ಕನೌಜ್(ಉತ್ತರ ಪ್ರದೇಶ):ಕನೌಜ್ ಜಿಲ್ಲೆಯ ಸದರ್ ಪ್ರದೇಶದಲ್ಲಿ ತನ್ನ ಅಧಿಕೃತ ವಸತಿ ಕ್ವಾರ್ಟರ್ಸ್‌ನಲ್ಲಿ 17 ವರ್ಷದ ಅತ್ಯಾಚಾರ ಸಂತ್ರಸ್ತೆಯ ತಾಯಿಯ ಮೇಲೆ ರೇಪ್ ಮಾಡಿದ್ದ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ. ಆರೋಪಿ ಇನ್ಸ್ಪೆಕ್ಟರ್ ಅನುಪ್ ಮೌರ್ಯ ಅವರನ್ನು ಅಮಾನತು ಮಾಡಲಾಗಿದೆ.
ಮಹಿಳೆ ದೂರಿನಲ್ಲಿ, ಮೌರ್ಯ ತನ್ನ ಮಗಳ ಅತ್ಯಾಚಾರ ಪ್ರಕರಣ ನಿರ್ವಹಿಸುತ್ತಿದ್ದು, ಆಗಸ್ಟ್ 28ರಂದು ತನ್ನ ಅಧಿಕೃತ ವಸತಿ ಕ್ವಾರ್ಟರ್ಸ್ ಬಳಿಯ ಪೆಟ್ರೋಲ್ ಪಂಪ್‌ನಲ್ಲಿ ತನ್ನನ್ನು ಭೇಟಿಯಾಗಲು ಹೇಳಿದ್ದನು. ಅಲ್ಲಿಂದ ತನ್ನ ಕ್ವಾರ್ಟರ್ಸ್‌ಗೆ ಹಿಂಬಾಲಿಸುವಂತೆ ಹೇಳಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಸಿದ್ದಾರೆ. ಆದರೆ, ಬಂಧಿತ ಅಧಿಕಾರಿ ತಾನು ಕೆಲವು ದಾಖಲೆಗಳ ಮೇಲೆ ಸಹಿ ತೆಗೆದುಕೊಳ್ಳಲು ದೂರುದಾರರನ್ನು ತನ್ನ ಕೋಣೆಗೆ ಬರ ಹೇಳಿದ್ದು ಎಂದು ಹೇಳಿದ್ದಾನೆ.