ಕರ್ನಾಟಕ

karnataka

ETV Bharat / bharat

ಲವ್​ ಜಿಹಾದ್​ ವಿರುದ್ಧ ವಿಶ್ವ ಹಿಂದೂ ಪರಿಷತ್​ ರಾಷ್ಟ್ರವ್ಯಾಪಿ ಅಭಿಯಾನ

ಲವ್​ ಜಿಹಾದ್​ ಮತ್ತು ಬಲವಂತದ ಮತಾಂತರ ವಿರುದ್ಧ ವಿಶ್ವ ಹಿಂದೂ ಪರಿಷತ್​ ವರ್ಷಾಂತ್ಯದಿಂದ 11 ದಿನ ಜಾಗೃತಿ ಅಭಿಯಾನ ನಡೆಸಲು ಮುಂದಾಗಿದೆ. ಮತಾಂತರವಾದವರನ್ನು ಘರ್​ ವಾಪ್ಸಿ ಮಾಡಿಕೊಳ್ಳಲಿದೆ.

love-jihad
ವಿಶ್ವ ಹಿಂದು ಪರಿಷತ್​ ರಾಷ್ಟ್ರವ್ಯಾಪಿ ಅಭಿಯಾನ

By

Published : Dec 20, 2022, 11:25 AM IST

ಲಖನೌ(ಉತ್ತರಪ್ರದೇಶ):ದೇಶದಲ್ಲಿ ಲವ್​ ಜಿಹಾದ್​ ಮತ್ತು ಬಲವಂತದ ಮತಾಂತರ ಪ್ರಕರಣಗಳು ಹೆಚ್ಚುತ್ತಿರುವ ಕಾರಣ, ಇದರ ವಿರುದ್ಧ ಜಾಗೃತಿ ಮೂಡಿಸಲು ವಿಶ್ವ ಹಿಂದೂ ಪರಿಷತ್ ನಾಳೆಯಿಂದ (ಡಿಸೆಂಬರ್ 21) 11 ದಿನ ರಾಷ್ಟ್ರವ್ಯಾಪಿ ಅಭಿಯಾನ ನಡೆಲು ಸಿದ್ಧವಾಗಿದೆ. ಇದರೊಂದಿಗೆ ಅನ್ಯಧರ್ಮಗಳಿಗೆ 'ಬಲವಂತ'ವಾಗಿ ಮತಾಂತರವಾದ ಸಾವಿರಾರು ಹಿಂದೂಗಳನ್ನು 'ಘರ್ ವಾಪ್ಸಿ' ಮಾಡಿಕೊಳ್ಳುವುದು ಅಭಿಯಾನದ ಉದ್ದೇಶವಾಗಿದೆ.

ಇತ್ತೀಚೆಗೆ ಹೆಚ್ಚಿನ ಪ್ರಮಾಣದಲ್ಲಿ ಧಾರ್ಮಿಕ ಮತಾಂತರ ನಡೆದ ದೇಶದ 1 ಸಾವಿರಕ್ಕೂ ಅಧಿಕ ಧರ್ಮ ಸೂಕ್ಷ್ಮ ಜಿಲ್ಲೆಗಳನ್ನು ವಿಎಚ್​ಪಿ ಗುರುತಿಸಿದೆ. ಈ ಪ್ರದೇಶಗಳಲ್ಲಿ ಅಭಿಯಾನವನ್ನು ಪ್ರಖರವಾಗಿ ನಡೆಸಿ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಡಿಸೆಂಬರ್​ 31 ರಿಂದ ಅಭಿಯಾನಕ್ಕೆ ಚಾಲನೆ ಸಿಗಲಿದೆ.

ಈಗಾಗಲೇ ಬೇರೆ ಮತಗಳಿಗೆ ಕಾರಣಾಂತರಗಳಿಂದ ಹೋದ ಜನರು ಅನುಭವಿಸುತ್ತಿರುವ ಕಷ್ಟಗಳಿಂದ ಮುಕ್ತಿ ನೀಡಲು, ಅವರನ್ನು ಮರಳಿ ಹಿಂದೂ ಧರ್ಮಕ್ಕೆ ತರುವುದೇ ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ. ನಮ್ಮವರನ್ನು ಹಿಂದೂ ಮಡಿಲಿಗೆ ಮತ್ತೆ ಸ್ವಾಗತಿಸುತ್ತೇವೆ ಎಂದು ವಿಎಚ್​ಪಿ ಕಾರ್ಯಕಾರಿಯೊಬ್ಬರು ತಿಳಿಸಿದರು.

ವರ್ಷದಲ್ಲಿ 5 ಸಾವಿರ ಘರ್​ವಾಪ್ಸಿ:ಲವ್​ ಜಿಹಾದ್​, ಬಲವಂತದ ಮತಾಂತರ ದೇಶಕ್ಕೆ ಅಪಾಯಕಾರಿಯಾಗಿದೆ. ಅನ್ಯಮತೀಯ ಯುವಕರು ಹಿಂದೂ ಹುಡುಗಿಯರನ್ನು ಪುಸಲಾಯಿಸಿ, ಲವ್ ಹೆಸರಿನಲ್ಲಿ ಒತ್ತಾಯಪೂರ್ವಕವಾಗಿ ಧರ್ಮಾಂತರ ಮಾಡಿ ಮದುವೆಯಾಗುತ್ತಾರೆ. ಇದು ಈಗಾಗಲೇ ವ್ಯಾಪಕವಾಗಿ ನಡೆದುಕೊಂಡು ಬಂದಿದೆ. ಇದರ ವಿರುದ್ಧದ ಜಾಗೃತಿಯೇ ಅಭಿಯಾನವಾಗಿದೆ. ಪ್ರತಿ ವರ್ಷ ಅನ್ಯಧರ್ಮಗಳಿಗೆ ಮತಾಂತರಗೊಂಡ 5 ಸಾವಿರ ಹುಡುಗಿಯರನ್ನು 'ಘರ್ ವಾಪ್ಸಿ' ಮಾಡಿಕೊಳ್ಳಲಾಗುವುದು ಎಂದು ವಿಎಚ್‌ಪಿ ಹೇಳಿದೆ.

ಓದಿ:ಪುಟ್ಟ ಕಂದನಿಗೆ ಹಾಲುಣಿಸಿದ ಕಾಮಧೇನು : ವಿಡಿಯೋ ನೋಡಿ

ABOUT THE AUTHOR

...view details