ಹೈದರಾಬಾದ್:ಆಂಧ್ರ ಪ್ರದೇಶದ ಮಾಜಿ ಸಚಿವ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣದ ಆರೋಪಿ ವೈಎಸ್ಆರ್ಸಿಪಿ (ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷ) ಸಂಸದ ಅವಿನಾಶ್ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇಂದು ತೆಲಂಗಾಣ ಹೈಕೋರ್ಟ್‌ನಲ್ಲಿ ನಡೆಯಿತು. ಸಿಬಿಐ ಪರ ವಾದ ವಾದ ಮಂಡಿಸಿದ ವಕೀಲರು ಅವಿನಾಶ್ ಅವರಿಂದ ಇನ್ನೂ ಹೆಚ್ಚಿನ ಮಾಹಿತಿ ಸಂಗ್ರಹಿಸಬೇಕಿದೆ ಎಂದು ಹೇಳಿ ನಿರೀಕ್ಷಣಾ ಜಾಮೀನು ರದ್ದುಗೊಳಿಸಿವಂತೆ ನ್ಯಾಯಾಲಯಕ್ಕೆ ಕೋರಿದರು.
ನ್ಯಾಯಾಲಯದಲ್ಲಿ ವಾದ ಮಂಡಿಸಿದ ಸಿಬಿಐ ವಕೀಲರು, "ವಿವೇಕಾನಂದ ರೆಡ್ಡಿ ಹತ್ಯೆಯ ಸಂಚು ಅವಿನಾಶ್ ರೆಡ್ಡಿ ಮೊದಲೇ ತಿಳಿದಿತ್ತು. ಕಳೆದ ನಾಲ್ಕು ವಿಚಾರಣೆಗಳಿಗೂ ಅವರು ಸರಿಯಾಗಿ ಸ್ಪಂದಿಸಿರಲಿಲ್ಲ. ನಾವು ತನಿಖೆಯಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಪುರಾವೆಗಳನ್ನು ಸಂಗ್ರಹಿಸಿದ್ದೇವೆ. ಕೊಲೆಯ ಮೊದಲು ಮತ್ತು ನಂತರ ಸುನೀಲ್ ಯಾದವ್ ಮತ್ತು ಉದಯ್ ಮೃತ ಅವಿನಾಶ್ ಮನೆಯಲ್ಲಿದ್ದರು, ಕೊಲೆಯನ್ನು ಹೃದಯಾಘಾತ ಎಂದು ಏಕೆ ಬಿಂಬಿಸಲಾಗಿದೆ ಎಂದು ತಿಳಿಯಬೇಕು.
ಕೊಲೆಯಾದ ದಿನ ಬೆಳಗ್ಗೆ ಅವಿನಾಶ್ ರೆಡ್ಡಿ ಜಮ್ಮಲಗುಡ್ಡ ಬಳಿ ಇದ್ದರು ಎನ್ನಲಾಗಿದೆ. ಆದರೆ, ಅವರ ಮೊಬೈಲ್ ಸಿಗ್ನಲ್ಗಳನ್ನು ಪರಿಶೀಲಿಸಿದರೆ ಅವರು ಮನೆಯಲ್ಲಿಯೇ ಇದ್ದಾರೆಂದು ತೋರಿಸುತ್ತದೆ. ಮತ್ತು ವಿವೇಕಾನಂದ ರೆಡ್ಡಿ ಅವರು ರಾತ್ರಿಯಿಡೀ ಅಸಹಜವಾಗಿ ಫೋನ್ ಬಳಸುತ್ತಿದ್ದರು ಎಂದು ವಕೀಲರು ನ್ಯಾಯಾಧೀಶರ ಮುಂದೆ ಹೇಳಿದರು. ಬಳಿಕ ಹೈಕೋರ್ಟ್ ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಜಾಮೀನು ಅರ್ಜಿ ಕೋರಿದ ಅವಿನಾಶ್ ರೆಡ್ಡಿ: ವಿವೇಕ ರೆಡ್ಡಿ ಹತ್ಯೆ ಪ್ರಕರಣದ ತನಿಖೆಗೆ ಹಾಜರಾಗುವಂತೆ ಸಿಬಿಐ ಮತ್ತೊಮ್ಮೆ ನೋಟಿಸ್ ಜಾರಿ ಮಾಡಿರುವ ಹಿನ್ನೆಲೆಯಲ್ಲಿ ಅವಿನಾಶ್ ರೆಡ್ಡಿ ತೆಲಂಗಾಣ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯ ವಿಚಾರಣೆಯ ತನಕ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡುವಂತೆ ನ್ಯಾಯಾಲಯವನ್ನು ಕೋರಿದರು.
“ವಿವೇಕಾ ಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ, ದಸ್ತಗಿರಿ ಹೇಳಿಕೆಯ ಪ್ರಕಾರ ಸಿಬಿಐ ನನ್ನನ್ನು ಬಂಧಿಸಲು ಮುಂದಾಗಿದೆ. ಆಶ್ಚರ್ಯವೆಂದರೆ ಈ ತನಿಖೆಯಲ್ಲಿ ಗೂಗಲ್ ಟೇಕ್‌ಔಟ್ ಡೇಟಾವನ್ನು ಮುನ್ನೆಲೆಗೆ ತಂದಿದ್ದಾರೆ. ಗೂಗಲ್ ಟೇಕ್‌ಔಟ್ ಡೇಟಾ ವ್ಯಕ್ತಿ ಎಲ್ಲಿದ್ದಾನೆ ಎಂದು ಹೇಳುವುದಿಲ್ಲ. ನಾಲ್ಕು ವರ್ಷಗಳಲ್ಲಿ ನಡೆದ ಹಲವು ಬೆಳವಣಿಗೆಗಳ ನಂತರ ನನ್ನ ಮೇಲೆ ಆರೋಪಿಸಲಾಗಿದೆ, ನನ್ನನ್ನು ಬಂಧಿಸದೆ ಮಧ್ಯಂತರ ಆದೇಶ ನೀಡಬೇಕು. ಬಂಧನದ ವೇಳೆ ಸಿಬಿಐಗೆ ಜಾಮೀನು ನೀಡುವಂತೆ ಆದೇಶಿಸಬೇಕು" ಎಂದು ಅವಿನಾಶ್ ರೆಡ್ಡಿ ಜಾಮೀನು ಅರ್ಜಿ ಕೋರಿದ್ದಾರೆ.
ನಿಗೂಢವಾಗಿ ಹತ್ಯೆಯಾಗಿದ್ದ ವಿವೇಕಾನಂದ ರೆಡ್ಡಿ:ಮಾಜಿ ಮುಖ್ಯಮಂತ್ರಿ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಅವರ ಕಿರಿಯ ಸಹೋದರ ಮತ್ತು ಪ್ರಸ್ತುತ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ.ಎಸ್.ವಿವೇಕಾನಂದ ರೆಡ್ಡಿ ಅವರು ಮಾರ್ಚ್ 15, 2019 ರಂದು ಅವರ ಪುಲಿವೆಂದುಲದ ನಿವಾಸದಲ್ಲಿ ನಿಗೂಢವಾಗಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. 2019ರ ಚುನಾವಣೆಗೆ ಒಂದು ತಿಂಗಳ ಮುಂದೆ ಈ ಕೊಲೆ ನಡೆದಿತ್ತು.
ಇದನ್ನೂ ಓದಿ:ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣ: ಸಿಬಿಐಯಿಂದ ಆಂಧ್ರ ಸಿಎಂ ಒಎಸ್‌ಡಿ & ಮನೆಯ ಸಹಾಯಕರ ವಿಚಾರಣೆ