ನವದೆಹಲಿ: 2019ರ ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯ ಆಧಾರದ ಮೇಲೆ ಮೀಸಲು ಪಟ್ಟಿಯಿಂದ ವಿವಿಧ ನಾಗರಿಕ ಸೇವೆಗಳಿಗೆ 89 ಅಭ್ಯರ್ಥಿಗಳನ್ನು ಶಿಫಾರಸು ಮಾಡಲಾಗಿದೆ. ಇಂದು ಯುಪಿಎಸ್ಸಿಯಿಂದ ಅಧಿಕೃತ ಪ್ರಕಟಣೆ ಬಿಡುಗಡೆಯಾಗಿದೆ.
ನಾಗರಿಕ ಸೇವೆಗಳಿಗೆ ಹೆಚ್ಚುವರಿ 89 ಅಭ್ಯರ್ಥಿಗಳು UPSCಯಿಂದ ಶಿಫಾರಸು!
ಒಟ್ಟು 927 ಹುದ್ದೆಗಳ ಪೈಕಿ ಐಎಎಸ್, ಐಎಫ್ಎಸ್, ಐಪಿಎಸ್ ಮತ್ತು ಇತರ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ಸೇವೆಗಳಿಗೆ 829 ಅಭ್ಯರ್ಥಿಗಳ ಹೆಸರು ಆ ವೇಳೆ ಶಿಫಾರಸು ಮಾಡಲಾಗಿತ್ತು.
UPSC
2019ರ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶ 2020ರ ಆಗಸ್ಟ್ 4ರಂದು ಪ್ರಕಟಗೊಂಡಿತ್ತು. ಒಟ್ಟು 927 ಹುದ್ದೆಗಳ ಪೈಕಿ ಐಎಎಸ್, ಐಎಫ್ಎಸ್, ಐಪಿಎಸ್ ಮತ್ತು ಇತರ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ಸೇವೆಗಳಿಗೆ 829 ಅಭ್ಯರ್ಥಿಗಳ ಹೆಸರು ಆ ವೇಳೆ ಶಿಫಾರಸು ಮಾಡಲಾಗಿತ್ತು.
ಕೇಂದ್ರ ಸಾರ್ಜನಿಕರ ಸೇವಾ ಆಯೋಗ(ಯುಪಿಎಸ್ಸಿ) ನಿಯಮಗಳಿಗೆ ಅನುಸಾರವಾಗಿ, ಆಯಾ ವಿಭಾಗಗಳ ಅಡಿಯಲ್ಲಿ ಕೊನೆಗೆ ಶಿಫಾರಸು ಮಾಡಿದ ಅಭ್ಯರ್ಥಿಗಿಂತ ಕೆಳಗಿರುವ ಅಭ್ಯರ್ಥಿಗಳು ಇದರಲ್ಲಿದ್ದಾರೆ. ಇದರಲ್ಲಿ 73 ಜನರಲ್, 14 ಒಬಿಸಿ, 1 ಈಡಬ್ಲೂಎಸ್ ಹಾಗೂ 1 ಎಸ್ಸಿ ಅಭ್ಯರ್ಥಿ ಸೇರಿಕೊಂಡಿದ್ದಾರೆ.