ಮಸ್ಸೂರಿ (ಉತ್ತರಾಖಂಡ): ಇಂಡಿಯನ್ ಆಟೋಮೋಟಿವ್ ರೇಸಿಂಗ್ ಕ್ಲಬ್‌ನ ಸಂಸ್ಥಾಪಕ ಮತ್ತು ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರ ಗೌರವಾರ್ಥವಾಗಿ 'ನಜೀರ್ ಹೂಸಿನ್ ಮೆಮೋರಿಯಲ್ ಡ್ರೈವ್' ( 'Nazir Hoosein Memorial Drive') ಎಂದು ಕರೆಯಲ್ಪಡುವ ಹೆರಿಟೇಜ್ ಹಿಮಾಲಯನ್ ಕಾರು ರ‍್ಯಾಲಿ(Heritage Himalayan Car Rally)ಯಲ್ಲಿ 92 ಕ್ಕೂ ಹೆಚ್ಚು ವಿಂಟೇಜ್ ಕಾರುಗಳು ಭಾಗವಹಿಸಿದ್ದವು.
ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ (Tourism Minister Satpal Maharaj), ಕ್ಯಾಬಿನೆಟ್ ಸಚಿವ ಗಣೇಶ್ ಜೋಶಿ (Cabinet Minister Ganesh Joshi) ಮತ್ತು ಬರಹಗಾರ ರಸ್ಕಿನ್ ಬಾಂಡ್ ಜಂಟಿಯಾಗಿ ರ‍್ಯಾಲಿಗೆ ಚಾಲನೆ ನೀಡಿದರು. ಈ ವಿಂಟೇಜ್ ಕಾರುಗಳು ವೋಕ್ಸ್‌ವ್ಯಾಗನ್‌ನ ಬೀಟಲ್ ಮತ್ತು ಇಟಾಲಿಯನ್ ಫಿಯೆಟ್ ಅನ್ನು ಒಳಗೊಂಡಿತ್ತು.