ಡೆಹರಾಡೂನ್(ಉತ್ತರಾಖಂಡ್): ಕಳೆದ 4 ದಿನಗಳಿಂದ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ. ಭೂಕುಸಿತದ ಅವಶೇಷಗಳು ಬದರೀನಾಥ ಮತ್ತು ಕೇದಾರನಾಥ ಹೆದ್ದಾರಿಗಳಲ್ಲೇ ಬಿದ್ದಿವೆ. ಉತ್ತರಾಖಂಡದ ಸಿರೋಬಗಡದಲ್ಲಿ ವಾಹನ ಸವಾರರು ಪರದಾಡುವಂತಾಗಿದೆ.
ಭೂಕುಸಿತದಿಂದಾಗಿ ಖಂಖ್ರಾ-ಖೇಡಾಖಾಲ್-ಖಿರ್ಸುವಿನ ಸಂಪರ್ಕ ರಸ್ತೆಯನ್ನು ಕೂಡ ನಿರ್ಬಂಧಿಸಲಾಗಿದೆ. ಭೂಕುಸಿತದ ಹಿನ್ನೆಲೆ ವಿವಿಧ ಸಂಪರ್ಕ ರಸ್ತೆಗಳು ಕಡಿತಗೊಂಡಿವೆ. ನಿರಂತರ ಮಳೆಯು ಉತ್ತರಾಖಂಡದ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹೆದ್ದಾರಿ ಮತ್ತು ಸಂಪರ್ಕ ರಸ್ತೆಯ ನಿರ್ಬಂಧ ಹಿನ್ನೆಲೆ, ರುದ್ರಪ್ರಯಾಗ್ ಮತ್ತು ಚಮೋಲಿ ಜಿಲ್ಲೆಗಳ ಜನರು ಅಗತ್ಯ ವಸ್ತುಗಳನ್ನು ಪಡೆಯಲೂ ಸಹ ಸಾಧ್ಯವಾಗುತ್ತಿಲ್ಲ.