ಕರ್ನಾಟಕ

karnataka

ETV Bharat / bharat

Nipah virus: ಕೇರಳದಲ್ಲಿ ನಿಫಾ ವೈರಸ್​ನಿಂದ ಇಬ್ಬರು ಸಾವು.. ಖಚಿತ ಪಡಿಸಿದ ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ

ಕೇರಳದಲ್ಲಿ ಇಬ್ಬರು ನಿಫಾ ವೈರಸ್​ನಿಂದ ಮೃತಪಟ್ಟ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಖಚಿತ ಪಡಿಸಿದ್ದಾರೆ.

Union Health Minister Mandaviya confirms two Nipah virus deaths in Kerala
ಕೇರಳದಲ್ಲಿ ನಿಫಾ ವೈರಸ್​ನಿಂದ ಇಬ್ಬರು ಸಾವು: ಖಚಿತ ಪಡಿಸಿದ ಕೇಂದ್ರ ಆರೋಗ್ಯ ಸಚಿವ ಮಾಂಡವಿಯಾ

By ETV Bharat Karnataka Team

Published : Sep 12, 2023, 7:03 PM IST

Updated : Sep 12, 2023, 8:10 PM IST

ಕೋಯಿಕ್ಕೋಡ್​ (ಕೇರಳ): ಕೇರಳದ ಕೋಯಿಕ್ಕೋಡ್‌ನಲ್ಲಿ ಮೃತಪಟ್ಟ ಇಬ್ಬರಿಗೆ ನಿಫಾ ವೈರಸ್‌ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಈ ಕುರಿತು ಪರಿಸ್ಥಿತಿ ಅವಲೋಕಿಸಲು ಕೇಂದ್ರ ತಂಡವನ್ನು ಕೇರಳಕ್ಕೆ ಕಳಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.

ಇತ್ತೀಚೆಗೆ ಸಾವನ್ನಪ್ಪಿದ್ದ ಇಬ್ಬರಿಗೆ ನಿಫಾ ವೈರಸ್​ನ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಹೆಚ್ಚಿನ ಕಟ್ಟೆಚ್ಚರ ವಹಿಸಿ ಮೃತರ ಮಾದರಿಗಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ರವಾನಿಸಲಾಗಿತ್ತು. ಇಲ್ಲಿ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ನಿಫಾ ವೈರಸ್ ಸೋಂಕು ದೃಢಪಟ್ಟಿದೆ. ಈ ಸೋಂಕು ನಿರ್ವಹಣೆಯಲ್ಲಿ ಕೇರಳ ಸರ್ಕಾರಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ.

ಆಗಸ್ಟ್ 30ರಂದು ಕೋಯಿಕ್ಕೋಡ್‌ನಲ್ಲಿ ಮೊದಲ ಶಂಕಿತ ವ್ಯಕ್ತಿ ಸಾವನ್ನಪ್ಪಿದ್ದರು. 49 ವರ್ಷದ ಇವರು ಮಾರುತೋಂಕರ ಮೂಲದವರಾಗಿದ್ದು, ಆ.27ರಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೆ, ಈ ವ್ಯಕ್ತಿಯ ಮಾದರಿಯನ್ನು ಪರೀಕ್ಷೆ ನಡೆಸಿರಲಿಲ್ಲ. ಈತನ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು.

ಮತ್ತೊಂದೆಡೆ, ಆಯಂಚೇರಿ ಮೂಲದ 40 ವರ್ಷದ ವಡಕರ ಆಸ್ಪತ್ರೆಯಲ್ಲಿ ನಾಲ್ಕು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ತಕ್ಷಣ ಅವರನ್ನು ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ಬಳಿಕ ಸೋಮವಾರ ಮೃತಪಟ್ಟಿದ್ದರು. ಹೀಗಾಗಿ ರೋಗದ ಲಕ್ಷಣಗಳ ಬಗ್ಗೆ ಶಂಕೆ ವ್ಯಕ್ತಪಡಿಸಿದ ಆಸ್ಪತ್ರೆಯ ಅಧಿಕಾರಿಗಳು ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ರವಾನಿಸಿದ್ದರು. ಅಲ್ಲದೇ, ಮೃತದೇಹವನ್ನು ಸಂಬಂಧಿಕರಿಗೆ ವೈದ್ಯರು ಹಸ್ತಾಂತರಿಸಿರಲಿಲ್ಲ.

9 ವರ್ಷದ ಬಾಲಕನ ಸ್ಥಿತಿ ಗಂಭೀರ:ಇದೇ ವೇಳೆ, ಮೃತರಿಬ್ಬರ ಸಂಪರ್ಕದಲ್ಲಿದ್ದ 75 ಜನರ ಸಂಪರ್ಕ ಪಟ್ಟಿಯನ್ನು ಆರೋಗ್ಯ ಇಲಾಖೆ ಸಂಗ್ರಹಿಸಿದೆ. ಮಾರುತೋಂಕರ ನಿವಾಸಿಯ ಮಕ್ಕಳಾದ 5 ಮತ್ತು 9 ವರ್ಷದ ಇಬ್ಬರು ಮತ್ತು 22 ವರ್ಷದ ಸಂಬಂಧಿ ಹಾಗೂ ಒಂಬತ್ತು ತಿಂಗಳ ಮಗುವೊಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಇದರಲ್ಲಿ 9 ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್​ ಅಳವಡಿಸಲಾಗಿದೆ. ಇವರ ಮಾದರಿಗಳನ್ನು ಸಹ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಲಾಗಿದೆ. 2018ರ ಮೇನಲ್ಲಿ ಕೇರಳದ ಮೊದಲ ಬಾರಿಗೆ ನಿಫಾ ವೈರಸ್​ ದೃಢಪಟ್ಟಿತ್ತು. 2021ರಲ್ಲಿ ಚಾತಮಂಗಲಂನ ಪಜೂರ್‌ನಲ್ಲಿ 12 ವರ್ಷದ ಬಾಲಕ ಕೂಡ ನಿಫಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ್ದು ಖಚಿತವಾಗಿತ್ತು.

ಇದನ್ನೂ ಓದಿ:ನಿಫಾ ಸೋಂಕಿಗೆ ಕೇರಳದಲ್ಲಿ ಇಬ್ಬರು ಸಾವು ಶಂಕೆ: ರೋಗದ ಲಕ್ಷಣಗಳೇನು? ತಡೆ ಹೇಗೆ? ಸಂಪೂರ್ಣ ಮಾಹಿತಿ

Last Updated : Sep 12, 2023, 8:10 PM IST

ABOUT THE AUTHOR

...view details