ಕರ್ನಾಟಕ

karnataka

ETV Bharat / bharat

LIVE.. ಕೇಂದ್ರ ಬಜೆಟ್​: 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಕಟ್ಟಬೇಕಿಲ್ಲ.. ಕೇಂದ್ರದ ಬಂಪರ್​ ಘೋಷಣೆ - nirmala sitharaman budget

union-budget
ಕೇಂದ್ರ ಬಜೆಟ್

By

Published : Feb 1, 2023, 9:32 AM IST

Updated : Feb 1, 2023, 1:15 PM IST

12:22 February 01

ತೆರಿಗೆದಾರರಿಗೆ ಬಂಪರ್​.. 7 ಲಕ್ಷದವರೆಗೆ ತೆರಿಗೆ ವಿನಾಯಿತಿ

ಕೇಂದ್ರ ಸರ್ಕಾರದಿಂದ ಹೊಸ ತೆರಿಗೆ ದರ ಘೋಷಣೆ ಮಾಡಲಾಗಿದೆ. ಹೊಸ ನಿಯಮದ ಪ್ರಕಾರ, 7 ಲಕ್ಷದವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ. ಲೆಕ್ಕಾಚಾರದ ಪ್ರಕಾರ 9 ಲಕ್ಷ ಆದಾಯ ಇರುವವರು ಕೇವಲ 45 ಸಾವಿರ ರೂ. ತೆರಿಗೆ ಫಾವತಿಸಬೇಕಾಗುತ್ತದೆ. ಮತ್ತು 15 ಲಕ್ಷ ರೂ. ಆದಾಯ ಇರುವವರು 1.5 ಲಕ್ಷ ರೂ ತೆರಿಗೆ ಕಟ್ಟಬೇಕಾಗುತ್ತದೆ.

ಹೊಸ ತೆರಿಗೆ ಪದ್ಧತಿಯಲ್ಲಿ ಈ ಕೆಳಗಿನಂತಿವೆ..

ರೂ 0 ರಿಂದ ರೂ 3 ಲಕ್ಷದವರೆಗೆ - 0%

ರೂ 3 ರಿಂದ 6 ಲಕ್ಷದವರೆಗೆ - 5%

ರೂ 6 ರಿಂದ 9 ಲಕ್ಷದವರೆಗೆ - 10%

ರೂ 9 ರಿಂದ 12 ಲಕ್ಷದವರೆಗೆ - 15%

ರೂ 12 ರಿಂದ 15 ಲಕ್ಷದವರೆಗೆ - 20%

15 ಲಕ್ಷದ ಮೇಲೆ - 30%

12:14 February 01

ಬಂಗಾರ, ಬೆಳ್ಳಿ, ವಜ್ರ ದುಬಾರಿ

ಮೊಬೈಲ್​ ಫೋನ್​, ಕ್ಯಾಮರಾ ಲೆನ್ಸ್​ ಆಮದು ಸುಂಕ ರದ್ದು, ಟಿವಿ ಬೆಲೆ ಇಳಿಕೆ, ಬ್ಯಾಟರಿ ಮೇಲಿನ ಕಸ್ಟಮ್ಸ್​ ಡ್ಯೂಟಿ ಶೇ,13 ಕ್ಕೆ ಇಳಿಕೆ, 2070 ರ ವೇಳೆಗೆ ಹೊಗೆ ಮುಕ್ತ ಭಾರತ ನಿರ್ಮಾಣ ಗುರಿ, ಬಂಗಾರ, ಬೆಳ್ಳಿ, ವಜ್ರ ದುಬಾರಿ

12:05 February 01

ಬ್ಯಾಂಕ್​, ಆರ್​ಬಿಐ ಕಾಯ್ದೆಗೆ ಹೊಸ ಮಸೂದೆ

ಪ್ರಧಾನಮಂತ್ರಿ ಆವಾಸ್ ಯೋಜನೆಗೆ 64% ಹೆಚ್ಚಳದೊಂದಿಗೆ 79,000 ಕೋಟಿ ನಿಗದಿ. ವಾಣಿಜ್ಯ ವಾಹನಗಳು ಮತ್ತು ನಿರ್ಮಾಣಕ್ಕಾಗಿ ಬಳಸುವ ಟ್ರಾಕ್ಟರ್‌ಗಳಿಗೆ ಅನುದಾನ.

ಪರ್ಯಾಯ ರಸಗೊಬ್ಬರಗಳನ್ನು ಬಳಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಉತ್ತೇಜಿಸಲು ಪಿಎಂ ಪ್ರಣಮ್ ಯೋಜನೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು 50 ಪ್ರವಾಸಿ ತಾಣಗಳ ಗುರುತು.

ಬ್ಯಾಂಕ್​ ಕಾಯ್ದೆ, ಆರ್​ಬಿಐ ಕಾಯ್ದೆಗೆ ಹೊಸ ಮಸೂದೆ, ಆರ್​ಬಿಐ ಮೂಲಕ ಪ್ರತ್ಯೇಕ ಪದವಿ ಶಿಕ್ಷಣಕ್ಕೆ ಅನುಮತಿ, ಡಿಜಿಟಲ್​ ಪೇಮೆಂಟ್​ ಶೇ.76 ಹೆಚ್ಚಳ. ಮಹಿಳಾ ಸಮ್ಮಾನ್​ ಸೇವಿಂಗ್​ ಪತ್ರ ಯೋಜನೆ ಜಾರಿ.

