ಕರ್ನಾಟಕ

karnataka

ETV Bharat / bharat

'ಹರ್ ಘರ್ ತಿರಂಗಾ' ಬೈಕ್ ರ‍್ಯಾಲಿಗೆ ಚಾಲನೆ ನೀಡಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು - ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ದೆಹಲಿಯ ಕೆಂಪುಕೋಟೆಯಿಂದ ವಿಜಯ್ ಚೌಕ್​ವರೆಗೆ ಹರ್ ಘರ್ ತಿರಂಗಾ ಬೈಕ್ ರ‍್ಯಾಲಿ- ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಚಾಲನೆ - ಬೈಕ್ ರ‍್ಯಾಲಿಯಲ್ಲಿ ಕೇಂದ್ರ ಸಚಿವರು, ಸಂಸದರು ಭಾಗಿ

har ghar tiranga bike rally
ಹರ್ ಘರ್ ತಿರಂಗಾ ಬೈಕ್ ರ‍್ಯಾಲಿ

By

Published : Aug 3, 2022, 2:13 PM IST

ನವದೆಹಲಿ: 75ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕೇಂದ್ರ ಸರ್ಕಾರ "ಹರ್ ಘರ್ ತಿರಂಗಾ" ಕಾರ್ಯಕ್ರಮ ಆಯೋಜಿಸಿದೆ. ಈ ಹಿನ್ನೆಲೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ದೆಹಲಿಯ ಕೆಂಪುಕೋಟೆಯಿಂದ ವಿಜಯ್ ಚೌಕ್ ವರೆಗೆ ಹರ್ ಘರ್ ತಿರಂಗ ಬೈಕ್ ರ‍್ಯಾಲಿಗೆ ಚಾಲನೆ ನೀಡಿದರು.

'ಹರ್ ಘರ್ ತಿರಂಗಾ' (ಪ್ರತಿ ಮನೆಯಲ್ಲೂ ತ್ರಿವರ್ಣ) ಆಂದೋಲನವನ್ನು ಬಲಪಡಿಸುವಂತೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರದ ಜನತೆಗೆ ಕರೆ ನೀಡಿದ್ದಾರೆ. ಆಗಸ್ಟ್ 13 ಮತ್ತು 15ರ ನಡುವೆ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಅಥವಾ ಪ್ರದರ್ಶಿಸುವಂತೆ ಅವರು ಕರೆ ಕೊಟ್ಟಿದ್ದಾರೆ.

ಇದೀಗ ರಾಜಧಾನಿಯಲ್ಲಿ ಹರ್ ಘರ್ ತಿರಂಗಾ ಬೈಕ್ ರ‍್ಯಾಲಿಗೆ ಚಾಲನೆ ಸಿಕ್ಕಿದೆ. ತ್ರಿವರ್ಣ ಬೈಕ್ ರ‍್ಯಾಲಿಯಲ್ಲಿ ಕೇಂದ್ರ ಸಚಿವರು, ಸಂಸದರು ಭಾಗವಹಿಸಿದ್ದರು. ಸಂಸ್ಕೃತಿ ಸಚಿವಾಲಯದ ವತಿಯಿಂದ ರ‍್ಯಾಲಿ ಆಯೋಜಿಸಲಾಗಿದ್ದು, ಹಿರಿಯ ನಾಯಕರ ಜೊತೆಗೆ ನೂರಾರು ಜನರು ಭಾಗವಹಿಸಿದ್ದರು. ಎಲ್ಲರೂ ತಮ್ಮ ದ್ವಿಚಕ್ರ ವಾಹನಗಳಲ್ಲಿ ತ್ರಿವರ್ಣ ಧ್ವಜವನ್ನಿರಿಸಿ ರ‍್ಯಾಲಿಯಲ್ಲಿ ಭಾಗಿಯಾದರು.

ಇದನ್ನೂ ಓದಿ:ನಾನು ದಾಳಿಗೆ ಹೆದರುವುದಿಲ್ಲ ಎಂದ ಉದಯ್​ ಸಾಮಂತ್​: ಶಾಂತಿ ಕಾಪಾಡಲು ಸಿಎಂ ಶಿಂದೆ ಸೂಚನೆ

ABOUT THE AUTHOR

...view details