ನವದೆಹಲಿ :ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸತತ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಹಿಡಿದು ಇತಿಹಾಸ ಬರೆದಿದೆ. ಈ ಚುನಾವಣೆಯಲ್ಲಿ ವಿವಿಧ ಪಕ್ಷಗಳ 10 ಅಭ್ಯರ್ಥಿಗಳು 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿ ಎದುರಾಳಿ ವಿರುದ್ಧ ಪಾರಮ್ಯ ಮೆರೆದಿದ್ದಾರೆ.
ಇದರಲ್ಲಿ ಬಿಜೆಪಿಯ ಸುನಿಲ್ಕುಮಾರ್ ಶರ್ಮಾ ಅವರು ರಾಜ್ಯದಲ್ಲಿಯೇ ಅತ್ಯಧಿಕ ಅಂದರೆ 2.14 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ. ಅಲ್ಲದೇ, ಸ್ವತಃ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇದೇ ಮೊದಲ ಬಾರಿಗೆ ವಿಧಾನಸಭೆಗೆ ಸ್ಪರ್ಧಿಸಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ. ಅಂತಹ 10 ಜನರ ಮಾಹಿತಿ ಇಲ್ಲಿದೆ.
1. ಬಿಜೆಪಿಯ ಸುನಿಲ್ಕುಮಾರ್ ಶರ್ಮಾ ಅವರು ಸಾಹಿಬಾಬಾದ್ ಕ್ಷೇತ್ರದಿಂದ ಸ್ಪರ್ಧಿಸಿ, ತಮ್ಮ ಎದುರಾಳಿ ಸಮಾಜವಾದಿ ಪಕ್ಷದ ಅಮರ್ಪಾಲ್ ಶರ್ಮಾ ಅವರನ್ನು 2.14 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದು ಉತ್ತರಪ್ರದೇಶದಲ್ಲಿ ಈವರೆಗಿನ ಭಾರೀ ಅಂತರದ ಗೆಲುವು ಎನ್ನಲಾಗಿದೆ.
2. ಬಿಜೆಪಿಯ ಪಂಕಜ್ ಸಿಂಗ್ ಅವರು ನೋಯ್ಡಾ ಕ್ಷೇತ್ರದಿಂದ ಕಣಕ್ಕಿಳಿದು 1.81 ಲಕ್ಷ ಮತಗಳ ಅಂತರದಿಂದ ಎಸ್ಪಿಯ ಸುನೀಲ್ ಚೌಧರಿ ಅವರನ್ನು ಸೋಲಿಸಿದ್ದಾರೆ.
3. ಮೀರತ್ ಕೇಂದ್ರ ಕ್ಷೇತ್ರದಲ್ಲಿ ಅಮಿತ್ ಅಗರ್ವಾಲ್ ಅವರು 1.18 ಲಕ್ಷ ಮತಗಳ ಅಂತರದಿಂದ ಬಿಎಸ್‌ಪಿಯ ಅಮಿತ್ ಶರ್ಮಾ ಅವರ ವಿರುದ್ಧ ಗೆದ್ದು ಬಿಜೆಪಿಗೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ.
4. ಬಿಜೆಪಿಯ ಪುರುಷೋತ್ತಮ್ ಖಂಡೇಲ್ವಾಲ್ ಅವರು ಬಿಎಸ್‌ಪಿಯ ಶಬ್ಬೀರ್ ಅಬ್ಬಾಸ್ ವಿರುದ್ಧ ಆಗ್ರಾ ಉತ್ತರದಲ್ಲಿ 1.12 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದಾರೆ.
5. ಮೆಹ್ರೋನಿ ಕ್ಷೇತ್ರದಲ್ಲಿ ಮನೋಹರ್ ಲಾಲ್ 1.1 ಲಕ್ಷ ಮತಗಳಿಂದ ಗೆದ್ದಿದ್ದಾರೆ.
6. ಮಥುರಾದಿಂದ ಶ್ರೀಕಾಂತ್ ಶರ್ಮಾ 1.08 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
7. ಬಿಎಸ್‌ಪಿ ಅಭ್ಯರ್ಥಿಯ ವಿರುದ್ಧ ಲಲಿತ್‌ಪುರ ಕ್ಷೇತ್ರದಲ್ಲಿ ಬಿಜೆಪಿಯ ರಾಮರತನ್ ಕುಶ್ವಾಹ 1.07 ಮತಗಳ ಅಂತರದಿಂದ ಜಯ ಪಡೆದಿದ್ದಾರೆ.