11:58 February 01

2030 ರ ವೇಳೆಗೆ 5 ಎಂಎಂಟಿ ಹಸಿರು ಹೈಡ್ರೋಜನ್ ಉತ್ಪಾದನೆ ಗುರಿ

2030 ರ ವೇಳೆಗೆ 5 ಎಂಎಂಟಿ ಹಸಿರು ಹೈಡ್ರೋಜನ್ ಉತ್ಪಾದನೆಯನ್ನು ತಲುಪುವ ಗುರಿ. ಗುರಿ ಸಾಧಿಸಲು 35,000 ಕೋಟಿ ರೂ.ಗಳನ್ನು ಬಜೆಟ್​ನಲ್ಲಿ ಮೀಸಲು

: ದೇಶಕ್ಕಾಗಿ ಕೆಲಸ ಮಾಡುವ ಯೋಜನೆ ಸಾಕಾರಗೊಳಿಸಲು ಹೆಚ್ಚಿನ ಒತ್ತು. ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೃತಕ ಬುದ್ಧಿಮತ್ತೆಗಾಗಿ 3 ಶ್ರೇಷ್ಠತೆಯ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಪ್ರಕಟ.

ಪಾನ್​ ಕಾರ್ಡ್​ ಹೊಂದುವ ಅಗತ್ಯವಿರುವ ವ್ಯಾಪಾರ ಸಂಸ್ಥೆಗಳಿಗೆ, ನಿರ್ದಿಷ್ಟಪಡಿಸಿದ ಸರ್ಕಾರಿ ಏಜೆನ್ಸಿಗಳ ಎಲ್ಲಾ ಡಿಜಿಟಲ್ ಸಿಸ್ಟಮ್‌ಗಳಿಗೆ PAN ಸಾಮಾನ್ಯ ಗುರುತಿನ ಚೀಟಿಯಾಗಿ ಬಳಕೆಗೆ ಅವಕಾಶ.

ಗ್ರೀನ್​ ಹೈಡ್ರೋಜನ್​:2030 ರ ವೇಳೆಗೆ 5 ಎಂಎಂಟಿ ಹಸಿರು ಹೈಡ್ರೋಜನ್ ಉತ್ಪಾದನೆಯನ್ನು ತಲುಪುವ ಗುರಿ. ಗುರಿ ಸಾಧಿಸಲು 35,000 ಕೋಟಿ ರೂ.ಗಳನ್ನು ಬಜೆಟ್​ನಲ್ಲಿ ಮೀಸಲು

11:48 February 01

ರೈಲ್ವೆ ಇಲಾಖೆಗೆ 2.40 ಲಕ್ಷ ಕೋಟಿ ರೂ. ಮೀಸಲು

ಕೃಷಿ ಸಾಲಕ್ಕೆ 20 ಲಕ್ಷ ಕೋಟಿ ರೂಪಾಯಿ ಮೀಸಲು, ಉದ್ಯೋಗ ಸೃಷ್ಟಿಗೆ 10 ಲಕ್ಷ ಕೋಟಿ ರೂಪಾಯಿ ಮೀಸಲು, ನಗರೋತ್ಥಾನಕ್ಕಾಗಿ 10 ಸಾವಿರ ಕೋಟಿ, ಇ- ಕೋರ್ಟ್​ಗಳಿಗೆ 7 ಸಾವಿರ ಕೋಟಿ, ಕೆವೈಸಿ ಸರಳೀಕರಣಕ್ಕೆ ಕೇಂದ್ರ ಸರ್ಕಾರ ಕ್ರಮ, ಸರ್ಕಾರಿ ನೌಕರರಿಗಾಗಿ ಮಿಷನ್​ ಕರ್ಮಯೋಗಿ ಯೋಜನೆ.

ರೈಲ್ವೆಗೆ ಬಂಪರ್​:ರೈಲ್ವೆ ಇಲಾಖೆಗೆ 2.40 ಲಕ್ಷ ಕೋಟಿ ರೂ. ಮೀಸಲು, 10 ಲಕ್ಷ ಕೋಟಿ ಮೂಲ ಬಂಡವಾಳ ಹೂಡಿಕೆ. ಭಾರತದ ಇತಿಹಾಸದಲ್ಲಿಯೇ ಅತಿದೊಡ್ಡ ಹೂಡಿಕೆ. ರಾಜ್ಯ ಸರ್ಕಾರಗಳಿಗೆ ಸಾಲ ಸೌಲಭ್ಯ ಇನ್ನೊಂದು ವರ್ಷ ಮುಂದುವರಿಕೆ

ಸೂಕ್ಷ್ಮ ಬುಡಕಟ್ಟು ಜನರ ಅಭಿವೃದ್ಧಿ:ಸೂಕ್ಷ್ಮ ಬುಡಕಟ್ಟು ಜನಾಂಗಗಳ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆ, ಸೂಕ್ಷ್ಮ ಬುಡಕಟ್ಟು ಜನಾಂಗಗಳ ಅಭಿವೃದ್ಧಿ 15 ಸಾವಿರ ಕೋಟಿ ರೂ., ವಸತಿ, ಕುಡಿಯುವ ನೀರು, ವಿದ್ಯುತ್, ರಸ್ತೆ ಅಭಿವೃದ್ಧಿ, ಈ ಕಾರ್ಯಕ್ರಮದಡಿ ಎರಡು ಲಕ್ಷ ಅಂಗನವಾಡಿ ಕೇಂದ್ರಗಳನ್ನು ಮೇಲ್ದೆರ್ಜೆಗೇರಿಸಲಾಗುವುದು.

