ಕೊಲ್ಕತ್ತಾ: ಜೈ ಶ್ರೀರಾಮ ಘೋಷಣೆ ಬಳಿಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಭಾಷಣ ಮಾಡದೇ ಇರುವುದು ಅವರ ಹಿಂದೂ ವಿರೋಧಿ ನೀತಿಯನ್ನು ಬಿಂಬಿಸುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಸುರೇಂದ್ರ ಜೈನ್ ತಿಳಿಸಿದರು.
ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 124ನೇ ಜನ್ಮ ಜಯಂತಿ ಅಂಗವಾಗಿ, ನಿನ್ನೆ ಕೊಲ್ಕತ್ತಾದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದ ಘಟನೆ ನಡೆದಿದೆ. ಸಮಾರಂಭವನ್ನು ಉದ್ದೇಶಿಸಿ ಮಮತಾ ಮಾತನಾಡಲು ವೇದಿಕೆ ಮೇಲೆ ಆಗಮಿಸಿದಾಗ, ಕೆಲವರು ಜೈ ಶ್ರೀರಾಮ ಘೋಷಣೆಗಳನ್ನು ಕೂಗಿ ಮಮತಾ ಭಾಷಣಕ್ಕೆ ಅಡ್ಡಿಯನ್ನುಂಟು ಮಾಡಿದರು.