ಹೈದರಾಬಾದ್:ನಾವು ನೀವೆಲ್ಲಾ ಕಾರ್, ಬೈಕ್ ರೇಸ್‌ಗಳನ್ನು ನೋಡಿದ್ದೇವೆ. ಆದರೆ ಇಲ್ಲಿ ಆಟೋಗಳ ನಡುವೆ ರೇಸ್ ನಡೆದಿದೆ. ಹೈದರಾಬಾದ್‌ನ ಹಳೇ ನಗರದಲ್ಲಿ ಮೂವರು ಆಟೋ ಚಾಲಕರು ರೇಸ್ನನ್ನು ಆಯೋಜಿಸಿ, ರಸ್ತೆಗಳಲ್ಲಿ ಗಲಾಟೆ ಮಾಡುತ್ತಿದ್ದರು.
ಮಧ್ಯರಾತ್ರಿ ರಸ್ತೆಯಲ್ಲಿ ಡೇಂಜರಸ್ ಆಟೋ ರೇಸ್ ನಡೆಯುತ್ತಿರುವುದನ್ನು ನೋಡಿದ ಇತರ ವಾಹನ ಸವಾರರು ಭಯಗೊಂಡಿದ್ದರು. ಈ ಡೇಂಜರಸ್ ರೇಸ್ ಸಂತೋಷ್ ನಗರದ ಓವೈಸಿ ಜಂಕ್ಷನ್‌ನಿಂದ ಹೈದರಾಬಾದ್‌ನ ಚಂದ್ರಾಯನಗುಟ್ಟದ ತನಕ ನಡೆದಿದೆ.