11:38 February 01

ಭದ್ರಾ ಮೇಲ್ದಂಡೆ ಯೋಜನೆಗೆ 5,630 ಕೋಟಿ ರೂಪಾಯಿ ಮೀಸಲು

ಭದ್ರಾ ಮೇಲ್ದಂಡೆ ಯೋಜನೆಗೆ 5,630 ಕೋಟಿ ಮೀಸಲು, ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಐಸಿಎಂಆರ್ ಲ್ಯಾಬ್​ಗಳು. ಸಾರ್ವಜನಿಕ ಗ್ರಂಥಾಲಯಗಳಲ್ಲಿ ರೋಗಗಳ ಬಗ್ಗೆ ಮಾಹಿತಿ. ಕೃಷಿ ಸಾಲಕ್ಕೆ 20 ಲಕ್ಷ ಕೋಟಿ ಮಿಸಲು. ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮ. ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಒತ್ತು. ಪ್ರಾದೇಶಿಕ ಭಾಷೆಯಲ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ.

ಹೊಸ ನರ್ಸಿಂಗ್ ಕಾಲೇಜುಗಳ ಸ್ಥಾಪನೆ. ಹಸಿರು ಕ್ರಾಂತಿ ಸರ್ವರನ್ನು ಒಳಗೊಂಡ ಬೆಳವಣಿಗೆ. ಮೀನುಗಾರಿಕೆಗೆ 6 ಸಾವಿರ ಕೋಟಿ ಮೀಸಲು. ಶ್ರೀಅನ್ನ ಜೋಳ, ಶ್ರೀ ಅನ್ನರಾಗಿ, ಶ್ರೀಅನ್ನ ಗೋಧಿ, ಸಿರಿಧಾನ್ಯಗಳ ಕೃಷಿ ಯೋಜನೆಗೆ ಹೊಸ ಯೋಜನೆ. ಸಿರಿಧಾನ್ಯ ಕೃಷಿಗೆ ಆದ್ಯತೆ. ಪ್ರಮುಖ ಮೂರು ಅಂಶಗಳ ಮೇಲೆ ಬಜೆಟ್ ಮಂಡನೆ. ಕೃಷಿಯಲ್ಲಿ ಸ್ಟಾರ್ಟ್ ಅಪ್​ಗಳಿಗೆ ಆದ್ಯತೆ. ಉಜ್ವಲ ಯೋಜನೆಯಲ್ಲಿ 9.6 ಲಕ್ಷ ಗ್ಯಾಸ್ ವಿತರಣೆ.

ಯುವ ಸಬಲೀಕರಣ, ಮಹಿಳಾ ಸಬಲೀಕರಣ. ಹಿಂದುಳಿದ ವರ್ಗಗಳ ಮೇಲೆ ಬಜೆಟ್​ನಲ್ಲಿ ಆದ್ಯತೆ. ಗರೀಭ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ. ಆತ್ಮನಿರ್ಭರ ಯೋಜನೆಯಡಿ ಕುಶಲಕರ್ಮಿಗಳಿಗೆ ನೆರವು. ಹಸಿರುಕ್ರಾಂತಿಗೆ ಬಜೆಟ್​ನಲ್ಲಿ ಮನ್ನಣೆ. ಈ ಬಾರಿಯೂ ಬಜೆಟ್​ನಲ್ಲಿ ಸಪ್ತ ಮಂತ್ರ.

ಕರಕುಶಲಕರ್ಮಿಗಳಿಗೆ ನೂತನ ಯೋಜನೆ. ಪ್ರಧಾನಿ ವಿಶ್ವಕರ್ಮ ಕೌಶಲ್ಯ ಸಮ್ಮಾನ್. ಕೋವಿನ್, ಆಧಾರ್ ಹಾಗೂ ಯುಪಿಎ ವ್ಯವಸ್ಥೆ ನಿರ್ವಹಣೆಗೆ ವಿಶ್ವಮನ್ನಣೆ. ಪಿಎಂ ವಿಕಾಸ್ ಹೊಸ ಯೋಜನೆ ಜಾರಿ.

