ಕರ್ನಾಟಕ

karnataka

By

Published : Jun 21, 2021, 9:37 PM IST

ETV Bharat / bharat

ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆ ತಂತ್ರ: 32 ಅಡಿ ಎತ್ತರದಲ್ಲಿ ಮೆಣಸಿನಕಾಯಿ ಬೆಳೆದು ದಾಖಲೆ

ಪಶ್ಚಿಮ ಬಂಗಾಳದ ಜಲ್​​ಪೈಗುರಿಯ ನಿವಾಸಿ ಸುಮಂತ ಮಿಶ್ರಾ ಎಂಬುವವರು ತಮ್ಮ ಮನೆಯ ಟೆರೇಸ್ ಮೇಲೆ 32 ಅಡಿ ಎತ್ತರದಲ್ಲಿ ಕೃಷಿ ಬೆಳೆಗಳನ್ನು ಬೆಳೆಯುವ ಮೂಲಕ ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆಗಳನ್ನು ಬೆಳೆಯುವ ತಂತ್ರವನ್ನು ಅನುಸರಿಸಿ ಸಾಕಷ್ಟು ಪ್ರಶಸ್ತಿಗಳನ್ನು ಪಡೆದಿದ್ದಾರೆ.

sumatha
sumatha

ಜಲ್​​ಪೈಗುರಿ(ಪಶ್ಚಿಮ ಬಂಗಾಳ): ಕೃಷಿಯಲ್ಲಿ ಅತ್ಯುತ್ಸಾಹ ಹೊಂದಿರುವ ಸುಮಂತ ಮಿಶ್ರಾ ಎಂಬುವವರು ಮೆಣಸಿನಕಾಯಿ ಗಿಡಗಳನ್ನು 32 ಅಡಿ ಎತ್ತರದಲ್ಲಿ ಮತ್ತು ಸೋರೆಕಾಯಿಗಳನ್ನು 11 ಅಡಿ ಎತ್ತರದಲ್ಲಿ ಮತ್ತು ಕಬ್ಬನ್ನು 44 ಅಡಿಗಳಷ್ಟು ಎತ್ತರದಲ್ಲಿ ಬೆಳೆದು ಅಚ್ಚರಿ ಮೂಡಿಸಿದ್ದಾರೆ.

ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆಗಳನ್ನು ಬೆಳೆಯುವ ತಂತ್ರವನ್ನು ಅನುಸರಿಸುತ್ತಿರುವ ಮಿಶ್ರಾ ತಮ್ಮ ಮನೆಯ ಟೆರೇಸ್ ಮತ್ತು ಕಿಚನ್ ಗಾರ್ಡನ್‌ನಲ್ಲಿ ಈ ಎಲ್ಲವನ್ನು ಬೆಳೆದಿದ್ದಾರೆ.

ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆಗಳನ್ನು ಬೆಳೆಯುವ ತಂತ್ರವನ್ನು ಅನುಸರಿಸುತ್ತಿರುವ ಮಿಶ್ರಾ

ಪಶ್ಚಿಮ ಬಂಗಾಳದ ಜಲ್​​ಪೈಗುರಿಯಲ್ಲಿರುವ ಅವರ ಮನೆ ನೋಡಲು ಒಂದು ಕೃಷಿ ವಸ್ತು ಸಂಗ್ರಹಾಲಯದಂತಿದೆ. ಪ್ರಸ್ತುತ ಮಿಶ್ರಾ ರಾಜ್ಯ ಕೃಷಿ ಇಲಾಖೆಯ ಉದ್ಯೋಗಿಯಾಗಿದ್ದಾರೆ . ಈಗಾಗಲೇ ತಾವು ಎತ್ತರದಲ್ಲಿ ಬೆಳೆದಿರುವ ಮೆಣಸಿನಕಾಯಿ ಮತ್ತು ಹತ್ತಿ ಗಿಡಗಳಿಗೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲೆ ಬರೆದಿದ್ದಾರೆ. ಕೇಂದ್ರ ಸರ್ಕಾರದಿಂದ ತಮ್ಮ ಮೆಣಸಿನಕಾಯಿ ಮತ್ತು ಹತ್ತಿ ಗಿಡಗಳಿಗೆ ನೋಂದಣಿ ಸಹ ಪಡೆದುಕೊಂಡಿದ್ದಾರೆ.

ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆಗಳನ್ನು ಬೆಳೆಯುವ ತಂತ್ರವನ್ನು ಅನುಸರಿಸುತ್ತಿರುವ ಮಿಶ್ರಾ

ಅವರು ತಮ್ಮ 19 ಕೃಷಿ ಉತ್ಪನ್ನಗಳಿಗೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ಅವರ ಹೊಸ ಸಂಶೋಧನೆಗಾಗಿ ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆಯುತ್ತಿದ್ದಾರೆ. ಆದರೂ ಯಾವುದೇ ರಾಷ್ಟ್ರೀಯ ಕೃಷಿ ಸಂಶೋಧನಾ ಕೇಂದ್ರಗಳಿಗೆ ಸಲಹೆಗಾರರಾಗಲು ಅವರಿಗೆ ಕರೆ ಬಂದಿಲ್ಲವಂತೆ.

ಸೀಮಿತ ಪ್ರದೇಶದಲ್ಲಿ ಹೆಚ್ಚು ಕೃಷಿ ಉತ್ಪನ್ನಗಳನ್ನು ಉತ್ಪಾದಿಸುವುದು ಅವರ ಏಕೈಕ ಗುರಿಯಾಗಿದೆ, ಏಕೆಂದರೆ ಇದು ಕೃಷಿಗೆ ಲಾಭ ತಂದುಕೊಡುವುದರ ಜೊತೆಗೆ ಆಹಾರ ಬಿಕ್ಕಟ್ಟನ್ನು ಪರಿಹರಿಸುತ್ತದೆ. ಹೀಗಾಗಿಯೇ ಅವರು ತಮ್ಮ ಮನೆಯ ಪಕ್ಕದ ಭೂಮಿಯನ್ನು ಮತ್ತು ಮನೆಯ ಟೆರೆಸ್​ ಅನ್ನು ಕೃಷಿ ಮಾಡಲು ಬಳಸಿಕೊಳ್ಳುತ್ತಿದ್ದಾರೆ.

ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆಗಳನ್ನು ಬೆಳೆಯುವ ತಂತ್ರವನ್ನು ಅನುಸರಿಸುತ್ತಿರುವ ಮಿಶ್ರಾ

ಈ ಬಗ್ಗೆ ಪ್ರತಿಕ್ರಯಿಸಿ, “ನನಗೆ ಕೇಂದ್ರ ಸರ್ಕಾರ ಮತ್ತು ಗುಜರಾತ್ ಮತ್ತು ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರಗಳು ಪ್ರಶಸ್ತಿ ನೀಡಿವೆ. ನಾನು ವಿಶ್ವಸಂಸ್ಥೆಯಿಂದ ಪ್ರಶಂಸೆಗಳನ್ನು ಸಹ ಪಡೆದಿದ್ದೇನೆ. ನನ್ನ ಎರಡು ಉತ್ಪನ್ನಗಳಿಗೆ ನಾನು ಕೇಂದ್ರ ಸರ್ಕಾರದಿಂದ ನೋಂದಣಿಗಳನ್ನು ಸ್ವೀಕರಿಸಿದ್ದೇನೆ ಅವುಗಳೆಂದರೆ ಕಾಟನ್ ಕ್ವೀನ್ (ಸೀಮಾ) ಮತ್ತು ಮೆಣಸಿನಕಾಯಿ ರಾಣಿ (ಸೀಮಾ) . ಇನ್ನೂ 19 ಪ್ರಭೇದಗಳಿಗೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದೇನೆ ”ಎಂದು ಸುಮಂತ ಮಿಶ್ರಾ ಹೇಳಿದರು

ABOUT THE AUTHOR

...view details