಲಿ ಪದವಿ ಪೂರ್ವ ಹಾಗೂ ಪದವಿ ಶಿಕ್ಷಣ ನೀಡಲಾಗುತ್ತದೆ. ಪದವಿ ಪೂರ್ವ ಕೋರ್ಸ್ನ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಗಳಲ್ಲಿ ಸುಮಾರು 1500 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. 11 ಮತ್ತು 12ನೇ ತರಗತಿ ವಿದ್ಯಾರ್ಥಿನಿಯರಿಗೆ ಈ ವರ್ಷದಿಂದ ಹೊಸ ಡ್ರೆಸ್ ಕೋಡ್ ಜಾರಿಗೆ ತರಲು ಕಾಲೇಜು ಸಮಿತಿ ನಿರ್ಧರಿಸಿದ್ದು, ಇದಕ್ಕೆ ಪ್ರಾಂಶುಪಾಲರಾದ ಪ್ರೊ. ರಮಣ್ ಸಿನ್ಹಾ ಕೂಡ ಅನುಮತಿ ನೀಡಿದ್ದಾರೆ.