14 ಕೋಟಿ ರೈತರಿಗೆ 2.7 ಲಕ್ಷ ಕೋಟಿ ವಿಮೆ ಹಂಚಿಕೆ. 220 ಕೋಟಿ ಡೋಸ್ ವ್ಯಾಕ್ಸಿನ್ ನೀಡಿದ್ದೇವೆ. 81 ಲಕ್ಷ ಸ್ವಸಹಾಯ ಗುಂಪಿಗೆ ಸಹಾಯ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರೈತರಿಗೆ ನೆರವು. 47 ಕೋಟಿ ಜನ್​ಧನ್ ಖಾತೆ ತೆರೆಯಲಾಗಿದೆ. ಭಾರತಕ್ಕೆ ವಿಶ್ವ ನೀಡಿರುವ ಮನ್ನಣೆಗೆ ಜಿ20ಯೇ ಸಾಕ್ಷಿ. ಆರ್ಥಿಕತೆಯಲ್ಲಿ ವಿಶ್ವದಲ್ಲೇ ಭಾರತಕ್ಕೆ 5ನೇ ಸ್ಥಾನ ಬಂದಿದೆ.

11:34 February 01

ಬಜೆಟ್​ನಲ್ಲಿ ಅಭಿವೃದ್ಧಿಗೆ "ಸಪ್ತಸೂತ್ರ" ಮಂತ್ರಪಠಣ

1.ಎಲ್ಲರನ್ನು ಒಳಗೊಂಡ ಸಮಗ್ರ ಬೆಳವಣಿಗೆ, ರೈತರು, ಮಹಿಳೆಯರು, ಎಸ್ಸಿ/ ಎಸ್ಟಿ, ದಿವ್ಯಾಂಗರು, ಹಿಂದುಳಿದವರು ಸೇರಿ ವಂಚಿತರಿಗೆ ಮೊದಲ ಆದ್ಯತೆ

2. ಕೃಷಿಗೆ ಡಿಜಿಟಲ್ ಮೂಲ ಸೌಕರ್ಯ ಅಭಿವೃದ್ಧಿ, ರೈತರಿಗೆ ಬೆಳೆ ಯೋಜನೆಗೆ ಸೂಕ್ತ ಮಾಹಿತಿ ನೀಡುವುದು, ಸಾಲ ಸೌಲಭ್ಯ ಡಿಜಿಟಲೀಕರಣ

3.ಕೃಷಿ ಆಧಾರಿತ ತಂತ್ರಜ್ಞಾನ ಸಂಸ್ಥೆಗಳಿಗೆ ವಿಶೇಷ ಸಹಾಯ, ಕೃಷಿ ಆಧಾರಿತ ಸಾರ್ಟ್ ಅಪ್ಗಳಿಗೆ ಪ್ರತ್ಯೇಕ ಅನುದಾನ, ರೈತರಿಗೆ ಸಮಸ್ಯೆ ಪರಿಹರಿಸಲು ಕೆಲಸ ಮಾಡುವ ಸಾರ್ಟ್ಅಪ್​ಗಳಿಗೆ ನೆರವು

4. ಹಸಿರು ಅಭಿವೃದ್ಧಿಗೆ ಅತಿಹೆಚ್ಚಿನ ಆದ್ಯತೆ, ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು.

5. ಪ್ರವಾಸೋದ್ಯಮದಲ್ಲಿ ಹೆಚ್ಚಿನ ಉದ್ಯೋಗಾವಕಾಶ, ಪ್ರವಾಸೋದ್ಯಮದ ಪ್ರೋತ್ಸಾಹದ ಸರ್ಕಾರದ ಪ್ರಮುಖ ಆದ್ಯತೆ

6.400 ಹೊಸ ವಂದೇ ಭಾರತ್ ರೈಲುಗಳನ್ನು ಪರಿಚಯ, ಈ ರೈಲುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ನಿರ್ಮಿಸಲಾಗುವುದು.

7.ಕೃಷಿಕರಿಗೆ ಸಾಲ ಯೋಜನೆಯನ್ನು 20 ಲಕ್ಷ ಕೋಟಿಯವರೆಗೆ ವಿಸ್ತರಿಸಲಾಗುವುದು. ಹೈನುಗಾರಿಕೆ, ಪಶು ಸಂಗೋಪನೆ ಹಾಗೂ ಮೀನುಗಾರಿಕೆಗೆ ಹೆಚ್ಚಿನ ಅನುದಾನ. ಕೃಷಿಕರ ಆದಾಯ ಹೆಚ್ಚಿುವಂತ ಯೋಜನೆಗಳಿಗೆ ಮೊದಲ ಆದ್ಯತೆ. ವೈದ್ಯಕೀಯ ಕಾಲೇಜು ಹಾಗೂ ಸಂಶೋಧನೆಗೆ ಹೆಚ್ಚಿನ ಒತ್ತು. ವೈದ್ಯಕೀಯ ಸಲಕರಣೆಗಳಿಗೂ ಹೆಚ್ಚಿನ ಅನುದಾನ. 157 ಹೊಸ ನರ್ಸಿಂಗ್ ಕಾಲೇಜು. 2014 ರಿಂದ ಸ್ಥಾಪಿತಗೊಂಡ ಹೊಸ ವೈದ್ಯಕೀಯ ಕಾಲೇಜುಗಳಲ್ಲಿ 157 ಹೊಸ ನರ್ಸಿಂಗ್‌ ಕಾಲೇಜು ಸ್ಥಾಪನೆ ಮಾಡುವುದಾಗಿ ಸರ್ಕಾರದ ಘೋಷಣೆ.

