ಕರ್ನಾಟಕ

karnataka

ETV Bharat / bharat

ಮುಂಬೈ - ಪುಣೆ ಮಾರ್ಗವಾಗಿ ಸಂಚರಿಸದ ವಂದೇ ಭಾರತ್​ ರೈಲು - Etv Bharat Kannada

ಮುಂಬೈ ಮತ್ತು ಪೂಣೆ ಮಾರ್ಗದಲ್ಲಿ ಘಾಟ್​ಗಳಿದ್ದು ಆ ಮಾರ್ಗವಾಗಿ ಒಂದೇ ಭಾರತ್​ ರೈಲು ಸಂಚಾರ ಮಾಡಲು ಕಷ್ಟ ಎಂದು ರೈಲ್ವೇ ಇಲಾಖೆ ತಿಳಿಸಿದೆ.

vande-bharat
ವಂದೇ ಭಾರತ್​

By

Published : Jan 20, 2023, 11:01 PM IST

ಮುಂಬೈ:ಒಂದೇ ಭಾರತ್​ ಎಕ್ಸ್​​​ಪ್ರಸ್​ ರೈಲು ಭಾರತದ ವೇಗದ ರೈಲಾಗಿದ್ದು, 2019ರಲ್ಲಿ ಮೊದಲ ಬಾರಿಗೆ ಈ ಒಂದೇ ಭಾರತ್​ ರೈಲು ದೇಶದಲ್ಲಿ ಸಂಚಾರ ಆರಂಭಿಸಿತು. ಈ ರೈಲಿನಲ್ಲಿ ಪ್ರಯಾಣಿಸುವುದರಿಂದ ಸಮಯದ ಉಳಿತಾಯವಾಗಲಿದ್ದು, ಈಗಾಗಲೇ ಈ ರೈಲಿಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿವೆ. ಆದರೇ ಈ ವಂದೇ ಭಾರತ್​ ರೈಲು ಮುಂಬೈ ಮತ್ತು ಪೂಣೆ ಮ ಆರ್ಗವಾಗಿ ​ ಚಲಿಸುವುದಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ.

ಹೌದು ಮುಂಬೈನಿಂದ ಫಿರೋಜ್‌ಪುರ ಮತ್ತು ಮುಂಬೈನಿಂದ ಪುಣೆಗೆ ಎರಡನೇ ಹಂತದಲ್ಲಿ ವಂದೇ ಭಾರತ್ ರೈಲನ್ನು ಓಡಿಸಲು ರೈಲ್ವೆ ಸಚಿವಾಲಯ ನಿರ್ಧರಿಸಿತ್ತು. ಅಲ್ಲದೇ ಇದರಿಂದ ಪ್ರಯಾಣಿಕರಿಗೆ ಸುಮಾರು ಎರಡೂವರೆ ಗಂಟೆಗಳ ಪ್ರಯಾಣದ ಸಮಯವೂ ಉಳಿತಾಯವಾಗುತಿತ್ತು. ಆದರೆ ಮುಂಬೈ ಪುಣೆ ಮಾರ್ಗದಲ್ಲಿ ಲೋನಾವಾಲಾ ಮತ್ತು ಖಂಡಾಲಾದಂತಹ ದೊಡ್ಡ ಘಾಟ್‌ಗಳಿದ್ದು, ಈ ಮಾರ್ಗವಾಗಿ ಚಲಿಸುವ ರೈಲುಗಳಿಗೆ ಹೆಚ್ಚುವರಿ ಎಂಜಿನ್​ಗಳನ್ನು ಅಳವಡಿಸಬೇಕಾಗುತ್ತದೆ.

ಎರಡು ಇಂಜಿನ್‌ಗಳನ್ನು ಹೊಂದಿರುವ ಮೇಲ್ ಎಕ್ಸ್‌ಪ್ರೆಸ್‌ನಂತಹ ರೈಲುಗಳು ಮಾತ್ರ ಈ ಎರಡೂ ಘಾಟ್‌ಗಳನ್ನು ದಾಟುಲು ಸುಲಭವಾಗುತ್ತದೆ. ಆದರೆ, ವಂದೇ ಭಾರತ್ ಎಕ್ಸ್‌ಪ್ರೆಸ್ ಇಎಂಯು (ಎಲೆಕ್ಟ್ರಾನಿಕ್​ ಮಲ್ಟಿಪಲ್​ ಯೂನಿಟ್​) ಅಡಿಯಲ್ಲಿ ಬರುತ್ತದೆ. ಹಾಗಾಗಿ ವಂದೇ ಭಾರತ್​ ರೈಲು ಈ ಮಾರ್ಗವಾಗಿ ಓಡಿಸುವುದು ಕಷ್ಟಕರವಾಗಿದೆ. ಈ ಬಗ್ಗೆ ರೈಲ್ವೆ ಮಂಡಳಿ ಅಧ್ಯಯನ ನಡೆಸುತ್ತಿದ್ದು, ಇದಕ್ಕೆ ಪರಿಹಾರ ಕಂಡಕೊಳ್ಳುವ ನಿಟ್ಟಿನಲ್ಲಿ ಅಧ್ಯಯನ ಮಾಡಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಂತ್ರಿಕ ತೊಂದರೆಗಳು ನಿವಾರಿಸಲು ಒತ್ತಾಯ:ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿರುವುದರಿಂದ ಮುಂಬೈನಿಂದ ಪುಣೆ, ಮುಂಬೈನಿಂದ ಶಿರಡಿ, ಮುಂಬೈನಿಂದ ನಾಗ್ಪುರ ಮಾರ್ಗದಲ್ಲಿ ವಂದೇ ಭಾರತ್​ ಎಕ್ಸ್‌ಪ್ರೆಸ್ ಅನ್ನು ಪ್ರಾರಂಭಿಸಬೇಕು. ಅಲ್ಲದೇ ತಾಂತ್ರಿಕ ತೊಂದರೆಗಳನ್ನು ನಿವಾರಿಸಿ ರೈಲು ಸಂಚಾರಕ್ಕೆ ಅನುಮತಿ ನೀಡಬೇಕಾಗಿ ರೈಲ್ವೆ ಪ್ಯಾಸೆಂಜರ್ ಕೌನ್ಸಿಲ್ ಅಧ್ಯಕ್ಷ ಸುಭಾಷ್ ಗುಪ್ತಾ ಒತ್ತಾಯಿಸಿದ್ದಾರೆ.

