ಕರ್ನಾಟಕ

karnataka

ಫರಿದಾಬಾದ್​​ನಲ್ಲಿ ಅಫಘಾತ.. ಸಿಸಿಟಿವಿಯಲ್ಲಿ ಸೆರೆಯಾಯ್ತು ಲೈವ್​ ವಿಡಿಯೋ

By

Published : Dec 1, 2021, 8:58 PM IST

ಹರಿಯಾಣದ ಫರಿದಾಬಾದ್​​ನಲ್ಲಿ ಅಪಘಾತ ಸಂಭವಿಸಿದ್ದು, ಅದರ ದೃಶ್ಯಾವಳಿ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಘಟನೆ ವೇಳೆ ಓರ್ವ ಮಹಿಳೆ ಭೀಕರವಾಗಿ ಗಾಯಗೊಂಡಿದ್ದಾಳೆ.

Faridabad Live Accident
Faridabad Live Accident

ಫರಿದಾಬಾದ್​​​(ಹರಿಯಾಣ):ನಿಯಂತ್ರಣ ಕಳೆದುಕೊಂಡ ಟ್ರ್ಯಾಕ್ಟರ್​​ವೊಂದು ಅಪಘಾತಕ್ಕೀಡಾಗಿರುವ ಘಟನೆ ಹರಿಯಾಣದ ಫರಿದಾಬಾದ್​​ನಲ್ಲಿ ನಡೆದಿದ್ದು, ಇದರ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಘಟನೆ ವೇಳೆ ಇಬ್ಬರು ಮಹಿಳೆಯರಿಗೆ ಗಾಯಗಳಾಗಿವೆ.

ಫರಿದಾಬಾದ್​​ನಲ್ಲಿ ರಸ್ತೆ ಅಫಘಾತ

ಟ್ರ್ಯಾಕ್ಟರ್​ ಚಲಾಯಿಸಿಕೊಂಡು ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ನಿಯಂತ್ರಣ ಕಳೆದುಕೊಂಡಿರುವ ಟ್ರ್ಯಾಕ್ಟರ್​ ಏಕಾಏಕಿ ಅಂಗಡಿವೊಂದರಲ್ಲಿ ನುಗ್ಗಿದೆ. ರಸ್ತೆ ಪಕ್ಕದಲ್ಲಿ ಬರುತ್ತಿದ್ದ ಮಹಿಳೆಯರಿಬ್ಬರು ಡಿಕ್ಕಿ ಹೊಡೆದಿದೆ. ಇದರ ಜೊತೆಗೆ ಅಂಗಡಿ ಮುಂದೆ ಕುಳಿತಿದ್ದ ಯುವಕನಿಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಇವರನ್ನ ಫರಿದಾಬಾದ್​​ನ ಸಿವಿಲ್​​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗೋಸ್ಕರ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿರಿ:ಬಸ್ ​ ​- ಟ್ರಕ್​ ನಡುವೆ ಭೀಕರ ಅಪಘಾತ.. ಆರು ಮಂದಿ ದುರ್ಮರಣ, 16 ಜನರ ಸ್ಥಿತಿ ಗಂಭೀರ

ಪ್ರತ್ಯಕ್ಷದರ್ಶಿಗಳ ಪ್ರಕಾರ ಟ್ರ್ಯಾಕ್ಟರ್​ ಚಲಾಯಿಸುತ್ತಿದ್ದ ಇಬ್ಬರು ಅಪ್ರಾಪ್ತರಾಗಿದ್ದು, ಅತಿವೇಗವಾಗಿ ಚಲಾವಣೆ ಮಾಡಿಕೊಂಡು ಬಂದ ಪರಿಣಾಮ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ABOUT THE AUTHOR

...view details