11:27 February 01

ಕೃಷಿ ಸಾಲಕ್ಕೆ 20 ಲಕ್ಷ ಕೋಟಿ ರೂಪಾಯಿ ಮೀಸಲು

ಸಿರಿಧಾನ್ಯಗಳ ಸಂಶೋಧನಾ ಕೇಂದ್ರ:ಶ್ರೀ ಅನ್ನ ಗೋಧಿ, ಶ್ರೀ ಅನ್ನ ರಾಗಿ, ಶ್ರೀ ಅನ್ನ ಸಜ್ಜೆ ಸೇರಿದಂತೆ ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆ. ಹೈದರಾಬಾದ್​ನಲ್ಲಿ ಶ್ರೀ ಅನ್ನ ಸಂಶೋಧನಾ ಕೇಂದ್ರ ಆರಂಭ ಮಾಡಲಾಗುವುದು ಎಂದು ನಿರ್ಮಲಾ ತಿಳಿಸಿದರು.

157 ಹೊಸ ನರ್ಸಿಂಗ್​ ಕಾಲೇಜುಗಳ ಸ್ಥಾಪನೆ, ಮೀನುಗಾರಿಕೆಗೆ 6 ಸಾವಿರ ಕೋಟಿ ವಿಮೆ, ದೇಶದಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ವಿಶೇಷ ಆದ್ಯತೆ, ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಪಠ್ಯಕ್ರಮ

ಪ್ರಾದೇಶಿಕ ಭಾಷೆಯಲ್ಲಿ ಸಾಂಕ್ರಾಮಿಕ ರೋಗಗಳ ಮಾಹಿತಿ ನೀಡುವಿಕೆ, ಸಾರ್ವಜನಿಕ ಗ್ರಂಥಾಲಯಗಳಲ್ಲಿ ರೋಗಗಳ ಮಾಹಿತಿ, ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಐಸಿಎಂಆರ್​ ಲ್ಯಾಬ್​ಗಳು ಸ್ಥಾಪನೆ. ಕೃಷಿ ಸಾಲಕ್ಕೆ 20 ಲಕ್ಷ ಕೋಟಿ ರೂಪಾಯಿ ಮೀಸಲು.

11:20 February 01

ಹೈದರಾಬಾದ್​ನಲ್ಲಿ ಸಿರಿಧಾನ್ಯಗಳ ಸಂಶೋಧನಾ ಕೇಂದ್ರ

ಬಜೆಟ್​ನಲ್ಲಿ ಸಪ್ತ ಮಂತ್ರ:7 ಅಂಶಗಳ ಆಧಾರದ ಮೇಲೆ ಬಜೆಟ್​ ಮಂಡನೆ, ಕೃಷಿಯಲ್ಲಿ ಸ್ಟಾರ್ಟಪ್​ಗಳಿಗೆ ವಿಶೇಷ ಆಧ್ಯತೆ, ಹಸಿರುಕ್ರಾಂತಿ, ಸರ್ವರನ್ನ ಒಳಗೊಂಡ ಬೆಳವಣಿಗೆ.

ಸಿರಿಧಾನ್ಯಗಳ ಸಂಶೋಧನಾ ಕೇಂದ್ರ:ಶ್ರೀ ಅನ್ನ ಗೋಧಿ, ಶ್ರೀ ಅನ್ನ ರಾಗಿ, ಶ್ರೀ ಅನ್ನ ಸಜ್ಜೆ ಸೇರಿದಂತೆ ಸಿರಿಧಾನ್ಯಗಳ ಕೃಷಿಗೆ ಹೊಸ ಯೋಜನೆ. ಹೈದರಾಬಾದ್​ನಲ್ಲಿ ಶ್ರೀ ಅನ್ನ ಸಂಶೋಧನಾ ಕೇಂದ್ರ ಆರಂಭ ಮಾಡಲಾಗುವುದು ಎಂದು ನಿರ್ಮಲಾ ತಿಳಿಸಿದರು.

