ನವದೆಹಲಿ:ಕೊರೊನಾ ವೈರಸ್ ವಿರುದ್ಧದ ಮಹಾಯುದ್ಧದಲ್ಲಿ ಭಾರತ ಐತಿಹಾಸಿಕ ದಾಖಲೆ ನಿರ್ಮಾಣ ಮಾಡಿದ್ದು, ಕಳೆದ 9 ತಿಂಗಳಲ್ಲಿ ಬರೋಬ್ಬರಿ 100 ಕೋಟಿ ಕೋವಿಡ್ ವ್ಯಾಕ್ಸಿನೇಷನ್ ಡೋಸ್ ನೀಡುವ ಮೂಲಕ ಹೊಸ ರೆಕಾರ್ಡ್ ನಿರ್ಮಾಣ ಮಾಡಿದೆ. ಇದಕ್ಕೆ ಈಗಾಗಲೇ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಭಾರತ ಸರ್ಕಾರದ ಈ ಐತಿಹಾಸಿಕ ಸಾಧನೆಗೆ ಇದೀಗ ಯುಎಸ್ ರಾಯಭಾರಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಟ್ವೀಟ್ ಮಾಡಿರುವ ಅಮೆರಿಕ ರಾಯಭಾರಿ (US Embassy India) 1 ಬಿಲಿಯನ್ ಕೋವಿಡ್ ವ್ಯಾಕ್ಸಿನೇಷನ್ ಪೂರೈಕೆ ಮಾಡಿದಕ್ಕಾಗಿ ಅಭಿನಂದನೆಗಳು. ಜಾಗತಿಕ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಭಾರತ ಹೊಸದೊಂದು ಮೈಲಿಗಲ್ಲು ನಿರ್ಮಾಣ ಮಾಡಿದೆ ಎಂದಿದೆ.
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಇಡೀ ಪ್ರಪಂಚವೇ ಭಾಗಿಯಾಗಿದ್ದು, ಅನೇಕ ದೇಶಗಳು ಮಹಾಮಾರಿ ಹೊಡೆದೊಡಿಸಲು ಇನ್ನಿಲ್ಲದ ಕ್ರಮ ಕೈಗೊಂಡಿವೆ. ಮಹಾಮಾರಿ ವಿರುದ್ಧ ರಾಮಬಾಣವಾಗಿರುವ ವ್ಯಾಕ್ಸಿನೇಷನ್ ನೀಡಲು ಎಲ್ಲ ರಾಷ್ಟ್ರಗಳು ಮೊದಲ ಆದ್ಯತೆ ನೀಡಿದ್ದು, ಈಗಾಗಲೇ ಚೀನಾ 1 ಬಿಲಿಯನ್ ವ್ಯಾಕ್ಸಿನ್ ನೀಡಿದ್ದು, ಇದೀಗ ಭಾರತ ಕೂಡ ಈ ಸಾಧನೆ ಮಾಡಿದೆ.