ಕರ್ನಾಟಕ

karnataka

ETV Bharat / bharat

ಪನಾಮ ಪೇಪರ್ಸ್​​ ಲೀಕ್​..20 ಸಾವಿರ ಕೋಟಿ ಅಘೋಷಿತ ಆಸ್ತಿ ಪತ್ತೆ.. 153 ಕೋಟಿ ರೂ ತೆರಿಗೆ ಸಂಗ್ರಹ

ಪನಾಮ ಪೇಪರ್ಸ್​ ಲೀಕ್​​ ಆದ ಸಂಬಂಧ ನಡೆಸಿದ ತನಿಖೆ ವೇಳೆ ಅಘೋಷಿತ 20,353 ಕೋಟಿ ರೂ. ಆಸ್ತಿಯನ್ನ ಪತ್ತೆ ಹಚ್ಚಲಾಗಿದೆ. ಸುಮಾರು 930 ಸಂಸ್ಥೆಗಳು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿರುವ ಬಗ್ಗೆ ತನಿಖೆ ವೇಳೆ ಪತ್ತೆ ಹಚ್ಚಲಾಗಿದೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್​ ಚೌಧರಿ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. ಅಘೋಷಿತ ಆಸ್ತಿ ಪತ್ತೆ ಹಚ್ಚಿ ಅವರಿಂದ ಸುಮಾರು 153 ಕೋಟಿ ರೂ. ತೆರಿಗೆ ವಸೂಲು ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ.

undisclosed-credits-amounting-to-rs-20353-crores
ಪನಾಮಾ ಪೇಪರ್ಸ್​​ ಲೀಕ್​.. 20 ಸಾವಿರ ಕೋಟಿ ಅಘೋಷಿತ ಆಸ್ತಿ ಪತ್ತೆ.

By

Published : Dec 7, 2021, 9:21 PM IST

ನವದೆಹಲಿ: ಪನಾಮಾ ಪೇಪರ್ಸ್​, ಪ್ಯಾರಡೈಸ್ ಪೇಪರ್ಸ್ ಮತ್ತು ಪಂಡೋರಾ ಪೇಪರ್ಸ್​ಗಳು ಲೀಕ್​ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ತನಿಖಾ ಸಂಸ್ಥೆಗಳು ಇನ್ವೆಷ್ಟಿಗೇಷನ್​ ಮಾಡಿ ಅಪಾರ ಪ್ರಮಾಣದ ಆಸ್ತಿಯನ್ನು ಪತ್ತೆ ಹಚ್ಚಿವೆ. 2021ರ ಫಾಲೋ ಅಪ್ ತನಿಖೆಯಲ್ಲಿ 930 ಭಾರತೀಯ ಸಂಸ್ಥೆ ಅಥವಾ ವ್ಯಕ್ತಿಗಳ 20,353 ಕೋಟಿ ಅಘೋಷಿತ ಆಸ್ತಿಯನ್ನು ಪತ್ತೆ ಹಚ್ಚಿವೆ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಬಿಜೆಪಿ ಸಂಸದ ಸುಶೀಲ್ ಕುಮಾರ್ ಮೋದಿ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಹಣಕಾಸು ಖಾತೆ ರಾಜ್ಯ ಸಚಿವರು, ಪೇಪರ್ಸ್​ಗಳಲ್ಲಿ ಲೀಕ್​ ಆದ ಮಾಹಿತಿ ಆಧರಿಸಿ ನಡೆಸಿದ ತನಿಖೆಯಿಂದಾಗಿ ಒಟ್ಟಾರೆ 20 ಸಾವಿರ ಕೋಟಿ ಅಘೋಷಿತ ಆಸ್ತಿ ಪತ್ತೆ ಹಚ್ಚಲಾಗಿದೆ. ಅಷ್ಟೇ ಅಲ್ಲ ಇಂತಹ ಆಸ್ತಿಗಳಿಗೆ ಸಂಬಂಧಿಸಿದಂತೆ 153.88 ಕೋಟಿ ರೂ. ತೆರಿಗೆ ಸಂಗ್ರಹಿಸಲಾಗಿದೆ.

ಇದನ್ನೂ ಓದಿ: ಪಂಡೋರಾ ಪೇಪರ್ಸ್ ಪ್ರಕರಣದಲ್ಲಿ ಸಿಲುಕಿದ ವಸುಂಧರಾ ರಾಜೇ ಸೊಸೆ ನಿಹಾರಿಕಾ ರಾಜೇ!

ಆದಾಯ ತೆರಿಗೆ ಕಾಯಿದೆ, 1961 ಮತ್ತು ಕಪ್ಪುಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿ) ನಿಬಂಧನೆಗಳನ್ನು ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ಆದಾಯ ತೆರಿಗೆ ಇಲಾಖೆಯು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಹೇಳಿಕೆ ಸ್ಪಷ್ಟಪಡಿಸಿದ್ದಾರೆ.

"ಪನಾಮ ಮತ್ತು ಪ್ಯಾರಡೈಸ್ ಪೇಪರ್ ಸೋರಿಕೆಯ 52 ಪ್ರಕರಣಗಳಲ್ಲಿ, ಕಪ್ಪುಹಣ (ಬಹಿರಂಗಪಡಿಸದ ವಿದೇಶಿ ಆದಾಯ ಮತ್ತು ಆಸ್ತಿಗಳು) ತಡೆ ಕಾಯ್ದೆ ಅಡಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ತೆರಿಗೆ ಕಾಯ್ದೆ 2015 ರ ಅನ್ವಯ ಅವರಿಂದ ತೆರಿಗೆ ವಸೂಲಿ ಮಾಡಲಾಗಿದೆ ಹಾಗೂ ಕಾನೂನು ಕ್ರಮ ಜಾರಿ ಮಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದು, 130 ಪ್ರಕರಣಗಳಲ್ಲಿ ವಿಚಾರಣೆ ನಡೆಯುತ್ತಿದೆ ಎಂದೂ ಹೇಳಿದ್ದಾರೆ.

ABOUT THE AUTHOR

...view details