11:14 February 01

ಬಜೆಟ್​ನಲ್ಲಿ "ಸಪ್ತ" ಮಂತ್ರ ಪಠಿಸಿದ ಸಚಿವೆ ನಿರ್ಮಲಾ

ವಿಶ್ವದಲ್ಲೇ ಅತ್ಯುನ್ನತ ಆರ್ಥಿಕ ಪರಿಸ್ಥಿತಿ ದೇಶಕ್ಕಿದೆ. ಶೇ 7 ರಷ್ಟು ಜಿಡಿಪಿ ನಿರೀಕ್ಷಿಸಲಾಗಿದೆ. ಇದು ಎಲ್ಲ ರಾಷ್ಟ್ರಗಳಿಗಿಂತ ಮುಂದಿದೆ ಎಂದು ತೋರಿಸುತ್ತಿದೆ. ಎಲ್ಲ ರಂಗಗಳಲ್ಲೂ ಸರ್ಕಾರ ಉತ್ತಮ ಸಾಧನೆ ಮಾಡಿದೆ. ವಿಶ್ವ ಆರ್ಥಿಕತೆಯಲ್ಲಿ ಭಾರತ ಮಿಂಚುತ್ತಿದೆ. 126 ಲಕ್ಷ ಕೋಟಿ ರೂಪಾಯಿ ಯುಪಿಎ ವ್ಯವಹಾರ ನಡೆದಿದೆ. 11,700 ಕೋಟಿ ಟಾಯ್ಲೆಟ್​ ನೀಡಿದ್ದೇವೆ. 220 ಕೋಟಿ ವ್ಯಾಕ್ಸಿನೇಷನ್​ ಮಾಡಿದ್ದೇವೆ. 44 ಕೋಟಿ ಜನಧನ ಖಾತೆ, 2.2 ಲಕ್ಷ ಕೋಟಿ ಯಷ್ಟು ಹಣವನ್ನು ರೈತರಿಗೆ ನೀಡಿದ್ದೇವೆ ಎಂದು ಭಾಷಣ ಆರಂಭಿಸಿದ ನಿರ್ಮಲಾ ಸೀತಾರಾಮನ್​ ಹೇಳಿದರು.

ಕರಕುಶಲ ಕರ್ಮಿಗಳಿಗೆ ನೆರವು:ಕರಕುಶಲ ಕರ್ಮಿಗಳಿಗೆ ನೂತನ ಯೋಜನೆ, ಪ್ರಧಾನಿ ವಿಶ್ವಕರ್ಮ ಕೌಶಲ್ಯ ಯೋಜನೆ ಜಾರಿ ಮಾಡಲಾಗುವುದು. ಆತ್ಮನಿರ್ಭರ್​ ಯೋಜನೆಯಡಿಯಲ್ಲಿ ಕುಶಲಕರ್ಮಿಗಳಿಗೆ ನೆರವು. ಪಿಎಂ ವಿಕಾಸ್​ ಹೊಸ ಯೋಜನೆ ಜಾರಿ.

11:04 February 01

ಬಜೆಟ್‌ ಎಫೆಕ್ಟ್​: ಡಾಲರ್​ ಎದುರು 12 ಪೈಸೆ ಏರಿದ ರೂಪಾಯಿ

ಬಜೆಟ್​ ಮಂಡನೆಗೂ ಮೊದಲ ಅಮೆರಿಕದ ಡಾಲರ್​ ಎದುರು ಭಾರತದ ರೂಪಾಯಿ ತುಸು ಏರಿಕೆ ಕಂಡಿದೆ. 2022-23 ರ ಆರ್ಥಿಕ ಸಮೀಕ್ಷೆಯ ನಂತರ ರೂಪಾಯಿಯು ಯುಎಸ್ ಡಾಲರ್ ಮುಂದೆ ಮೂರು ವಾರಗಳ ಕನಿಷ್ಠ ಅಂದರೆ 36 ಪೈಸೆಗಳಷ್ಟು ಕುಸಿದು 81.88 ರಷ್ಟಾಗಿತ್ತು. ಇಂದು ಬಜೆಟ್​ ಶುರುವಿಗೂ ಮೊದಲೇ 12 ಪೈಸೆ ಏರಿಕೆ ಕಂಡು 81.76 ಕ್ಕೆ ತಲುಪಿದೆ.

10:58 February 01

ಬಡ, ಮಧ್ಯಮ ವರ್ಗದವರ ಪರವಾದ ಬಜೆಟ್ ಇದು

ಜಗತ್ತಿಗೇ ಭಾರತ ಮಾದರಿ:ಜಗತ್ತೇ ಭಾರತದ ಮಾದರಿಯನ್ನು ಒಪ್ಪಿಕೊಳ್ಳುತ್ತಿದೆ. ಭಾರತ ಆರ್ಥಿಕ, ರಾಜಕೀಯ, ಸ್ವಾವಲಂಬಿಯಾಗಿ ಬೆಳೆಯುತ್ತಿದೆ. ವಿಪಕ್ಷಗಳು ತಮ್ಮ ಅತೃಪ್ತಿಯನ್ನು ಸರ್ಕಾರದ ವಿರುದ್ಧ ತೋರಿಸಲಿ ಹೊರತಾಗಿ, ದೇಶದ ಅಭಿವೃದ್ಧಿಯಲ್ಲಿ ಅಲ್ಲ. ದೇಶದ ಅಭ್ಯುದಯವನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದರು. ಇದು ಅತ್ಯುತ್ತಮ ಬಜೆಟ್ ಆಗಲಿದೆ. ಬಡವರ, ಮಧ್ಯಮ ವರ್ಗದವರ ಪರವಾದ ಬಜೆಟ್ ಇದಾಗಿರಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವರು ಭರವಸೆ ವ್ಯಕ್ತಪಡಿಸಿದರು.

ಬಜೆಟ್​ ಆರ್ಥಿಕತೆಗೆ ಸಹಕಾರಿ:ಭಾರತದ ಆರ್ಥಿಕತೆಯು 6.8% ರಷ್ಟು ಬೆಳೆಯುವ ನಿರೀಕ್ಷೆಯಿದೆ. ಇದು ಜನಪರವಾದ ಬಜೆಟ್ ಆಗಿರಲಿದ್ದು, ಆರ್ಥಿಕತೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.

