ಕರ್ನಾಟಕ

karnataka

ETV Bharat / bharat

ಜ.7 ರಂದು ಜೆಇಇ ಪರೀಕ್ಷಾ ದಿನಾಂಕ, ಐಐಟಿ ಪ್ರವೇಶಕ್ಕೆ ಅರ್ಹತಾ ಮಾನದಂಡ ಪ್ರಕಟ - JEE Advanced exam

ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್​ಗೆ ಪ್ರವೇಶಾತಿ ಪಡೆಯಲು ನಡೆಸುವ ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ದಿನಾಂಕ ಜನವರಿ 7 ರಂದು ಪ್ರಕಟವಾಗಲಿದೆ.

JEE Advanced
ಜೆಇಇ ಅಡ್ವಾನ್ಸ್ಡ್

By

Published : Jan 5, 2021, 1:28 PM IST

ನವದೆಹಲಿ: ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ದಿನಾಂಕ ಹಾಗೂ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಪ್ರವೇಶಕ್ಕೆ ಅರ್ಹತಾ ಮಾನದಂಡಗಳನ್ನು ಜನವರಿ 7 ರಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಪ್ರಕಟಿಸಲಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿ ಸ್ಪಷ್ಟನೆ ನೀಡಿರುವ ಸಚಿವರು, "ನನ್ನ ಪ್ರೀತಿಯ ವಿದ್ಯಾರ್ಥಿಗಳೇ, ಐಐಟಿಯಲ್ಲಿ ಪ್ರವೇಶ ಪಡೆಯಲು ಅರ್ಹತಾ ಮಾನದಂಡಗಳನ್ನು ಮತ್ತು ಜೆಇಇ ಅಡ್ವಾನ್ಸ್ಡ್ ದಿನಾಂಕವನ್ನು ಜ. 7 ರಂದು ಸಂಜೆ 6 ಗಂಟೆಗೆ ಪ್ರಕಟಿಸುತ್ತೇನೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ನಾಯಕತ್ವ ಶ್ಲಾಘಿಸಿದ ಬಿಲ್ ಗೇಟ್ಸ್

ಜೆಇಇ ಅಡ್ವಾನ್ಸ್ಡ್, ದೇಶದ 23 ಭಾರತೀಯ ತಂತ್ರಜ್ಞಾನ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಕೋರ್ಸ್​ಗೆ ಪ್ರವೇಶಾತಿ ಪಡೆಯಲು ನಡೆಸುವ ಪ್ರಮುಖ ಪ್ರವೇಶ ಪರೀಕ್ಷೆಯಾಗಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳು ಜಂಟಿ ಪ್ರವೇಶ ಮಂಡಳಿಯ ಆದೇಶದಂತೆ ಎಲ್ಲಾ ಅರ್ಹತಾ ಮಾನದಂಡಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ABOUT THE AUTHOR

...view details