ನವದೆಹಲಿ: ಚೀನಾದ ಸ್ಮಾರ್ಟ್‌ಫೋನ್ ತಯಾರಕ ವಿವೋದ ಭಾರತೀಯ ವಿಭಾಗವು ತೆರಿಗೆ ಪಾವತಿಸುವುದನ್ನು ತಪ್ಪಿಸಲು ತನ್ನ ವಹಿವಾಟಿನ ಸುಮಾರು 50 ಪ್ರತಿಶತವನ್ನು ಚೀನಾಕ್ಕೆ. ರವಾನೆ ಮಾಡಿದೆ ಎಂದು ಇಡಿ ಹೇಳಿದೆ, ಇದು 62,476 ಕೋಟಿ ರೂಪಾಯಿಯಾಗಿದೆ.
ತನಿಖಾ ಸಂಸ್ಥೆಯು ವಿವೋ ಮೊಬೈಲ್ ವಿರುದ್ಧ ಈ ವಾರದ ಆರಂಭದಲ್ಲಿ ಪ್ರಾರಂಭವಾದ ದಾಳಿಗಳ ನಂತರ ದೇಶದ ವಿವಿಧ 23 ಘಟಕಗಳು ಹಾಗೂ 119 ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿದ್ದ 465 ಕೋಟಿ ರೂಪಾಯಿ ಮತ್ತು 2 ಕೆಜಿ ಚಿನ್ನದ ಗಟ್ಟಿಯನ್ನು ವಶಪಡಿಸಿಕೊಂಡಿದೆ ಎಂದು ಹೇಳಿದೆ.