10:50 February 01

ಕೆಲವೇ ಕ್ಷಣಗಳಲ್ಲಿ ಬಜೆಟ್​ ಮಂಡಿಸಲಿರುವ ಸಚಿವೆ ನಿರ್ಮಲಾ

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2023-24ರ ಕೇಂದ್ರ ಬಜೆಟ್‌ಗೆ ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ಹಣಕಾಸು ಸಚಿವರು ಈಗ ಸಂಸತ್ತಿನಲ್ಲಿ ವಾರ್ಷಿಕ ಬಜೆಟ್ ಭಾಷಣವನ್ನು ಮಂಡಿಸಲು ಅಣಿಯಾಗಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ನಿರ್ಮಲಾ ಸೀತಾರಾಮನ್​ ಅವರು ಬಜೆಟ್​ ಮಂಡಿಸಲಿದ್ದಾರೆ.

ವಲಯಕ್ಕೆ ಉತ್ತೇಜನ ಸಾಧ್ಯತೆ:2014 ರಲ್ಲಿ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆಗಳು ಮತ್ತು ಇಂಧನ ಸೇರಿದಂತೆ ಹಲವು ಕ್ಷೇತ್ರಗಳಿಗೆ ಅನುದಾನ ಹೆಚ್ಚಿಸಿದ್ದಾರೆ. ಕಡಿಮೆ ತೆರಿಗೆ ದರಗಳು ಮತ್ತು ಕಾರ್ಮಿಕ ಸುಧಾರಣೆಗಳ ಮೂಲಕ ಹೂಡಿಕೆದಾರರನ್ನು ಓಲೈಸುತ್ತಿದ್ದಾರೆ. ಬಡ ಕುಟುಂಬಗಳಿಗೆ ಸಬ್ಸಿಡಿಗಳನ್ನು ಘೋಷಿಸಿದ್ದಾರೆ. ಇಂದಿನ ಬಜೆಟ್​ನಲ್ಲಿ ಈ ಎಲ್ಲ ಕ್ಷೇತ್ರಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಷ್ಟರಮಟ್ಟಿಗೆ ಅನುದಾನ ನೀಡಲಿದ್ದಾರೆ ಎಂಬುದು ಕುತೂಹಲದ ವಿಷಯವಾಗಿದೆ. ಆರೋಗ್ಯ, ಶಿಕ್ಷಣ ಮತ್ತು ಗ್ರಾಮೀಣ ಯೋಜನೆಗಳಿಗೆ ಬಜೆಟ್ ಹಂಚಿಕೆಯಲ್ಲಿ 10% ರಿಂದ 12% ರಷ್ಟು ಹೆಚ್ಚಳವನ್ನು ಘೋಷಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.

10:35 February 01

ಪ್ರಧಾನಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭ

ಪ್ರಧಾನಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ

ಬಜೆಟ್​ ಮಂಡನೆ ಪೂರ್ವಭಾವಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಆರಂಭವಾಗಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಎಲ್ಲ ನಾಯಕರು ಹಾಜರಿದ್ದಾರೆ. ಇದರ ನಂತರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2023 ಅನ್ನು ಸಂಸತ್ತಿನಲ್ಲಿ 11 ಗಂಟೆಗೆ ಮಂಡಿಸುವರು.

10:14 February 01

ಸಂಸತ್ತಿಗೆ ಆಗಮಿಸಿದ ಹಣಕಾಸು ಸಚಿವೆ ನಿರ್ಮಲಾ

ಕೇಂದ್ರ ಬಜೆಟ್ ಮಂಡನೆಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಸಾಂಪ್ರದಾಯಿಕ ಕೆಂಪು ಸೀರೆಯಲ್ಲಿ ಸಂಸತ್ತಿಗೆ ಆಗಮಿಸಿದರು. ಕೈಯಲ್ಲಿ ಕೆಂಪು ಡಿಜಿಟಲ್ ಟ್ಯಾಬ್​ನೊಂದಿಗೆ ಕಾಣಿಸಿಕೊಂಡರು. ಇಂದು ಮಂಡಿಸುವ ಬಜೆಟ್ ಸೀತಾರಾಮನ್ ಅವರ ಐದನೇ ಬಜೆಟ್ ಆಗಿದೆ.

ಕಾಗದ ರಹಿತ ಬಜೆಟ್​:ಕೇಂದ್ರ ಬಜೆಟ್ 2023-24 ಅನ್ನು ಹಿಂದಿನ 2 ವರ್ಷಗಳಂತೆಯೇ ಕಾಗದರಹಿತ ಸ್ವರೂಪದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿದ್ದಾರೆ. ಸಾಂಪ್ರದಾಯಿಕ ಬಹಿ ಖಾತಾ ಶೈಲಿಯ ಚೀಲದಲ್ಲಿ ಸುತ್ತುವ ಡಿಜಿಟಲ್ ಟ್ಯಾಬ್ಲೆಟ್ ಅನ್ನು ಅವರು ಹಿಡಿದಿದ್ದರು. ಚಿನ್ನದ ಬಣ್ಣದ ರಾಷ್ಟ್ರೀಯ ಲಾಂಛನ ಹೊಂದಿರುವ ಕೆಂಪು ಕವರ್‌ನೊಳಗೆ ಇರಿಸಲಾದ ಟ್ಯಾಬ್ಲೆಟ್‌ನಲ್ಲಿ ನಿರ್ಮಲಾ ಅವರು ಸಂಸತ್ತಿಗೆ ಬಂದರು.

