ನವದೆಹಲಿ :ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಪಕ್ಷದ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ನೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿಂದು ಮನೆ ಮನೆಗೆ ಭೇಟಿ ನೀಡಿ ಮತಯಾಚನೆ ಮಾಡಲಿದ್ದಾರೆ. ನೋಯಿಡಾದಲ್ಲಿ ಪಂಖುರಿ ಪಾಠಕ್ ಅವರಿಗೆ ಕೈಪಕ್ಷ ಟಿಕೆಟ್ ನೀಡಿದೆ.
ಯುಪಿಯಲ್ಲಿ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಪ್ರಿಯಾಂಕಾ ಅವರಿಗೆ ಇದು ಮೊದಲ ಮನೆ-ಮನೆ ಪ್ರಚಾರ ಕಾರ್ಯಕ್ರವಾಗಿದೆ. ಈಗಾಗಲೇ ಇವರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಹಾಗೂ ಯೂಟ್ಯೂಬ್ ಮೂಲಕ ಮತದಾರರೊಂದಿಗೆ ಸಂವಾದಗಳನ್ನು ನಡೆಸುತ್ತಿದ್ದಾರೆ. ನಾಳೆ ದಾದ್ರಿ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.
ನೋಯಿಡಾದಲ್ಲಿಂದು ಮನೆ-ಮನೆ ಮತಯಾಚನೆಗೂ ಮುನ್ನ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮೊಮ್ಮಗಳು ವಿವಿಧ ಜನರೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ಪಾಠಕ್ ಪರ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮಹಿಳಾ ಸಂಘಟನೆಗಳೊಂದಿಗೂ ಸಂವಾದ ಮಾಡಲಿದ್ದಾರೆ.