ಪುಣೆ(ಮಹಾರಾಷ್ಟ್ರ):ಬಜಾಜ್ ಗ್ರೂಪ್‌ನ ಮಾಜಿ ಅಧ್ಯಕ್ಷ ರಾಹುಲ್ ಬಜಾಜ್ ಅವರು ನಿನ್ನೆ ವಿಧಿವಶರಾಗಿದ್ದು, ಅವರ ಪಾರ್ಥಿವ ಶರೀರವನ್ನು ಅಕುರ್ಡಿಯಲ್ಲಿರುವ ನಿವಾಸಕ್ಕೆ ತರಲಾಗಿದ್ದು, ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿದೆ. ಪುಣೆಯಲ್ಲಿರುವ ವೈಕುಂಠ ಸ್ಮಶಾನದಲ್ಲಿಂದು ಮೃತದೇಹದ ಅಂತ್ಯಸಂಸ್ಕಾರ ನಡೆಯಲಿದೆ.
ಉದ್ಯಮಿ ರಾಹುಲ್ ಬಜಾಜ್ ಪಾರ್ಥಿವ ಶರೀರದ ಅಂತಿಮ ದರ್ಶನ; ಸಂಜೆ ವೇಳೆಗೆ ಅಂತ್ಯಸಂಸ್ಕಾರ - ಹೆಸರಾಂತ ಉದ್ಯಮಿ ರಾಹುಲ್ ಬಜಾಜ್
ಕಳೆದ 5 ದಶಕಗಳಲ್ಲಿ ಬಜಾಜ್ ಸಮೂಹವನ್ನು ಪ್ರವರ್ಧಮಾನಕ್ಕೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದ ದೇಶದ ಹೆಸರಾಂತ ಉದ್ಯಮಿ ರಾಹುಲ್ ಬಜಾಜ್ ನಿನ್ನೆ ವಿಧಿವಶರಾಗಿದ್ದು, ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಲಿದೆ.
ರಾಹುಲ್ ಬಜಾಜ್ ಪಾರ್ಥಿವ ಶರೀರ ನಿವಾಸದತ್ತ.. ಸಂಜೆ ವೇಳೆಗೆ ಅಂತ್ಯಸಂಸ್ಕಾರ
ಕಳೆದ 5 ದಶಕಗಳಲ್ಲಿ ಬಜಾಜ್ ಸಮೂಹವನ್ನು ಮುನ್ನಡೆಸುವಲ್ಲಿ ರಾಹುಲ್ ಬಜಾಜ್ ಪ್ರಮುಖ ಪಾತ್ರವಹಿಸಿದ್ದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಅರ್ಥಶಾಸ್ತ್ರ ಮತ್ತು ಕಾನೂನಿನಲ್ಲಿ ಪದವಿ, ಹುವಾರ್ಡ್ ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದಿದ್ದ ಬಜಾಜ್, 2001ರಲ್ಲಿ ಭಾರತ ಸರ್ಕಾರದ ಪದ್ಮಭೂಷಣ ಪುರಸ್ಕಾರಕ್ಕೂ ಪಾತ್ರರಾಗಿದ್ದರು.
ಇದನ್ನೂ ಓದಿ:ಹಿಜಾಬ್ ಬಗ್ಗೆ ಕುರಾನ್‌ನಲ್ಲಿ ಉಲ್ಲೇಖವಿದ್ದರೂ ಇಸ್ಲಾಂಗಿದು ಅನಿವಾರ್ಯವಲ್ಲ: ಕೇರಳ ರಾಜ್ಯಪಾಲ
Last Updated : Feb 13, 2022, 12:07 PM IST