ಡೆಹ್ರಾಡೂನ್:ಕೈಗಾರಿಕೆಗಳ ಅತಿಯಾದ ಹೊಗೆ ಸೇರಿದಂತೆ ನಾನಾ ಕಾರಣಗಳಿಗೆ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದರಿಂದಾಗಿ ಹಿಮರಾಶಿ ಅಪಾಯಕ್ಕೆ ಸಿಲುಕಿವೆ. ಹಿಮ ವೇಗವಾಗಿ ಕರಗುತ್ತಿದ್ದು, ಭವಿಷ್ಯದಲ್ಲಿ ಭಾರಿ ಕಂಟಕ ಸೃಷ್ಟಿಸುವ ಸಾಧ್ಯತೆ ಇದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಹಿಮನದಿಗಳು ಕರಗಲು ಕಾರಣಗಳ ಬಗ್ಗೆ ವಿಜ್ಞಾನಿಗಳು ನಿರಂತರ ಸಂಶೋಧನೆ ನಡೆಸುತ್ತಿದ್ದಾರೆ.
ಉತ್ತರಾಖಂಡದ ಹಿಮಾಲಯ ಪ್ರದೇಶಗಳಲ್ಲಿ ಸುಮಾರು ಒಂದು ಸಾವಿರ ಹಿಮನದಿಗಳಿವೆ. ಇವುಗಳಲ್ಲಿ ಗಂಗೋತ್ರಿ ಜಲಾನಯನ ಪ್ರದೇಶದಲ್ಲಿ ಇರುವ ಹಿಮನದಿಗಳು ವೇಗವಾಗಿ ಕರಗುತ್ತಿದೆ. ವಾಡಿಯಾ ಇನ್ಸ್ಟಿಟ್ಯೂಟ್ ಆಫ್ ಹಿಮಾಲಯನ್ ಜಿಯಾಲಜಿಯ ವಿಜ್ಞಾನಿಗಳ ಮಾಹಿತಿಯ ಪ್ರಕಾರ, ಗಂಗೋತ್ರಿ ಗ್ಲೇಸಿಯರ್ 1935 ರಿಂದ 2022 ರ ವರೆಗೆ ಅಂದರೆ 87 ವರ್ಷಗಳಲ್ಲಿ ಸುಮಾರು 1726.9 ಮೀಟರ್ಗಳಷ್ಟು ಹಿಂದಕ್ಕೆ ಸಾಗಿದೆ. ಇದು ಸುಮಾರು ಒಂದೂವರೆ ಕಿಲೋಮೀಟರ್ಗಿಂತ ಹೆಚ್ಚಾಗಿದೆ.
17 ವರ್ಷದಿಂದ ಅತ್ಯಧಿಕ ಹಾನಿ:ಗಂಗೋತ್ರಿ ಗ್ಲೇಸಿಯರ್ ವೇಗವಾಗಿ ಕರಗಲು ಶುರು ಮಾಡಿದ್ದು, ಸುಮಾರು 17 ವರ್ಷಗಳಿಂದೀಚೆಗೆ. ಈ ಹಿಂದೆಯೂ ಹಿಮನದಿಗಳು ಕರುಗುತ್ತಿದ್ದವು. ಆದರೆ, ದಾಖಲೆಯ ಪ್ರಮಾಣದಲ್ಲಿ ಕರಗಲು ಶುರು ಮಾಡಿದ್ದು, ಈ ವರ್ಷಗಳಲ್ಲಿ. ಈ ಅವಧಿಯಲ್ಲಿ ಹಿಮನದಿ ಬಹಳ ವೇಗವಾಗಿ ಹಿಂದೆ ಸರಿದಿದ್ದು, ಕಂಡು ಬಂದಿವೆ ಎಂಬುದು ದಾಖಲೆಗಳು ಹೇಳುತ್ತವೆ.