ಕರ್ನಾಟಕ

karnataka

ETV Bharat / bharat

ಗುತ್ತಿಗೆದಾರನಾಗಿ ರೈಲ್ವೇ ಸಲಕರಣೆ ಕದ್ದ ವ್ಯಕ್ತಿ ಈಗ ಸಚಿವ; ನ್ಯಾಯಾಲಯದಿಂದ ಆರೋಪ ಸಾಬೀತು! - ರೈಲ್ವೇ ಇಲಾಖೆಯ ಗುತ್ತಿಗೆದಾರ

30 ವರ್ಷಗಳ ಹಿಂದೆ ರೈಲ್ವೇ ಇಲಾಖೆಯ ಗುತ್ತಿಗೆದಾರನಾಗಿದ್ದ ಸಂದರ್ಭದಲ್ಲಿ ರಾಕೇಶ್​ ಸಚನ್ ಅವರು,​ ರೈಲು ಹಳಿಗಳ ನಡುವೆ ಭಾರ ಸಮತೋಲನಗೊಳಿಸುವ ಸಾಧನಗಳನ್ನು (ಬ್ಯಾಲೆಸ್ಟ್​) ಕದ್ದಿರುವ ಪ್ರಕರಣ ಎದುರಿಸುತ್ತಿದ್ದಾರೆ.

UP Minister Rakesh Sachan
ಯುಪಿ ಸಚಿವ ರಾಕೇಶ್ ಸಚನ್

By

Published : Aug 7, 2022, 1:40 PM IST

ಲಕ್ನೋ(ಉತ್ತರ ಪ್ರದೇಶ): ಮೂರು ದಶಕಗಳಷ್ಟು ಹಳೆಯದಾದ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಆರೋಪಿ ಉತ್ತರ ಪ್ರದೇಶದ ಸಚಿವ ರಾಕೇಶ್ ಸಚನ್ ಅವರನ್ನು ಶನಿವಾರ ಕಾನ್ಪುರದ ಜಿಲ್ಲಾ ನ್ಯಾಯಾಲಯ ತಪ್ಪಿತಸ್ಥ ಎಂದು ಘೋಷಿಸಿತು. ರೈಲು ಹಳಿಗಳ ನಡುವೆ ಭಾರ ಸಮತೋಲನಗೊಳಿಸುವ ಸಾಧನಗಳನ್ನು​ ಕಳ್ಳತನ ಪ್ರಕರಣದ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್‌ ಈ ತೀರ್ಪು ನೀಡಿದೆ.

30 ವರ್ಷಗಳ ಹಿಂದೆ ರೈಲ್ವೇ ಇಲಾಖೆಯ ಗುತ್ತಿಗೆದಾರರಾಗಿದ್ದ ಸಂದರ್ಭದಲ್ಲಿ ರಾಕೇಶ್​ ಸಚನ್​ ಹಳಿಗಳ ನಡುವಿನ ಸಾಧನಗಳನ್ನು ಕದ್ದಿದ್ದರು. ನಂತರ 1991ರಲ್ಲಿ ಪೊಲೀಸರು ಆರೋಪಿಯಿಂದ ಕಳವು ಮಾಡಲಾದ ಬ್ಯಾಲೆಸ್ಟ್​ ವಶಪಡಿಸಿಕೊಂಡಿದ್ದರು. ರಾಕೇಶ್ ಸಚನ್ ಪ್ರಸ್ತುತ ಯೋಗಿ ಆದಿತ್ಯನಾಥ್​ ಸರ್ಕಾರದಲ್ಲಿ ಕಿರು, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವರಾಗಿದ್ದಾರೆ.

ನ್ಯಾಯಾಲಯಕ್ಕೆ ಹಾಜರಾಗಿದ್ದ ಸಚಿವ, ಕೋರ್ಟ್​ನಲ್ಲಿ ತೀರ್ಪು ಪ್ರಕಟವಾಗುವ ಕೆಲವು ನಿಮಿಷಗಳ ಮೊದಲು ಜಾಮೀನು ಬಾಂಡ್​ಗಳನ್ನು ಒದಗಿಸದೇ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ. ಆಮೇಲೆ ಪತ್ತೆಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದೆ.

ಪ್ರಭಾವಿ ಕುರ್ಮಿ ​ಸಮುದಾಯದ ​ನಾಯಕ ಸಚನ್ ಯುಪಿಯಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗೆ ಕೆಲವು ದಿನಗಳ ಮೊದಲು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ್ದರು. ಅವರನ್ನು ಬಿಜೆಪಿಯು ಕಾನ್ಪುರ್ ದೇಹತ್ ಜಿಲ್ಲೆಯ ಭೋಗ್ನಿಪುರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಿತ್ತು. ಇದೀಗ ರಾಜ್ಯ ಬಿಜೆಪಿ ನಾಯಕರು ನ್ಯಾಯಾಲಯದ ತೀರ್ಪಿನ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳುವ ಮೂಲಕ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

"ಬಿಜೆಪಿ ಸರ್ಕಾರದ ಕ್ಯಾಬಿನೆಟ್ ಸಚಿವ ರಾಕೇಶ್ ಸಚನ್ ಅವರು ಬ್ಯಾಲೆಸ್ಟ್ ಕಳ್ಳತನದಲ್ಲಿ ದೋಷಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ತೀರ್ಪು ಹೊರಬೀಳುವ ಮುನ್ನವೇ ಪಲಾಯನ ಮಾಡಿರುವ ಸಚಿವರ ಮನೆಯನ್ನು ಬಿಜೆಪಿ ಯಾವಾಗ ಬುಲ್ಡೋಜರ್ ಮೂಲಕ ಕೆಡವುತ್ತಾರೆ ಎಂದು ಯೋಗಿಜಿ ಈಗ ಹೇಳಬೇಕು" ಎಂದು ಸಮಾಜವಾದಿ ಪಕ್ಷ ಟ್ವೀಟ್​ ಮಾಡಿದೆ.

ಕಾನ್ಪುರ್ ದೇಹತ್ ಜಿಲ್ಲೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸಚನ್, ರಹಸ್ಯವಾಗಿ ನ್ಯಾಯಾಲಯ ತೊರೆದ ಆರೋಪ ನಿರಾಕರಿಸಿದ್ದು, ತಾನು ಯಾವುದೋ ಕೆಲಸಕ್ಕಾಗಿ ನ್ಯಾಯಾಲಯಕ್ಕೆ ಹೋಗಿದ್ದೆ. ತಮ್ಮ ಪ್ರಕರಣವನ್ನು ಅಂತಿಮ ತೀರ್ಪಿಗೆ ಪಟ್ಟಿ ಮಾಡಲಾಗಿಲ್ಲ ಎಂದು ಹೇಳಿ ಜಾರಿಕೊಂಡಿದ್ದಾರೆ.

ಇದನ್ನೂ ಓದಿ:ಮಾಜಿ ಸಿಜೆಐ ನೇಮಕ ಪ್ರಶ್ನಿಸಿದ್ದ ಪ್ರಕರಣ: ಭೂಕಂದಾಯ ರೂಪದಲ್ಲಿ ದಂಡ ವಸೂಲಿಗೆ ನಿರ್ದೇಶನ

ABOUT THE AUTHOR

...view details