ಕರ್ನಾಟಕ

karnataka

ETV Bharat / bharat

UPSC ನೇಮಕಾತಿ: ಜ್ಯೂ.ಎಂಜಿನಿಯರ್​ ಸೇರಿ 146 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ - ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ

ಕೇಂದ್ರ ಲೋಕ ಸೇವಾ ಆಯೋಗವು ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಅನೇಕ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ.

upsc-invited-application-for-146-post-in-various-department
upsc-invited-application-for-146-post-in-various-department

By

Published : Apr 7, 2023, 3:36 PM IST

ಕೇಂದ್ರ ಲೋಕ ಸೇವಾ ಆಯೋಗ (UPSC) ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ರಿಸರ್ಚ್​ ಅಧಿಕಾರಿ, ಸಹಾಯಕ ನಿರ್ದೇಶಕರು, ಪಬ್ಲಿಕ್​ ಪ್ರಾಸಿಕ್ಯೂಟರ್​, ಜ್ಯೂನಿಯರ್​ ಎಂಜಿನಿಯರ್​ (ಸಿವಿಲ್​) ಮತ್ತು ಇತರೆ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 146 ಹುದ್ದೆಗಳಿವೆ. ಕೇಂದ್ರ ಸರ್ಕಾರಿ ನೌಕರಿಯಲ್ಲಿ ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ: ಕೇಂದ್ರ ಸರ್ಕಾರದ ಆಯುಷ್​​ (ನ್ಯಾಚುರೋಪತಿ)ಯಲ್ಲಿ ರಿಸರ್ಚ್​​ ಆಫೀಸರ್​ (ಆರ್​ಒ), ಆಯುಷ್​ (ಯೋಗ)ದಲ್ಲಿ ಆರ್​ಒ, ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಸಹಾಯಕ ನಿರ್ದೇಶಕರು, ನೌಕರರ ರಾಜ್ಯ ವಿಮಾ ನಿಗಮದಲ್ಲಿ ಸಿವಿಲ್​ ಎಂಜಿಯರ್​​, ನೌಕರರ ರಾಜ್ಯ ವಿಮಾ ನಿಗಮದಲ್ಲಿ ಎಲೆಕ್ಟ್ರಿಕಲ್​ ಇಂಜಿನಿಯರ್​ ಸೇರಿದಂತೆ ವಿವಿಧ ಇಲಾಖೆ ಹುದ್ದೆಗಳು.

ಅಧಿಸೂಚನೆ
ಹುದ್ದೆ ಹುದ್ದೆ ಸಂಖ್ಯೆ
ಕೇಂದ್ರ ಸರ್ಕಾರದ ಆಯುಷ್​​ (ನ್ಯಾಚುರೋಪತಿ) ರಿಸರ್ಚ್​​ ಆಫೀಸರ್​ (ಆರ್​ಒ) 1
ಕೇಂದ್ರ ಸರ್ಕಾರದ ಆಯುಷ್ ​(ಯೋಗ) ರಿಸರ್ಚ್​ ಆಫೀಸರ್​ 1
ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಸಹಾಯಕ ನಿರ್ದೇಶಕರು 16
ಕೇಂದ್ರ ಸರ್ಕಾರದ ಆಯುಷ್ ​(ಯೋಗ) ರಿಸರ್ಚ್​ ಆಫೀಸರ್​ 1
ಕೇಂದ್ರೀಯ ತನಿಖಾ ಸಂಸ್ಥೆಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ 48
ನೌಕರರ ರಾಜ್ಯ ವಿಮಾ ನಿಗಮದಲ್ಲಿ ಸಿವಿಲ್​ ಎಂಜಿನಿಯರ್ 58
ನೌಕರರ ರಾಜ್ಯ ವಿಮಾ ನಿಗಮದಲ್ಲಿ ಎಲೆಕ್ಟ್ರಿಕಲ್​ ಎಂಜಿನಿಯರ್ 20
ಮುಖ್ಯ ವಾಸ್ತುಶಿಲ್ಪಿ ಕಚೇರಿಯಲ್ಲಿ ಸಹಾಯಕ ಆರ್ಕಿಟೆಕ್ಟ್​​ 1

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಸಾರವಾಗಿ ಪದವಿ, ಸ್ನಾತಕೋತ್ತರ ಪದವಿ, ಎಲ್​ಎಲ್​ಬಿ, ಸಿಎ, ಡಿಪ್ಲೊಮಾ, ಬಿಇ ಪದವಿ.

ವಯೋಮಿತಿ: ಗರಿಷ್ಟ 40 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ.ಪಂ ಅಭ್ಯರ್ಥಿಗಳು 5 ವರ್ಷ, ವಿಕಲಚೇತನ ಅಭ್ಯರ್ಥಿಗಳಿಗೆ 15 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಸಲ್ಲಿಕೆ ವಿಧಾನ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೂ ಮುಂಚೆ ಅಧಿಕೃತ ಅಧಿಸೂಚನೆಯನ್ನು ಸರಿಯಾಗಿ ಪರಿಶೀಲಿಸಿ ಮುಂದುವರೆಯಬೇಕು. ಸಾಮಾನ್ಯ ಅಭ್ಯರ್ಥಿಗಳು 25 ರೂ ಶುಲ್ಕ ಮತ್ತು ಪ.ಜಾ, ಪ.ಪಂ ಮತ್ತು ವಿಕಲಚೇತನ ಮತ್ತು ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸಬೇಕಿಲ್ಲ.

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ. ಏಪ್ರಿಲ್​ 8ರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್​ 27.

ವಿವರವಾದ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಸೇರಿದಂತೆ ಇನ್ನಿತರೆ ವಿಚಾರಗಳನ್ನು ಪಡೆಯಲು ಅಧಿಕೃತ ಜಾಲತಾಣ upsc.gov.inಭೇಟಿ ಕೊಡಿ.

ಇದನ್ನೂ ಓದಿ: ಸ್ಟಾಫ್​​ ಸೆಲೆಕ್ಷನ್​ ಕಮಿಷನ್​​​ ಬೃಹತ್​​ ನೇಮಕಾತಿ: 7500 ಗ್ರೂಪ್​ ಬಿ ಮತ್ತು ಸಿ ಹುದ್ದೆಗೆ ಅರ್ಜಿ ಆಹ್ವಾನ

ABOUT THE AUTHOR

...view details