ವಿಜಯವಾಡ( ಆಂಧ್ರಪ್ರದೇಶ): ಕೃಷ್ಣ ಜಿಲ್ಲೆಯ ಕಾಂಕಿಪಾಡು, ವನಿನಗರದ ವೈಎಸ್ಆರ್ಸಿಪಿ ಕಚೇರಿಯಲ್ಲಿ ನಡೆಸಿದ ವ್ಯಾಕ್ಸಿನೇಷನ್ ಶಿಬಿರ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಪಕ್ಷದ ಕಚೇರಿಯಲ್ಲಿ ವ್ಯಾಕ್ಸಿನೇಷನ್ ಕ್ಯಾಂಪ್: ವಿವಾದ ಸೃಷ್ಟಿಸಿದ ವೈಎಸ್ಆರ್ಸಿಪಿ
ಆಂಧ್ರಪ್ರದೇಶದ ಆಡಳಿತ ಪಕ್ಷ ವೈಎಸ್ಆರ್ಸಿಪಿ ತನ್ನ ಕಚೇರಿಯಲ್ಲಿಯೇ ವ್ಯಾಕ್ಸಿನೇಷನ್ ಮಾಡುವ ಮೂಲಕ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ.
ವ್ಯಾಕ್ಸಿನೇಷನ್ ಕ್ಯಾಂಪ್ನ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು , ಘಟನೆ ಕುರಿತು ತನಿಖೆ ನಡೆಸಲು ಅಧಿಕಾರಿಗಳು ಆದೇಶಿಸಿದ್ದಾರೆ.
ಆಡಳಿತ ಪಕ್ಷದ ಮುಖಂಡರು ಮತ್ತು ಅವರ ಕುಟುಂಬ ಸದಸ್ಯರು ಶನಿವಾರ ಬೆಳಿಗ್ಗೆ ವಾಹನಗಳಲ್ಲಿ ಕಂಕಿಪಾಡ, ಪುಣಡಿಪಾಡು, ನೆಪ್ಪಳ್ಳಿ, ತೆನ್ನೆರು, ಉಪ್ಪಲೂರು, ಇಡಪುಗುಲ್ಲು, ಗೋದಾವರು, ಕುಂದೇರು ಮತ್ತು ಪ್ರೊಡೂತೂರ್ ಗ್ರಾಮಗಳಿಂದ ವೈಎಸ್ಆರ್ಸಿಪಿ ಕಚೇರಿಗೆ ಬಂದಿದ್ದರು. ಕೊರೊನಾ ಲಸಿಕೆ ನೀಡುವ ವಿಷಯವನ್ನು ರಹಸ್ಯವಾಗಿರಿಸಿದ್ದರಿಂದ ಅವರು ಏಕೆ ಬರುತ್ತಿದ್ದಾರೆಂದು ಇತರರಿಗೆ ತಿಳಿದಿರಲಿಲ್ಲ. ಪಕ್ಷದ ಅತ್ಯಂತ ಪ್ರಮುಖ ವ್ಯಕ್ತಿಗಳಿಗೆ ಮೊದಲು ವ್ಯಾಕ್ಸಿನ್ ನೀಡಲಾಯಿತು. ಕಿರಿಯ ನಾಯಕರು ಮತ್ತು ಕಾರ್ಯಕರ್ತರಿಗೆ ಕೊನೆಯಲ್ಲಿ ಲಸಿಕೆ ಹಾಕಲಾಯಿತು. ಇನ್ನು ಈ ಘಟನೆಯ ಬಗ್ಗೆ ಆದಾಯ ಇಲಾಖೆ ಮತ್ತು, ವೈದ್ಯಕೀಯ ಇಲಾಖಾ ಅಧಿಕಾರಿಗಳು ಪ್ರಶ್ನಿಸಿದಾಗ ಅವರು ಈ ವ್ಯಾಕ್ಸಿನೇಷನ್ ಕ್ಯಾಂಪ್ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಉತ್ತರಿಸಿದ್ದಾರೆ.