09:59 February 01

ಸಂಸತ್ತಿನೆಡೆಗೆ ಹೊರಟ ಸಚಿವೆ ನಿರ್ಮಲಾ ಸೀತಾರಾಮನ್​

ಸಂಸತ್ತಿನೆಡೆಗೆ ಹೊರಟ ಸಚಿವೆ ನಿರ್ಮಲಾ:ರಾಷ್ಟ್ರಪತಿ ಭೇಟಿ ಬಳಿಕ ಬಜೆಟ್​ ಮಂಡನೆಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಸಂಸತ್ತಿನೆಡೆಗೆ ಬರುತ್ತಿದ್ದಾರೆ. ಇದಕ್ಕೂ ಮೊದಲು ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯುವ ಸಚಿವ ಸಂಪುಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಂಪುಟದ ಒಪ್ಪಿಗೆಯ ಬಳಿಕ ಅವರು 11 ಗಂಟೆಗೆ ಲೋಕಸಭೆಯಲ್ಲಿ ಬಜೆಟ್​ ಮಂಡಿಸಲಿದ್ದಾರೆ.

09:45 February 01

ರಾಷ್ಟ್ರಪತಿ ಮುರ್ಮುರನ್ನು ಭೇಟಿ ಮಾಡಿದ ಸೀತಾರಾಮನ್​

ರಾಷ್ಟ್ರಪತಿ ಭೇಟಿ:ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಸಚಿವರಾದ ಡಾ.ಭಾಗವತ್ ಕಿಶನ್‌ರಾವ್ ಕರಾಡ್, ಪಂಕಜ್ ಚೌಧರಿ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಬಜೆಟ್ ಮಂಡನೆಗೂ ಮೊದಲು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದರು.

ಸೆನ್ಸೆಕ್ಸ್​ ಏರಿಕೆ:ಬಜೆಟ್​ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದು, ಸೆನ್ಸೆಕ್ಸ್​ ಬೆಳಗಿನ ವಹಿವಾಟಿನಲ್ಲಿ ಏರಿಕೆ ಕಂಡಿದೆ. 437.32 ಪಾಯಿಂಟ್​ಗಳೊಂದಿಗೆ ಏರಿಕೆಯ ವಹಿವಾಟು ಆರಂಭಿಸಿದೆ. ಸದ್ಯ ಅದು 59,987.22 ಅಂಕಗಳಲ್ಲಿದೆ.

09:13 February 01

Union budget live

ರಾಷ್ಟ್ರಪತಿ ಭೇಟಿ

ನವದೆಹಲಿ:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಪೂರ್ಣಾವಧಿ ಕೊನೆಯ ಬಜೆಟ್​ ಮಂಡನೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಂಸತ್ತಿನಲ್ಲಿ ಅವರು ಬಜೆಟ್​ ಪ್ರತಿಯನ್ನು ಓದಲಿದ್ದಾರೆ. 2024ರ ಏಪ್ರಿಲ್- ಮೇ ತಿಂಗಳಲ್ಲಿ ಮುಂದಿನ ಲೋಕಸಭೆ ಚುನಾವಣೆ ನಡೆಯಲಿರುವ ಕಾರಣ ಬಜೆಟ್‌ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ರಾಷ್ಟ್ರಪತಿಗಳ ಭಾಷಣದೊಂದಿಗೆ ಸಂಸತ್ತಿನ ಬಜೆಟ್ ಅಧಿವೇಶನ ನಿನ್ನೆ ಆರಂಭವಾಯಿತು. ಈ ವರ್ಷದ ಬಜೆಟ್ ಅಧಿವೇಶನವು ಏಪ್ರಿಲ್ 6 ರವರೆಗೆ ನಡೆಯಲಿದೆ. ಅಧಿವೇಶನದ ಮೊದಲ ಭಾಗ ಆರಂಭವಾಗಿದ್ದು, ಫೆಬ್ರವರಿ 13 ರವರೆಗೆ ನಡೆಯಲಿದೆ. ಬಳಿಕ ಬಜೆಟ್​ ಮೇಲಿನ ಚರ್ಚೆಗಾಗಿ ಎರಡನೇ ಕಂತು ಮಾರ್ಚ್ 12 ರಿಂದ ಆರಂಭವಾಗಿ ಏಪ್ರಿಲ್ 6 ರಂದು ಕೊನೆಗೊಳ್ಳಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ 2022-23ರ ಹಣಕಾಸು ವರ್ಷದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಿದ್ದರು.

Last Updated : Feb 1, 2023, 1:15 PM IST

ABOUT THE AUTHOR

...view details