ಇನ್ನು ವಂದೇ ಭಾರತ್​ ರೈಲು ಹೈ ಸ್ಪೀಡ್ ರೈಲು ಸೇವೆಯಾಗಿದೆ. ಈ ರೈಲುಗಳನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗಿದೆ. ಫೆಬ್ರವರಿ 15, 2019 ರಂದು, ಮೊದಲ ಬಾರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಟ್ರೈನ್​ ನವದೆಹಲಿ ಯಿಂದ ವಾರಣಾಸಿಗೆ ಓಡಿತು. ಈ ಮೂಲಕ ಭಾರತದಲ್ಲಿ ವಂದೇ ಭಾರತ್ ಯುಗ ಆರಂಭವಾಯಿತು.

ರೈಲಿನ ವಿಶೇಷತೆಗಳು: ಈ ರೈಲು ಗಂಟೆಗೆ 120 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ರೈಲಿನ ಎಲ್ಲಾ ಬೋಗಿಗಳು ಹವಾನಿಯಂತ್ರಿತವಾಗಿರುತ್ತವೆ. ಜಿಪಿಎಸ್ ಆಧಾರಿತ ಆಡಿಯೋ, ವಿಡಿಯೋ ವ್ಯವಸ್ಥೆ, ಸ್ವಯಂಚಾಲಿತ ಕಿಟಕಿ ಮತ್ತು ಬಾಗಿಲುಗಳು, ಅತ್ಯಾಧುನಿಕ ಸಿಸಿಟಿವಿ, ತುರ್ತು ಪುಶ್ ಬಟನ್, ಉತ್ತಮ ಶೌಚಾಲಯಗಳು, 180 ಡಿಗ್ರಿ ತಿರುಗುವ ಆಸನಗಳು ಇತ್ಯಾದಿ ಸೌಲಭ್ಯಗಳು ಈ ರೈಲಿನಲ್ಲಿ ಇರಲಿದೆ.

2023 ಅಂತ್ಯದ ವೇಳೆಗೆ 75 ರೈಲುಗಳು ಓಡಲಿವೆ: ಫೆಬ್ರವರಿ 15, 2019 ರಂದು, ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ನವದೆಹಲಿ ಮತ್ತು ವಾರಣಾಸಿ ನಡುವೆ ಓಡಿತು. ಪ್ರಸ್ತುತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ನವದೆಹಲಿ-ವಾರಣಾಸಿ, ನವದೆಹಲಿ-ಕತ್ರಾ, ಮುಂಬೈ ಸೆಂಟ್ರಲ್‌ನಿಂದ ಗಾಂಧಿನಗರ ಗುಜರಾತ್‌ನಿಂದ ಪಶ್ಚಿಮ ರೈಲ್ವೆ, ನಾಗಪುರದಿಂದ ಬಿಲಾಸ್‌ಪುರ ಆಗ್ನೇಯ ಕೇಂದ್ರ ರೈಲ್ವೆ ಇತ್ಯಾದಿಗಳಲ್ಲಿ ಚಲಿಸುತ್ತಿವೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಗರಿಷ್ಠ ವೇಗ ಗಂಟೆಗೆ 130 ಕಿಮೀ ಇರಲಿದೆ. ಇನ್ನು 2023 ರ ಮುಕ್ತಾಯದ ವೇಳೆಗೆ ಇನ್ನು 75 ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಇಲಾಖೆ ಯೋಚಿಸಿದೆ.

ಇದನ್ನೂ ಓದಿ:ಮೆಲ್ಬೋರ್ನ್‌ನಿಂದ ದೆಹಲಿಗೆ ಬರುತ್ತಿದ್ದ ವಿಮಾನ ಆಕಾಶದಲ್ಲಿ ಇದ್ದಾಗಲೇ ಇಂಧನ ಖಾಲಿ: ಮುಂದೇನಾಯ್ತು?

ABOUT THE AUTHOR

...view details